ಕೋಲಾರ

ಹಾಲಿನ ಕ್ಯಾನ್ ಕಳ್ಳತನ ಆರೋಪಿಗೆ ಥಳಿತ

Published On :

ಚಿಂತಾಮಣಿ: ಹಾಲು ಉತ್ಪಾದಕ ರೈತರ ಹಾಲಿನ ಕ್ಯಾನ್‌ಗಳನ್ನು ಕಳ್ಳತನ ಮಾಡಿ ಸಿಕ್ಕಿ ಬಿದ್ದ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕರು ಥಳಿಸಿ, ಎಚ್ಚರಿಸಿರುವ ಘಟನೆ ಪಟ್ಟಣದ ಆಜಾದ್ ಚೌಕ್‌ನಲ್ಲಿ ಗುರುವಾರ ಸಂಭವಿಸಿದೆ.
ತಾಲೂಕಿನ ಧನಮೆಟ್ಟೇನಹಳ್ಳಿ ಗ್ರಾಮದ ಮಂಜುನಾಥ ಎಂಬಾತನಿಗೆ ಸೇರಿದ ಹಾಲಿನ ಕ್ಯಾನ್‌ಗಳನ್ನು ನಗರದ ಎನ್.ಎನ್.ಟಿ ರಸ್ತೆಯ ನಿವಾಸಿ ನಾಗರಾಜ್ ಮದ್ಯಪಾನದ ವ್ಯಸನಕ್ಕೆ ಒಳಗಾಗಿ ಅಲ್ಲಲ್ಲಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಇಂದು ಬೆಳಿಗ್ಗೆ ಆಜಾದ್ ಚೌಕ್‌ನಲ್ಲಿ ಹಾಲು ಉತ್ಪಾದಕ ಮಂಜುನಾಥನಿಗೆ ಸೇರಿದ ಹಾಲು ಕ್ಯಾನುಗಳನ್ನು ಕಳ್ಳತನ ಮಾಡಿ ಮತ್ತೆ ಅದೇ ಕ್ಯಾನಗಳನ್ನು ಕಾಗತಿ ಗ್ರಾಮದ ಹಾಲು ಉತ್ಪಾದಕ ಸಂಜೀವ ಎಂಬಾತನಿಗೆ ಮಾರಾಟ ಮಾಡಿದ ಹತ್ತಿರದಲ್ಲೆ ಇದ್ದ ಹಾಲು ಉತ್ಪಾದಕರು ಸಾರ್ವಜನಿಕರು ಅನುಮಾನಗೊಂಡು ವಿಚಾರಿಸಿದಾಗ ಕಳ್ಳತನ ಮಾಡಿರುವುದಾಗಿ ತಿಳಿಸಿದ ಇದರಿಂದ ಸಾರ್ವಜನಿಕರು ರೊಚ್ಚಿಗೆದ್ದು ಹಿಡಿದು ಥಳಿಸಿ, ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.