'ಕುರ್ಚಿ, ಪೀಠ ಸರಿ ಮಾಡಬೇಕು'

Updated on: 

ಚಿಂತಾಮಣಿ: ರಾಜಕೀಯ ಕುರ್ಚಿ ಮತ್ತು ಮಠ ಪೀಠಗಳನ್ನು ಸರಿ ಮಾಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೆಂದು ನಿಡುಮಾಮಿಡಿ ಮಠದ  ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಪೆದ್ದೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನ್ಯಾಯಮೂರ್ತಿ ವಿ.ಗೋಪಾಲಗೌಡರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಣ ಬಲದಿಂದ ಶಾಸಕ ಅಥವಾ ಸಂಸದ ಆಗಲು ಸಾಧ್ಯ. ಆದರೆ, ಒಂದು ಪುಟ್ಟ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದು ದೆಹಲಿಯ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗುವುದು ವಿ.ಗೋಪಾಲಗೌಡರಂತಹ ವ್ಯಕ್ತಿಗಳ ಶ್ರಮದಿಂದ ಮಾತ್ರ ಸಾಧ್ಯವೆಂದು ನುಡಿದರು. ಸ್ವಾರ್ಥಕ್ಕಾಗಿ ದೇಶ ಹಾಳು ಮಾಡಲು ಮುಂದಾಗುತ್ತಿರುವ ಸಮಾಜ ಘಾತಕ ಶಕ್ತಿಗಳನ್ನು ದಮನ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಿನ ಮಹತ್ವದ ಪಾತ್ರ ಅಗತ್ಯವಿದೆ. ರಾಜಕೀಯ ಕುರ್ಚಿ ಮತ್ತು ಮಠ ಪೀಠಗಳನ್ನು ಸರಿಪಡಿಸಲು ಮುಂದಾದಾಗ ಮಾತ್ರ ನವ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com