ಕೋಲಾರ

ಗ್ರಾಮಲೆಕ್ಕಿಗನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ

Published On :

ಕುಣಿಗಲ್: ಮೃತಪಟ್ಟ ಸಣ್ಣಹಿಡುವಳಿದಾರರ ಬೆಳೆ ಪರಿಹಾರ ಹಣವನ್ನು, ಸುಳ್ಳು ದಾಖಲೆ ನೀಡಿ ಲಪಟಾಯಿಸಿದ್ದ, ಗ್ರಾಮಲೆಕ್ಕಿಗನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ನಿರೀಕ್ಷಕರು ಸೂಚಿಸಿದ ಘಟನೆ ಸೋಮವಾರ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ನಡೆಯಿತು.
ಪಟ್ಟಣದ ಕಂದಾಯಭವನದಲ್ಲಿ ಲೋಕಾಯುಕ್ತ ನಿರೀಕ್ಷಕ ಗೌತಮ್, ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ, ಕಾಮನಹಳ್ಳಿ ಗ್ರಾಮದ ಭೀಮರಾವ್ ಎಂಬುವವರು ಸಲ್ಲಿಸಿದ ಅಹವಾಲು ಪರಿಶಿಲಿಸಲಾಗಿ, ಸದರಿ ಗ್ರಾಮದ ಗ್ರಾಮಲೆಕ್ಕಿನ ದಯಾನಂದ್, ಭೀಮರಾವ್ ಅವರ ತಾಯಿಯ ಹೆಸರಲ್ಲಿ ಬೆಳೆವಿಮೆ ಪರಿಹಾರ ಹಣ ನೀಡಲಾಗಿದೆ ಎಂದು ಡಿಸೆಂಬರ್ 2012ರಲ್ಲೆ ದಾಖಲೆ ನೀಡಿದ್ದು, ಸದರಿ ಹಣವನ್ನು ಫಲಾನುಭವಿಯೆ ಪಡೆದಿದ್ದಾರೆಂದು ಹೆಬ್ಬೆಟ್ಟಿನ ಗುರುತಿರುವ ಸ್ವೀಕೃತಿ ಪತ್ರ ದಾಖಲಿಸಿದ್ದರು. ಆದರೆ, ಫಲಾನುಭವಿ ನವೆಂಬರ್ ಮಾಹೆಯಲ್ಲಿ ಮೃತಪಟ್ಟಿರುವ ಬಗ್ಗೆ ದಾಖಲೆ ಸಮೇತ ದೂರು ನೀಡಿದ ಮೇರೆಗೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸದರಿ ಗ್ರಾಮಲೆಕ್ಕಿಗರ ವಿರುದ್ಧ ಕ್ರಿಮಿನಲ್ ಮೊಕದಮೆ ಹೂಡುವಂತೆ ಕುಣಿಗಲ್ ಪೊಲೀಸರಿಗೆ ಸೂಚಿಸಿದರು.
ಕೂಡಲೇ ಪಾವತಿಸಿ: ಜನನಿ ಸುರಕ್ಷಾ ಯೋಜನೆಯಡಿಯಲ್ಲಿ ಪಟ್ಟಣದ ಸಕಾರಿ ಆಸ್ಪತ್ರೆಯಿಂದ ಖಾಸಗಿಯಾಗಿ ಔಷಧ ಖರೀದಿಗೆ ಜೈಲಕ್ಷ್ಮೀ ಮೆಡಿಕಲ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಪ್ರತಿತಿಂಗಳ ಔಷಧಿ ಬಿಲ್‌ಗಳನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಪಾವತಿಸಬೇಕಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಬಿಲ್ ನೀಡದೆ.
ಸತಾಯಿಸುತ್ತಿರುವ ಬಗ್ಗೆ ಜಗದೀಶ್ ಎಂಬಾತ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ವಿರುದ್ಧ ದೂರು ಸಲ್ಲಿಸಿದರು. ಸಭೆಯಲ್ಲಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶೇಖರನ್ ಬಿಲ್ ಪಾವತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಕೂಡಲೆ ಪಾವತಿಸುವಂತೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.