ಯುವಕರ ಎಚ್ಚರ ವಿವೇಕಾನಂದ ರಥಯಾತ್ರೆ ಗುರಿ'
ಬಾಗೇಪಲ್ಲಿ: ಕುಂಭಕರ್ಣನಂತೆ ನಿದ್ರಾವ್ಯಸ್ಥೆಯಲ್ಲಿಯಲ್ಲಿರುವಂಥ ಜಗತ್ತಿನ ಯುವಕರನ್ನು ಬಡಿದ್ದೆಬ್ಬಿಸುವುದೇ ವಿವೇಕಾನಂದರ ರಥ ಯಾತ್ರೆಯ ಮೂಲ ಉದ್ದೇಶವಾಗಿದೆ ಎಂದು ಬೆಂಗಳೂರಿನ ರಾಮಕೃಷ್ಣ ಮಠದ ತ್ಯಾಗೀಶ್ವರಾನಂದ ಸ್ವಾಮೀಜಿ ತಿಳಿಸಿದರು.
ಸ್ವಾಮಿ ವಿವೇಕಾನಂದರ 150 ನೇ ವರ್ಷಾಚರಣೆಯ ಅಂಗವಾಗಿ ಪಟ್ಟಣದ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ ರಥಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ನಿಲ್ಲಿದಿರಿ ಎಂದು ವಿಶ್ವಕ್ಕೆ ಸಾರಿದ ಮಾಹಾನ್ಪುರುಷ ಸಂತ ಸ್ವಾಮಿ ವಿವೇಕಾನಂದರವರ ಸಂದೇಶ ಇಂದಿನ ಯುವ ಪೀಳಿಗೆಗೆ ತುಂಬಾ ಅವಶ್ಯಕತೆಯಿದೆ ಎಂದರು.
ಪ್ರತಿಯೊಬ್ಬ ಯುವಕರಲ್ಲಿನ ಪ್ರತಿಭೆಯನ್ನು ಗುರುತಿಸಿ ಅದನ್ನು ಬೆಳಕಿಗೆ ತಂದಾಗ ಅವರ ಭವಿಷ್ಯವೂ ಉಜ್ವಲವಾಗುವುದರ ಜೊತೆಗೆ ದೇಶದ ಭವಿಷ್ಯವೂ ಉತ್ತಮಗೊಳ್ಳುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದರು.
ಸ್ವಾಮಿ ವಿವೇಕಾನಂದರು ಆದ್ಯಾತ್ಮಿಕವಲ್ಲದೆ ಜಗತ್ತಿನ ಯುವಜನತೆಗೆ ಕ್ರಾಂತಿಕಾರಕ ಸಂದೇಶಗಳನ್ನು ನೀಡುವ ಮೂಲಕ ನಿದ್ದೆಗೆ ಜಾರಿದ್ದ ಯುವ ಜನತೆಯನ್ನು ಎಬ್ಬಿಸುವಂತಹ ಕೆಲಸವನ್ನು ಮಾಡಿದ್ದಾರೆ. ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ನೋಡಿದರೆ ಒಂದು ರೀತಿಯಲ್ಲಿ ಚೈತನ್ಯ ಬರುತ್ತೆ, ಇನ್ನೂ ಅವರ ವಿಚಾರವನ್ನು ಅರಿತರೆ ಇನ್ನಷ್ಟು ಚೈತನ್ಯ ತುಂಬುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದ ಅವರು, ಸ್ವಾಮಿ ವಿವೇಕಾನಂದರ ಜೀವನದ ಆದರ್ಶಗಳನ್ನು ಯುವ ಪೀಳಿಗೆಗೆ ನೀಡಬೇಕಾದಂತಹ ಗುರುತರ ಜವಾಬ್ದಾರಿ ನಮ್ಮ ನಿಮ್ಮಲ್ಲರ ಮೇಲೆ ಇದೆ ಎಂದರು.
ಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತಗಳನ್ನು ಇಂದಿನ ಯುವಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ರಥ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಸಂಬಂಧವಾಗಿ ರಾಜ್ಯದಲ್ಲಿ ಈಗಾಗಲೇ 30 ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಗ್ರಾಮಗಳಿಗೂ ಈ ರಥ ಯಾತ್ರೆಯನ್ನು ನಡೆಸುವುದಾಗಿ ತಿಳಿಸಿದರು. ತಹಸೀಲ್ದಾರ್ ಪದ್ಮ ಮಾತನಾಡಿದರು. ಸ್ವಾಮಿ ವಿವೇಕಾನಂದರ ರಥ ಶ್ರೀ ರಾಘವೇಂದ್ರ ಮಠದಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಸಂಚರಿಸಿತು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ರಾಮಕಣಷ್ಣ ವಿವೇಕಾನಂದ ಮಠದ ಪೂರ್ಣಾನಂದಜೀ ಮಹಾರಾಜ್, ಕೈವಾರದ ರಾಮಕೃಷ್ಣ ಧ್ಯಾನ ಮಂದಿರದ ಶಿವ ಸ್ವರೂಪಾನಂದ ಮಹರಾಜ್, ಸವಾಮಿ ಸೌಖ್ಯಾನಂದಜೀ ಮಹಾರಾಜ್, ವಕೀಲರಾದ ಎ.ಜಿ. ಸುಧಾಕರ್, ಎಸ್.ವಿ. ಕೃಷ್ಣಮೂರ್ತಿ, ಪ್ರಿಯದರ್ಶಿನಿ ಕಾಲೇಜಿನ ಪ್ರಾಂಶುಪಾಲ ಅನಿಲ್, ಉಪ ತಹಸೀಲ್ದಾರ್ ಮುನಿರಾಮಯ್ಯ, ನ್ಯಾಷನಲ್ ಕಾಲೇಜಿನ ಕನ್ನಡ ಪ್ರೊ. ರಾಮಯ್ಯ, ಆರ್.ಎಸ್.ಎಸ್. ಮುಖಂಡ ನಂಜುಂಡರಾವ್, ಕೈವಾರಮಯ್ಯ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

