ಟೆಂಪೊ ಉರುಳಿ 13 ಮಹಿಳೆಯರಿಗೆ ಗಾಯ, ಕರವೇ ಪ್ರತಿಭಟನೆ
ಕ.ಪ್ರ.ವಾರ್ತೆ , ಮಾಲೂರು , ಜೂ. 29
ಅತಿ ವೇಗವಾಗಿ ಬಂದ ಟೆಂಪೊವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದ ಪರಿಣಾಮ ಟೆಂಪೊದಲ್ಲಿದ್ದ 15 ಜನರಲ್ಲಿ 13 ಮಹಿಳಾ ಕೂಲಿ ಕಾರ್ಮಿಕರು ತೀವ್ರ ಗಾಯಗೊಂಡ ಘಟನೆ ಇಲ್ಲಿನ ಬೆಂಗಳೂರು ರಸ್ತೆಯ ಯಶವಂತಪುರ ಪ್ಲಾಟೇಷನ್ ಬಳಿ ಶನಿವಾರ ಸಂಜೆ ನಡೆದಿದೆ.
ತೀವ್ರವಾಗಿ ಗಾಯಗೊಂಡಿರುವ ಅಕ್ಕಯ್ಯಮ್ಮ, ಕವಿತಾ, ತಿಮ್ಮಕ್ಕ, ರಾಣಿ, ಶಾರದಮ್ಮ, ಶಿವಮ್ಮ, ಲಕ್ಷ್ಮಿ, ಸಾದಮ್ಮ, ಜ್ಯೋತಿ, ವೆಂಕಟೇಶಮ್ಮ, ಲಕ್ಷ್ಮಮ್ಮ, ವೆಂಕಮ್ಮರವರನ್ನು ಪ್ರಥಮ ಚಿಕಿತ್ಸೆ ನಂತರ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರೆಲ್ಲ 18 ರಿಂದ 45 ರ ಅಸುಪಾಸಿನ ವಯಸ್ಸಿನವರಾಗಿದ್ದು, ಎಲ್ಲರೂ ತಾಲೂಕಿನ ಬೆಂಡಶೆಟ್ಟಿಹಳ್ಳಿ ಗ್ರಾಮದವರು.
ಹೊಸಕೋಟೆ ಸಮೀಪ ಕೊತ್ತಂಬರಿ ಸೊಪ್ಪನ್ನು ಕೀಳಲು ಬೆಳಗ್ಗೆ ಹೋಗಿದ ಈ ಎಲ್ಲ ಕೂಲಿ ಕಾರ್ಮಿಕರು ಸಂಜೆ ವೇಳೆಗೆ ಮಧುರೈಗೆ ಕಳುಹಿಸಬೇಕಾಗಿದ್ದ ಕೊತ್ತಂಬರಿ ಸೂಪ್ಪಿನ ಲೋಡ್‌ನೊಂದಿಗೆ ಟೆಂಪೊದಲ್ಲಿ ಬರುತ್ತಿದ್ದರು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರವೇ ಪ್ರತಿಭಟನೆ: ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆತರಬೇಕಾದರೆ ಟ್ರಾಫಿಕ್ ಜಾಮ್‌ನಿಂದ ಅರ್ಧ ಗಂಟೆ ತಡವಾಯಿತಲ್ಲದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಇದ್ದ ಏಕೈಕ ವೈದ್ಯರಿಂದ ಪ್ರಥಮ ಚಿಕಿತ್ಸೆ ನೀಡಲು ವಿಳಂಬವಾಯಿತು. ಬಳಿಕ ಗಾಯಾಳುಗಳನ್ನು ಕೋಲಾರದ ಆಸ್ಪತ್ರೆಗೆ ಸಾಗಿಸಬೇಕಾಯಿತು.
ಸಂಚಾರಿ ಅವ್ಯವಸ್ಥೆ ಹಾಗೂ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಗಳನ್ನು ಪ್ರತಿಭಟಿಸಿದ ಕರವೇ(ನಾರಾಯಣಗೌಡ ಬಣ)ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ರಸ್ತೆ ತಡೆ ನಡೆಸಿದರು.
ಇಲ್ಲಿನ ಮಾರಿಕಾಂಭ ಮಹಾದ್ವಾರದಿಂದ ಆಸ್ಪತ್ರೆವರೆಗೆ ರಸ್ತೆಯ ಎರಡು ಬದಿಯಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸುವ ಜತೆಯಲ್ಲಿ ರಸ್ತೆ ಬದಿ ಅಂಗಡಿಗಳ ಒತ್ತುವರಿಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದರೂ ಪೊಲೀಸರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆಪಾದಿಸಿದ ಕರವೇ ಕಾರ್ಯಕರ್ತರು ಹೆಚ್ಚು ಸಂಖ್ಯೆಯಲ್ಲಿ ಗಾಯಾಳುಗಳು ಬಂದರೆ ಸೂಕ್ತ ವ್ಯವಸ್ಥೆ ಇರದ ಬಗ್ಗೆ ಸರ್ಕಾರಿ ವೈದ್ಯರನ್ನು ಸಹ ತರಾಟೆ ತೆಗೆದುಕೊಂಡರು.
ಸುಗುಮ ಸಂಚಾರ ಕಲ್ಪಿಸುವ ಜತೆಯಲ್ಲಿ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ ಕಲ್ಪಿಸಲು ಸಂಬಂಧ ಪಟ್ಟ ಅಧಿಕಾರಿಗಳೊಡನೆ ಮಾತನಾಡುವುದಾಗಿ ಸ್ಥಳದಲ್ಲಿದ್ದ ಇನ್ಸ್‌ಪೆಕ್ಟರ್ ವೆಂಕಟೇಶ್ ತಿಳಿಸಿದ ಮೇಲೆ ಪ್ರತಿಭಟನೆ ಕೈ ಬಿಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

