ವರ್ತೂರ್ ಬಣದಿಂದ ಅಪಹರಣ: ಚಂಗೋಲಿ ಆರೋಪ
ಕೋಲಾರ: ಸಮಾಜ ಸೇವೆಗಾಗಿ ಕೋಲಾರಕ್ಕೆ ಬಂದ ವರ್ತೂರ್ ಪ್ರಕಾಶ್ ಅವರನ್ನು ಕಳೆದ ಚುನಾವಣೆಯಲ್ಲಿ ಬೆಂಬಲಿಸಿದ ತಮಗೆ ಈಗ ತಪ್ಪಿನ ಅರಿವಾಗಿದೆ ಎಂದು ನಗರಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಚಂಗೋಲಿ ನಾರಾಯಣಸ್ವಾಮಿ ತಿಳಿಸಿದರು.
ಅವರು ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ತಾವು ಕಾಂಗ್ರೆಸ್ನಿಂದ ವಾರ್ಡ್ 5ರಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದೆ, ಪಕ್ಷದಿಂದ ಟಿಕೆಟ್ ಸಹ ಘೋಷಣೆ ಮಾಡಲಾಗಿತ್ತು. ಆದರೆ, ಸಚಿವ ವರ್ತೂರ್ ಹಾಗೂ ಇವರ ಬಣಕ್ಕೆ ಸೇರಿದವರು ನನ್ನನ್ನು ಫೆ.23 ರಂದು ಬೆಳಿಗ್ಗೆ 11.30ಕ್ಕೆ ಅಪಹರಿಸಿ ನಾಮಪತ್ರ ಸಲ್ಲಿಸದಂತೆ ಮಾಡಿದ್ದಾರೆಂದು ಆರೋಪಿಸಿದರು.
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸೋಮಶೇಖರ್, ದರ್ಶನ್, ಪ್ರಜ್ವಲ್, ಅಶ್ವಿನಿ ಇನ್ನಿತರರು ನನ್ನನ್ನು ಅಪಹರಣ, ಮಾಡಿದ್ದು ಇದಕ್ಕೆ ಸಚಿವರು ಕುಮ್ಮಕ್ಕು ನೀಡಿದ್ದಾರೆಂದು ದೂರಿದರು.
ಸಚಿವ ವರ್ತೂರ್ ಮತ್ತೊಮ್ಮೆ ಶಾಸಕರಾದರೆ ಕೋಲಾರ ಕ್ಷೇತ್ರವನ್ನು ಮಿನಿ ಬಿಹಾರ ಮಾಡುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ನಗರಸಭೆ ಚುನಾವಣೆಯಲ್ಲಿ ವರ್ತೂರು ಬಣದ ಅಭ್ಯರ್ಥಿಗಳಿಗೆ ಮತ ಹಾಕಬಾರದೆಂದು ಜನತೆಯನ್ನು ಕೋರಿದರು.
ಫೆ.23 ರಂದು ತಾವು ಕಾಂಗ್ರೆಸ್ನಿಂದ ಸ್ಪರ್ಧಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾಗ ಸಚಿವ ವರ್ತೂರು ತಮ್ಮನ್ನು ಸಂಪರ್ಕಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಾಂತಿಸಾಗರ್ ಹೊಟೇಲ್ಗೆ ಬರುವಂತೆ ತಿಳಿಸಿದರು. ಅದರಂತೆ ತಾವು ಅಲ್ಲಿಗೆ ಹೋದಾಗ ಸಚಿವರು ನನಗೆ 5ನೇ ವಾರ್ಡ್ನಿಂದ ಸ್ಪರ್ಧಿಸಬಾರದು, ನಿನಗೆ ಹಣ ಮತ್ತು ಕಾರು ಕೊಡುವುದಾಗಿ ಆಮಿಷ ಒಡ್ಡಿದ್ದರು. ಇದಕ್ಕೆ ತಾವು ಒಪ್ಪದೆ ವಾಪಸ್ ಬಂದ ನಂತರ ಅವರ ಕಡೆಯವರು ಅಪಹರಣ ಮಾಡಿ ನಾಮಪತ್ರ ಹಾಕದಂತೆ ದೌರ್ಜನ್ಯ ಎಸಗಿದ್ದಾರೆಂದು ದೂರಿದರು.
ಘಟನೆ ಬಗ್ಗೆ ತಾವು ನಗರಠಾಣೆಗೆ ದೂರು ನೀಡಲು ಹೋದಾಗ ಪಿ.ಎಸ್ಣ.ಐ ಅಂಬರೀಶ್ ಅವರು ದೂರು ದಾಖಲು ಮಾಡಿಕೊಳ್ಳದೆ ಕಾಲ ಹರಣ ಮಾಡಿದರು, ಸಚಿವರ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸಸ್ಹಿರಿಯ ಮುಖಂಡರು ಒತ್ತಾಯಿಸಿದ ನಂತರ ದೂರು ದಾಖಲಿಸಿದ್ದಾರೆ. ಇದಕ್ಕಾಗಿ ಪ್ರತಿಯಾಗಿ ವರ್ತೂರು ಬಣದ ಅಭ್ಯರ್ಥಿ ಸೋಮಶೇಖರ್ ತಮ್ಮ ಅತ್ತಿಗೆಯವರನ್ನು ನನ್ನ ವಿರುದ್ಧ ಛೂಬಿಟ್ಟು ಅಪಹರಣ ಮಾಡಿದ್ದಾರೆಂದು ಸುಳ್ಳು ದೂರು ನೀಡಿದ್ದು ತಾವು ನ್ಯಾಯಾಲಯದಲ್ಲಿ ಜಾಮೀನು ಪಡೆದಿರುವುದಾಗಿ ತಿಳಿಸಿದರು.
ತಮ್ಮ ಅಪಹರಣಕ್ಕೆ ಸಚಿವ ವರ್ತೂರು ಮತ್ತು ಸೋಮಶೇಖರ್ ಕಾರಣರಾಗಿದ್ದು, ಇಂತಹವರನ್ನು ಸೋಲಿಸಲು ಜನತೆ ಮುಂದಾಗಬೇಕು ಎಂದು ಮನವಿ ಮಾಡಿದರು.
4ನೇ ವಾರ್ಡಿನ ಅಭ್ಯರ್ಥಿ ಬೀರೇಶ್ವರಿ,28 ನೇ ವಾರ್ಡಿನ ಜಯರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಮುಖಂಡರಾದ ಅಬ್ದುಲ್ ಖಯ್ಯೂಂ, ಜಯದೇವ್, ಕುಮಾರ್,ಅಂಚೆ ಅಶ್ವತ್ಥ್, ಗುಪ್ತಾ, ರಮೇಶ್, ವೆಂಕಟಪತಿ, ರವಿ, ಮಹಮದ್ ಅಕ್ರಂ ಸುದ್ದಿಗೋಷ್ಠಿಯಲ್ಲಿ ಇದ್ದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲ್ ಕುಮಾರ್ ಸಹ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ನೀಡಿ, 5ನೇ ವಾರ್ಡಿನ ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

