ಕುರಿ ಮೈತೊಳೆಯಲು ಹೋದ ಅತ್ತೆ, ಸೊಸೆ ನೀರುಪಾಲು
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ, ಮಾ.21
ಗ್ರಾಮದ ಸಮೀಪದಲ್ಲಿರುವ ಚೆಕ್ ಡ್ಯಾಮ್ ನೀರಿನಲ್ಲಿ ತಮ್ಮ ಕುರಿಗಳನ್ನು ತೊಳೆದು ಅವುಗಳಿಗೆ ನೀರು ಕುಡಿಸಲು ಹೋಗಿದ್ದ ಅತ್ತೆ, ಸೊಸೆ ಇಬ್ಬರು ನೀರುಪಾಲಾಗಿದ್ದಾರೆ.
ತಾಲೂಕಿನ ಅಜ್ಜವಾರ ಗ್ರಾಮದ ಶಿವಪ್ಪ ಎಂಬುವವರ ಮಗಳು ಶೋಭಾ (21) ಮತ್ತು ಅಕ್ಕ ನಾರಾಯಣಮ್ಮ (48) ಮೃತಪಟ್ಟ ದುರ್ದೈವಿ ಮಹಿಳೆಯಾಗಿದ್ದಾರೆ.
ಗುರುವಾರ ಬೆಳಗ್ಗೆ ಇಬ್ಬರು ಗ್ರಾಮಕ್ಕೆ ಸಮೀಪ ಇರುವ ಚೆಕ್ಡ್ಯಾಮಿಗೆ ತಮ್ಮ ಕುರಿಗಳನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ಕುರಿಗಳಿಗೆ ನೀರು ಕುಡಿಸಿ, ತೊಳೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಶೋಭಾ ನೀರಿಗೆ ಜಾರಿ ಬಿದ್ದು ಒದ್ದಾಡಿದ್ದಾಳೆ. ಇದರಿಂದ ದಡದಲ್ಲಿದ್ದ ಅತ್ತೆ ನಾರಾಯಣಮ್ಮ ಸಹ ನೀರಿಗೆ ಇಳಿದು ರಕ್ಷಿಸಲು ಯತ್ನಿಸಿದ್ದು ಇಬ್ಬರು ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಕುರಿಗಳೊಂದಿಗೆ ಹೋದವರು ಬಂದಿಲ್ಲ ಎಂಬ ಅನುಮಾನ ಮನೆಯವರಿಗೆ ಕಾಡಿರುವುದರ ನಡುವೆ ಚೆಕ್ ಡ್ಯಾಮಿನಲ್ಲಿ ಇಬ್ಬರು ಶವಗಳು ತೇಲುತ್ತಿರುವುದನ್ನು ಕಂಡು ಕುರಿ ಕಾಯುವವರು ಗ್ರಾಮಕ್ಕೆ ತೆರಳಿ ವಿಷಯ ಮುಟ್ಟಿಸಿದ್ದಾರೆ. ಇದರಿಂದ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು ಮೃತರ ಕುಟುಂಬದವರ ಆಕಂದ್ರನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸರ್ಕಲ್ ಇನ್ಸೆಪೆಕ್ಟರ್ ಮಹೇಶ್ಕುಮಾರ್, ಗ್ರಾಮಾಂತರ ಠಾಣೆಯ ಸಬ್ಇನ್ಸೆಪೆಕ್ಟರ್ ನಯಾಜ್ ಭೇಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

