ಶಿಕ್ಷಕರಿಗೆ ಸನ್ಮಾನ

Updated on: 

ಮಾಲೂರು: ಉತ್ತಮ ಸಮಾಜ ನಿರ್ಮಾಣಕ್ಕಾಗಿ  ಸೇವೆಗೈದ ಶಿಕ್ಷಕರನ್ನು ಸನ್ಮಾನಿಸುವುದು ಉತ್ತಮ ಸಂಪ್ರದಾಯ ಎಂದು ತಾಲೂಕು ಬೋವಿ ಸಮಾಜ ಅಧ್ಯಕ್ಷ ಹಾಗೂ ಬಿಜೆಪಿಯ ಹಿರಿಯ ಮುಖಂಡ ವಿ.ಹನುಮಪ್ಪ ಹೇಳಿದರು.ಅವರು ಪಟ್ಟಣದ ಭೋವಿ ಹಾಸ್ಟೆಲ್‌ನಲ್ಲಿ ಜನಾಂಗದ ನಿವೃತ್ತ ಶಿಕ್ಷಕರು ಹಾಗೂ ನೂತನವಾಗಿ ಆಯ್ಕೆಗೊಂಡ ಪುರಸಭೆ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರ ಎಂದರು.ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ವಿ.ಲೋಕೇಶ್ ಮಾತನಾಡಿದರು.ಉಪತಹಸೀಲ್ದಾರ್ ರಾಮಚಂದ್ರ, ಪುರಸಭೆ ಸದಸ್ಯ ಮಾಲಾದ್ರಿ  ಸದಸ್ಯ ರಾಮಮೂರ್ತಿ ಹಾಗೂ ವಕೀಲ ರಮೇಶ್‌ರನ್ನು ಸನ್ಮಾನಿಸಲಾಯಿತು. ಬಿಜೆಪಿ ಹಿರಿಯ ಸದಸ್ಯ ಸುಬ್ರಮಣ್ಯ ರೆಡ್ಡಿ,ರಾಜಾರಾಂ ಮಾತನಾಡಿದರು.ಶೀನಪ್ಪ, ಕೆ.ಸೋಮಶೇಖರ್,ಶ್ರೀನಿವಾಸ್, ರಮೇಶ್ ಇದ್ದರು.ಚೌಡಪ್ಪ ಸ್ವಾಗತಿಸಿದರು. ಮುನಿರಾಮಯ್ಯ  ನಿರೂಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com