'ಅಭಿವೃದ್ಧಿಗಾಗಿ ಕೆಜೆಪಿ ಬೆಂಬಲಿಸಿ'

Updated on: 

ಕ.ಪ್ರ.ವಾರ್ತೆ ್ಣ ಚಿಂತಾಮಣಿ ್ಣ ಮಾ.29
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಭಿವೃದ್ಧಿ ಕೆಲಸಗಳನ್ನು ಜನರು ಇಂದಿಗೂ ಮರೆಯದೆ ಮತ್ತೆ ಅವರನ್ನೆ ಮುಖ್ಯಮಂತ್ರಿ ಮಾಡಲು ಕೆಜೆಪಿಯನ್ನು ಬೆಂಬಲಿಸುತ್ತಿರುವುದಾಗಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಡಿ.ಆರ್. ಶಿವಕುಮಾರಗೌಡರು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಚಿಲಕಲನೇರ್ಪು ಹೋಬಳಿ ಏನಿಗದಲೆ ಮತ್ತು ಬುರುಡಗುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿ ಕೆ. ದೇವಗಾನಹಳ್ಳಿ, ಹುಲಿಬೆಲೆ, ಮಿಟ್ಟಹಳ್ಳಿ, ನಂದನವನ ಸೇರಿದಂತೆ ಇನ್ನೂ ಹಲವಾರು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮೂಲಕ ಬಿರುಸಿನ ಪ್ರಚಾರ ಮಾಡಿದರು.
 ನಂತರ ಡಿ.ಆರ್. ಶಿವಕುಮಾರಗೌಡ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡುತ್ತಾ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜನರು ಮೂಲ ಸಮಸ್ಯೆಗಳು ಎದುರಿಸುತ್ತಿದ್ದು, ಜನರು ಬದಲಾವಣೆ ಬಯಸುತ್ತಿರುವುದಾಗಿ ಈ ಬಾರಿ ಶಿಟ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಬಹುಮತ ಪಡೆದು ಜನರ ಸೇವೆ ಮಾಡುವುದು ಖಚಿತವೆಂದು ತಿಳಿಸಿದರು.
 ನಂತರ ಮಹಿಳೆಯರು ಶಿವಕುಮಾರಗೌಡರಿಗೆ ವಿವಿಧ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು. ಇದರಲ್ಲಿ ಮುಖ್ಯವಾದ ಸಮಸ್ಯೆಗಳು ಕುಡಿಯುವ ನೀರು, ವಸತಿ, ಸ್ವಚ್ಛತೆ ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳ ಬಗ್ಗೆ ಮನವಿ ಪತ್ರ ನೀಡಿದರು.
 ಈ ಸಂದರ್ಭದಲ್ಲಿ ಮುಖಂಡರಾದ ನಂದೀಶ್, ಆಂಜನಪ್ಪ, ಬಂಗಾರಬಾಬು,ಬಯ್ಯಮ್ಮ, ಅನಸೂಯಮ್ಮ, ನಾಗರತ್ನ, ವೆಂಕಟಮ್ಮ, ವೆಂಕಟರವಣಪ್ಪ, ಸುಜಾತಮ್ಮ, ರಾಮುಲಮ್ಮ, ಸರಸ್ವತಿ, ಪದ್ಮ, ಭಾಗ್ಯಮ್ಮ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com