ಕೋಲಾರ

ಕಾರು ಡಿಕ್ಕಿ: 16 ಕ್ಕೂ ಹೆಚ್ಚು ಕುರಿಗಳು ಸಾವು

Published On :

ಚಿಕ್ಕಬಳ್ಳಾಪುರ: ಅತಿ ವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದ ಪರಿಣಾಮ 16 ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ದುರ್ಘಟನೆ ನಗರದ ಹೊರ ವಲಯದಲ್ಲಿರುವ ಚಿತ್ರಾವತಿ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ತಾಲೂಕಿನ ಮಂಚನಬಲೆ ಗ್ರಾಮದ ರೈತ ಮಹಿಳೆ ಮುನಿಯಮ್ಮರವರು ಕುರಿ ಸಾಕಾಣೆ ಮಾಡಿ ಜೀವನವನ್ನು ಸಾಗಿಸುತ್ತಿದ್ದು ಬೇರೆ ಬೇರೆ ಕಡೆ ಕುರಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಭಾನುವಾರ ಚಿತ್ರಾವತಿ ಬಳಿ ರಾಷ್ಟ್ರೀಯ ಹೆದ್ದಾರಿ 7 ರ ಬದಿಯಲ್ಲಿ ಸಾಗುತ್ತಿದ್ದಾಗ ಒಂದು ಕುರಿ ರಸ್ತೆಯನ್ನು ದಾಟಲು ಹೋಗಿದ್ದು ಇತರೆ ಕುರಿಗಳು ಅದನ್ನು ಹಿಂಬಾಲಿಸಿವೆ.
ಈ ಸಂದರ್ಭದಲ್ಲಿ ಕುರಿಗಳನ್ನು ರಸ್ತೆಯಿಂದ ಹೊರಗಡೆಗೆ ಓಡಿಸಲು ಯತ್ನಿಸುತ್ತಿದ್ದಾಗ ವೇಗವಾಗಿ ಬಂದ ಫಾರ್ಚುನ್ ಕಾರು ನಿಯಂತ್ರಣಕ್ಕೆ ಬಾರದೇ ಕುರಿಗಳ ಹಿಂಡಿನ ಮೇಲೆ ಹರಿದಿದೆ. ಇದರಿಂದ 16 ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟು ಅನೇಕ ಕುರಿಗಳು ಗಾಯಗೊಂಡಿವೆ. ಅದೃಷ್ಟವಶಾತ್ ಅಪಘಾತದಿಂದ ಮುನಿಯಮ್ಮ ಪಾರಾಗಿದ್ದಾಳೆ. ಈ ನಡುವೆ ಚೆನ್ನಾಗಿ ಪೋಷಣೆ ಮಾಡಿ ಕುರಿಗಳ ಮಾರಾಟದಿಂದ ಒಳ್ಳೆಯ ಆದಾಯವನ್ನು ನಿರೀಕ್ಷಿಸಿದ್ದ ಮುನಿಯಮ್ಮ ಅಘಾತಗೊಂಡು ಕಣ್ಣೀರು ಸುರಿಸಿದ್ದು ಕಾರಿನ ಮಾಲೀಕರಿಗೂ ಮತ್ತು ಮುನಿಯಮ್ಮ, ಸ್ಥಳೀಯರ ನಡುವೆ ವಾಗ್ವಾದ ನಡೆಯಿತು. ಸಾವನ್ನಪ್ಪಿದ್ದ ಕುರಿಗಳಿಂದ ನಷ್ಟವುಂಟಾಗದಂತೆ ಹಣವನ್ನು ನೀಡುವವರೆಗೂ ಕಾರನ್ನು ಮುಂದೆ ಸಂಚರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಹಣಕ್ಕೆ ಒತ್ತಾಯಿಸಲಾಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.