'ಭಿನ್ನಮತ ಬಿಡದಿದ್ದರೆ ಮೂರನೇ ವ್ಯಕ್ತಿಗೆ ಲಾಭ'
ಕ.ಪ್ರ ವಾರ್ತೆ ್ಣ ಕೋಲಾರ ್ಣ ಮಾ. 19
ನಮ್ಮಲ್ಲಿ ಭಿನ್ನಮತ ಸೃಷ್ಟಿಸಿ ಲಾಭ ಪಡೆಯಲು ಮೂರನೇ ವ್ಯಕ್ತಿ ಹುನ್ನಾರ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ವಿರೋಧಿಗಳು ಮೇಲುಗೈ ಸಾಧಿಸಲು ಅವಕಾಶ ನೀಡಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರ್ ಪ್ರಕಾಶ್ ತಮ್ಮ ಬಣದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ವಿವಿಧ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಎಲ್ಲರ ಮನೆಯಲ್ಲಿ ಇರುವಂತೆ ನಮ್ಮಲ್ಲೂ ಸಣ್ಣ- ಪುಟ್ಟ ಸಮಸ್ಯೆಗಳು ಇದ್ದರೂ ಅವುಗಳನ್ನು ದೊಡ್ಡದು ಮಾಡಿ ಮೂರನೇ ವ್ಯಕ್ತಿ ಲಾಭ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡದೆ ಏನೇ ಸಮಸ್ಯೆ, ಭಿನ್ನಮತವಿದ್ದರೂ ಮುಕ್ತವಾಗಿ ಚರ್ಚಿಸಿ ತಾವೇ ಬಗೆಹರಿಸಿಕೊಳ್ಳುವುವುದು ಸೂಕ್ತವೆಂದರು. ಕಳೆದ 15 ವರ್ಷದಿಂದ ನಡೆಯದ ಅಭಿವೃದ್ಧಿ ಕೆಲಸಗಳು ಕೇವಲ 5 ವರ್ಷದಲ್ಲಿ ನಡೆದಿದೆ. ಜನತೆಯ ಆಶೀರ್ವಾದದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿವೆ. ತಮ್ಮ ಬಣದಲ್ಲಿನ ವೈಮನಸ್ಯ ಬಳಸಿಕೊಂಡು ಕೆಲವರು ಇತ್ತೀಚೆಗೆ ನಡೆದ ನಗರಸಭಾ ಚುನಾವಣೆ ಗೆಲವು ಸಾಧಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಮ್ಮ ಬಣದ ಪ್ರತಿಯೊಬ್ಬ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿಯ ಜತೆಗೆ ತಾವು ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಗಮನ ನೀಡಬೇಕೆಂದರು.
ನನ್ನ ಅಧಿಕಾರಾವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳನ್ನು ಪ್ರತಿ ಮನೆಗೂ ತಲುಪಿಸುವ ಕೆಲಸವನ್ನು ಮುಖಂಡರು ಮತ್ತು ಕಾರ್ಯಕರ್ತರು ಮಾಡಬೇಕು. ಕೆಲವು ಲೋಪ- ದೋಷಗಳಿಂದ ನಗರಸಭೆ ಕೈ ತಪ್ಪಿದ್ದು, ಗ್ರಾಮೀಣ ಭಾಗದಲ್ಲಿ ಇಂತಹ ತಪ್ಪುಗಳು ಆಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದರು.
ಕಾಮಗಾರಿಗೆ ಚಾಲನೆ: ದೊಡ್ಡ ಅಯ್ಯೂರುನಿಂದ ಎನ್‌ಎಚ್ 4 ರಸ್ತೆಗೆ ವ್ಹಾಯಾ ಖಾಜಿಕಲ್ಲಹಳ್ಳಿ ಮೂಲಕ ಹಾದು ಹೋಗುವ ರಸ್ತೆಗೆ 1.42 ಕೋಟಿ, ಟೇಕಲ್ ಮುಖ್ಯ ರಸ್ತೆಯಿಂದ ಮುದುವತ್ತಿ ವ್ಹಾಯಾ ನೆರ್ನಹಳ್ಳಿ, ದಂಡಿಗಾನಹಳ್ಳಿ, ವಕ್ಕಲೇರಿ, ಬಂಗಾರಪೇಟೆ ರಸ್ತೆ ಅಭಿವೃದ್ಧಿಯನ್ನು 69 ಲಕ್ಷ, ಎನ್‌ಎಚ್ 4 ರಸ್ತೆಯಿಂದ ಚಲುವನಹಳ್ಳಿ ರಸ್ತೆ ಅಭಿವೃದ್ಧಿಗೆ 65 ಲಕ್ಷ, ಬೆಳಮಾರನಹಳ್ಳಿ ಮುಖ್ಯ ರಸ್ತೆಯಿಂದ ತೋರಣಕಂಬದಹಳ್ಳಿ, ದಿನ್ನೆಹೊಸಹಳ್ಳಿ ವ್ಹಾಯಾ ಸೊಣ್ಣೇನಹಳ್ಳಿವರೆಗೆ ರಸ್ತೆ ಅಭಿವೃದ್ಧಿಗೆ 1.54 ಕೋಟಿ, ಚಿಕ್ಕಬಳ್ಳಾಪುರ ಮುಖ್ಯರಸ್ತೆಯಿಂದ ಕುರಗಲ್ ಗ್ರಾಮದ ರಸ್ತೆ ಅಭಿವೃದ್ಧಿಗೆ 55.50 ಲಕ್ಷ, ಕ್ಯಾಲನೂರು ಗ್ರಾಮದಿಂದ ಕಡಗಟ್ಟೂರು ಗ್ರಾಮದವರೆಗೆ ರಸ್ತೆ ಅಭಿವೃದ್ಧಿಗೆ 1.7 ಕೋಟಿ, ಕಲ್ಕೆರೆ ಗ್ರಾಮದಿಂದ ದೊಡ್ಡವಲ್ಲಬ್ಬಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಗೆ 41 ಲಕ್ಷ ವೆಚ್ಚದ ಡಾಂಬರು ರಸ್ತೆ ಕಾಮಗಾರಿಗಳು ಮತ್ತು ಬೆಟ್ಟಹೊಸಪುರದಲ್ಲಿ 5 ಲಕ್ಷ, ಪೆಮ್ಮಶೆಟ್ಟಿಹಳ್ಳಿಯಲ್ಲಿ 10 ಲಕ್ಷ, ಚೌಡದೇನಹಳ್ಳಿಯಲ್ಲಿ 5 ಲಕ್ಷ, ದೊಡ್ಡವಲ್ಲಬ್ಬಿಯಲ್ಲಿ 5 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು. ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಪ್ರಕಾಶ್, ಜಿಪಂ ಸದಸ್ಯ ಅಮರನಾಥ್, ತಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥಗೌಡ, ಕ್ಯಾಲನೂರು ಮುನ್ನಾ, ಮೂರ್ತಿ, ರಾಜಣ್ಣ, ಬೆಟ್ಟಹೊಸಪುರ ಶ್ರೀನಿವಾಸ್, ದೇವರಾಜ್, ಒಡೆಯರ್, ಕೆಇಬಿ ಚಂದ್ರು, ಶ್ರೀನಿವಾಸ್, ಮಲ್ಲೇಶ್, ತಮ್ಮಣ್ಣ, ಕೃಷ್ಣಯ್ಯ, ರಾಮಚಂದ್ರ, ರಾಜಣ್ಣ, ಶಂಕರ್, ಎಲ್. ನಾಗರಾಜ್, ನಗರಸಭೆ ಸದಸ್ಯ ಮಂಜುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

