ಕೋಲಾರ

ಮಹಿಳೆ ಸರ ಅಪಹರಿಸಿ ಸಿಕ್ಕಿಬಿದ್ದ ಚೋರ

Published On :

ಕೋಲಾರ: ನಗರದ ಹಳೆ ಬಡಾವಣೆ ಸಮೀಪ ಹೆಚ್ಚು ಸರಗಳ್ಳತನ ನಡೆಯುತ್ತಿದ್ದು ಕಳ್ಳರು ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದಾರೆ.
ಬುಧವಾರ ಬೆಳಗ್ಗೆ ನಗರದ ಹೊಸ ಬಡಾವಣೆಯ ನಿವಾಸಿ ಜಯಲಕ್ಷ್ಮೀ ಎಂಬುವರು ಬಿ.ಎಸ್.ಎನ್.ಎಲ್ ಕಚೇರಿಗೆ ಹೋಗುತ್ತಿದ್ದಾಗ ಯುವಕನೊಬ್ಬ ಹಿಂಬಾಲಿಸಿಕೊಂಡು ಬಂದು ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ. ಮಹಿಳೆ ಕೂಗು ಕೇಳಿ ಅದೇ ಬಡಾವಣೆಯ ನಿವಾಸಿ ಅನುರಾಗ್ ಮಂಜುನಾಥ್ ಎಂಬುವರು ಆರೋಪಿಯನ್ನು ಹಿಡಿಯಲು ಹರ ಸಾಹಸ ಮಾಡಿದ್ದಾರೆ. ಕಳ್ಳ ತಪ್ಪಿಸಿಕೊಳ್ಳಲು ಗಲ್ಲಿ ಗಲ್ಲಿ ಅಲೆದಾಡಿ ಕಡೆಗೆ ಕಠಾರಿ ಪಾಳ್ಯದ ಬಳಿ ಜನರಿಗೆ ಸಿಕ್ಕಿಬಿದ್ದು ಧರ್ಮದೇಟು ಸಹ ತಿಂದಿದ್ದಾನೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತಪ್ಪಿಸಿಕೊಳ್ಳುವ ಯತ್ನದಲ್ಲಿ ಅಪಹರಿಸಿದ್ದ ಸುಮಾರು 70 ಸಾವಿರ ರು. ಬೆಲೆ ಚಿನ್ನದ ಸರವನ್ನು ಇಟ್ಟಿಗೆ ಗೂಡಿನ ಬಳಿ ಎಸೆದಿದ್ದ. ಸಾರ್ವಜನಿಕರೊಬ್ಬರಿಗೆ ಸಿಕ್ಕು ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಭೋವಿ ಕಾಲೋನಿಯ ವಿಜಯಕುಮಾರ್ ಆರೋಪಿ. ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.