3 ತಿಂಗಳಾದರೂ ಸಿಗದ ಪರಿಹಾರ ಧನ
ಕ.ಪ್ರ ವಾರ್ತೆ ್ಣ ಬಂಗಾರಪೇಟೆ, ್ಣ ಮಾ.21
ಕಾಡಾನೆಗಳ ದಾಳಿಗೆ ಸಿಲುಕಿ ಅಪಾರ ಪ್ರಮಾಣದಲ್ಲಿ ರೈತರ ಬೆಳೆ ನಷ್ಟವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ 3 ತಿಂಗಳಾದರೂ ಇದುವರೆಗೂ ಯಾವುದೇ ಪರಿಹಾರ ಹಣವನ್ನು ಸಂತ್ರಸ್ತರಿಗೆ ವಿತರಿಸದೆ ಇರುವುದು ರೈತರಲ್ಲಿ ಅನುಮಾನ ಮೂಡಿಸುವಂತಾಗಿದೆ.
ಕಳೆದ ಮೂರು ತಿಂಗಳ ಹಿಂದೆ ತಮಿಳುನಾಡಿನ ಕೃಷ್ಣಗಿರಿ ಅರಣ್ಯದಿಂದ ಆಹಾರ ಹುಡುಕಿಕೊಂಡು ತಾಲೂಕಿನ ಕಾಮಸಮುದ್ರ ಹೋಬಳಿಯ ಬಲಮಂದೆ, ಕನಮನಹಳ್ಳಿ, ಭೀಮಗಾನಹಳ್ಳಿ, ಕದರಿನತ್ತ, ತೊಪ್ಪನಹಳ್ಳಿ, ಮುಷ್ಟ್ರಹಳ್ಳಿ, ಗುಟ್ಟೂರು ಸೇರಿದಂತೆ ಇತರೆ ಗಡಿ ಗ್ರಾಮಗಳಿಗೆ ಸುಮಾರು 50ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ದಾಳಿ ಮಾಡಿ ಬರಗಾಲದಲ್ಲಿಯೂ ರೈತರು ಕಷ್ಟಪಟ್ಟು ಬೆಳೆದಿದ್ದ ಅಪಾ ಪ್ರಮಾಣದ ಟಮೇಟೋ,ರಾಗಿ,ಭತ್ತ,ಪಪ್ಪಾಯ,ಬಾಳೆ ತೋಟ ಸೇರಿದಂತೆ ಇತರೇ ಬೆಳೆಗಳ ತೋಟಗಳಿಗೆ ಆನೆಗಳು ಹಿಂಡಾಗಿ ನುಗ್ಗಿ ನಾಶ ಮಾಡಿತ್ತು. ಅಲ್ಲದೆ ಆನೆಗಳನ್ನು ಓಡಿಸಲು ಹೋಗಿದ್ದ ಒಬ್ಬ ರೈತ ಸೇರಿದಂತೆ ನಾಲ್ವರನ್ನು ಬಲಿ ತಗೆದುಕೊಂಡಿತ್ತು.
ಸುಮಾರು ಮೂರು ತಿಂಗಳ ಕಾಲ ಆನೆಗಳು ಕಾಮಸಮುದ್ರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲೇ ಬೀಡು ಬಿಟ್ಟಿತ್ತು,ನಂತರ ಪಕ್ಕದ ಆಂಧ್ರಪ್ರದೇಶಕ್ಕೆ ಸೇರುವ ಗುಡಿಪಳ್ಳಿಗೂ ಹೋಗಿ ಅಲ್ಲಿಯೂ ಒಬ್ಬ ಕುರಿ ಕಾಯುವ ವೃದ್ದನನ್ನು ಬಲಿ ತಗೆದುಕೊಂಡು, ಬೇತಮಂಗಲ ಹೋಬಳಿಗೂ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರಲ್ಲಿ ಆತಂಕದ ಕಂದಾಯ ಮೂಡಿ ಕತ್ತಲಾಗುತ್ತಿದ್ದಂತೆ ಗ್ರಾಮಸ್ಥರು ತಮ್ಮ ಮನೆಗಳನ್ನು ಸೇರುತ್ತಿದ್ದರು. ಈ ಹಿಂದೆ ಸಹ ತಮಿಳುನಾಡಿನಿಂದ ಆನೆಗಳ ಹಿಂಡು ಆಗಮಿಸಿ ಆಗಲೂ ಅಪಾರ ಪ್ರಮಾಣದಲ್ಲಿ ಬೆಳೆಗಳನ್ನು ನಷ್ಟ ಉಂಟು ಮಾಡಿತ್ತು.
ಅರಣ್ಯ ಇಲಾಖೆ ಅಂದಾಜಿನ ಪ್ರಕಾರವೇ ಸುಮಾರು 30 ಲಕ್ಷದಷ್ಟು ಬೆಳೆಗಳಿಗೆ ಹಾನಿಯಾಗಿದೆ,ಅಂದು ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಆನೆಗಳಿಂದ ನಷ್ಟಕ್ಕೊಳಗಾದ ರೈತರಿಂದ ಮನವಿ ಪಡೆದು ಮೊದಲು ಆನೆಗಳ ಹಿಂಡನ್ನು ಗಡಿ ದಾಟಿಸಿದ ಬಳಿಕ ಎಲ್ಲ ರೈತರಿಗೂ ಇಲಾಖೆಯಿಂದ ನಷ್ಟ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು. ಆನೆಗಳು ಗಡಿ ದಾಟಿ ತಿಂಗಳಾಗುತ್ತಿವೆಯಾದರೂ ಇಲಾಖೆ ಮಾತ್ರ ರೈತರಿಗೆ ನೀಡಿದ್ದ ಭರವಸೆಯಂತೆ ನಡೆದುಕೊಂಡಿಲ್ಲ ಎಂದು ರೈತರು ಕೆಂಗಣ್ಣಿಗೆ ಇಲಾಖೆ ಗುರಿಯಾಗಿದೆ. ಇಂದೋ ನಾಳೆನೋ ನಷ್ಟಪರಿಹಾರದ ಹಣ ಬರುವುದೆಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎದುರು ನೋಡುತ್ತಿದ್ದಾರೆ.
ಈ ಬಗ್ಗೆ ರೇಂಜರ್ ಚಂದ್ರಶೇಖರ್ ರೆಡ್ಡಿಯವರನ್ನು ಕನ್ನಡ ಪ್ರಭ ಸಂಪರ್ಕಿಸಿದಾಗ ಆನೆ ದಾಳಿಗೆ ತುತ್ತಾಗಿ ನಷ್ಟಕ್ಕೊಳಗಾದ ರೈತರಿಗೆ ಇಲಾಖೆವತಿಯಿಂದ ಪರಿಹಾರ ನೀಡುವ ಕಾರ್ಯ ನಡೆಯುತ್ತಿದ್ದು, ಇದೇ ತಿಂಗಳ ಅಂತ್ಯದೊಳಗೆ ಎಲ್ಲಾ ರೈತರಿಗೆ ಪರಿಹಾರದ ಚೆಕ್ಗಳನ್ನು ವಿತರಿಸುವುದಾಗಿ ತಿಳಿಸಿ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

