ಕೋಲಾರ

ಕೆರೆ ಹೋಗುವ ದಾರಿ ತೆರವು ವಿವಾದಕ್ಕೆ ತೆರೆ

Published On :

ಟೇಕಲ್ ಲಕ್ಷ್ಮೀಶ್
ಟೇಕಲ್: ಸುಮಾರು 3 ವರ್ಷಗಳಿಂದ ಗೋಪಸಂದ್ರದಲ್ಲಿ ತಲೆದೋರಿರುವ ಕೆರೆ ಅಚ್ಚುಕಟ್ಟಿಗೆ ಹೋಗುವ ದಾರಿ ತೆರವು ವಿವಾದಕ್ಕೆ ಸಂಬಂಧಿಸಿದಂತೆ 7 ಗ್ರಾಮದ ಮುಖಂಡರು  4-5 ಬಾರಿ ನ್ಯಾಯ ಪಂಚಾಯ್ತಿ ರಾಜಿ ಸಂಧಾನ ಮಾಡಿ ಬಗೆಹರಿಯದ ಸಮಸ್ಯೆಯನ್ನು ಮಾಲೂರು ತಹಸೀಲ್ದಾರ್ ಡಾ. ಸುಧಾ ಅವರು ಮಂಗಳವಾರ ದಿನಪೂರ್ತಿ ಅದೇ ಗ್ರಾಮದಲ್ಲಿ ಮೊಕ್ಕಂ ಹೂಡಿ ಗ್ರಾಮಸ್ಥರ ನಡುವೆ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿದರು.
ಏನದು ವಿವಾದ: ಟೇಕಲ್ ಸಮೀಪದ ಗೋಪಸಂದ್ರ ಗ್ರಾಮದ ಜನತೆ ಸಮೀಪದ ಕಂಚುಗಾನಹಳ್ಳಿ ಕೆರೆ ಅಚ್ಚುಕಟ್ಟಿಗೆ ಹೋಗಬೇಕಾದರೆ 3 ಕಿ.ಮೀ ದೂರ ಸುತ್ತುವರೆದೆ ಹೋಗಬೇಕಾಗಿತ್ತು, ಈ ಅಚ್ಚುಕಟ್ಟು ಪ್ರದೇಶದಲ್ಲಿ ಗ್ರಾಮದ ಅನೇಕ ಜನರ ಹೊಲ ಗದ್ದೆಗಳು ಇಲ್ಲಿಯೇ ಇದ್ದು ಪ್ರತಿನಿತ್ಯ ದನಕರುಗಳನ್ನು ಅಷ್ಟು ದೂರ ಕರೆದೊಯ್ಯಬೇಕಾಗಿತ್ತು. ಆದರೆ ಈ ಸಂದರ್ಭದಲ್ಲಿ ಗ್ರಾಮದ ಹತ್ತಿರದ ರಸ್ತೆಯೊಂದು ಕಾಲುದಾರಿಯಂತಿದ್ದು ಅದನ್ನು ಸ್ವಲ್ಪಮಟ್ಟಿಗೆ ನೋಡಿದಾಗ ಅರ್ಧಭಾಗ ಸರ್ಕಾರಿ ಜಾಗ, ಇನ್ನು ಅರ್ಧಭಾಗ ಕೆಲವರ ಹೊಲಗದ್ದೆಗಳನ್ನು ಹಾದು ಹೋಗಬೇಕಾಗಿತ್ತು. ಆದರೂ ಸ್ವಲ್ಪ ದಿನದ ಮಟ್ಟಿಗೆ ಇದನ್ನು ಕೆಲವರು ತಮ್ಮ ಹೊಲಗದ್ದೆಗಳನ್ನು ಉಳಲು ಟ್ರ್ಯಾಕ್ಟರ್ ಮುಂತಾದ ವಾಹನಗಳನ್ನು ಈ ಮಾರ್ಗದಲ್ಲಿ ತೆಗೆದುಕೊಂಡು ಕೆಲಸ ನಿರ್ವಹಿಸಿದರು ಅದಕ್ಕೂ ತಕರಾರು ತೆಗೆದು ಆ ರಸ್ತೆಯನ್ನೆ ಮುಚ್ಚಲಾಯಿತು.
ರೆವಿನ್ಯೂ ಇಲಾಖೆ 2010 ರಲ್ಲಿ ಸರ್ವೆ ಮಾಡಿದಾಗ ಗ್ರಾಮದ ಮುಂಭಾಗದಲ್ಲಿಯೇ ದಾರಿ ಇರುವುದು ಗೊತ್ತಾಯಿತು. ಅಲ್ಲಿ ಅದೇ ವೆಂಕಟೇಶಪ್ಪ ಎಂಬುವರ ಜಾಗವಿದ್ದು ಆತನು ಮನೆಯೊಂದನ್ನು ಕಟ್ಟಿಬಿಟ್ಟಿದ್ದನು. ಆದರೆ ಅಂದಿನಿಂದ ಇಂದಿನವರೆಗೂ ನ್ಯಾಯ ಪಂಚಾಯ್ತಿಯಂತೆ ನಡೆಯುತ್ತಾ ಬಂತು ಅದ್ಯಾವುದು ತಿರ್ಮಾನವಾಗಲಿಲ್ಲ. ಈ ಬಗ್ಗೆ ಅಂದು ಸಾರ್ವಜನಿಕವಾಗಿ ದೂರು ಸಲ್ಲಿಸಲಾಗಿತ್ತು ಅದು ತನಿಖೆ ನಡೆದು ಮತ್ತೊಮ್ಮೆ ಮಂಗಳವಾರ ಸರ್ವೆ ಕಾರ್ಯ ನಡೆಸಲಾಯಿತು
ಸ್ಥಳಕ್ಕೆ ಬಂದ ತಹಶೀಲ್ದಾರ್ ಡಾ. ಸುಧಾ ಎಲ್ಲವನ್ನು ಒಮ್ಮೆ ಪರಿಶೀಲಿಸಿದರು ಹಾಗೂ ವೆಂಕಟೇಶಪ್ಪ ರಾತ್ರೋ ರಾತ್ರಿ ಮನೆ ಕಟ್ಟಿರುವುದು ಮನವರಿಕೆಯಾಯಿತು. ಈ ಸಂದರ್ಭದಲ್ಲಿ  ಮುಖಂಡರಲ್ಲಿಯೇ ಮಾತಿನ ಚಕಮಕಿ ಉಂಟಾಯಿತು.
ಗ್ರಾಮದ ಮುಖಂಡ ಗೋವಿಂದರಾಜರೆಡ್ಡಿ ತಮ್ಮ ಸಲಹೆಯೊಂದನ್ನು ನೀಡಿ, ಹತ್ತಿರದ ರಸ್ತೆಯೆಂದು ಓಡಾಡುತ್ತಿದ್ದ ಮಾರ್ಗವನ್ನು ತೆರವುಗೊಳಿಸಿಕೊಡಿ ಎಂದರು. ಈ ವೇಳೆ ಮಾಲೀಕರನ್ನು ಕರೆಸಿ ತಹಸೀಲ್ದಾರರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಸ್ಪರ ಮಾತುಕತೆ ನಡೆಸಿದರು. ಇದಕ್ಕೆ ಮಾಲೀಕರು ಒಪ್ಪಿಗೆ ನೀಡಿ ರಸ್ತೆಯನ್ನು ಜೆಸಿಬಿಗಳ ಮೂಲಕ ಕ್ಷಣಾರ್ಧದಲ್ಲಿ ಕೊರೆಸಲಾಯಿತು. ಅದರಂತೆ ಕಾಗದ ಪತ್ರಗಳನ್ನು ತರಿಸಿ ರಸ್ತೆಗಾಗಿ ಕೊಟ್ಟಿದ್ದ ಮಾಲೀಕರ ಬಳಿ ಬರೆದು ಸಹಿಯನ್ನು ಪಡೆದು ಟೇಕಲ್ ಗ್ರಾಪಂ ಪಿಡಿಒ ಅಂಬರೀಷ್ ಸುಪರ್ದಿಗೆ ನೀಡಲಾಯಿತು.  
ಮಾಸ್ತಿ ಪಿಎಸ್‌ಐ ಎಚ್.ಆರ್. ಸಿದ್ದಪ್ಪ, ಮಾಜಿ ಜಿ.ಪಂ. ಸದಸ್ಯ ರಾಜಣ್ಣ, ಮಾಜಿ ಗ್ರಾಪಂ ಅಧ್ಯಕ್ಷ ಎಸ್.ಜಿ. ರಾಮಮೂರ್ತಿಗೋಪಸಂದ್ರ ಗ್ರಾಮದ ವಕೀಲ ಲೋಕೇಶ್, ಗ್ರಾಪಂ ಸದಸ್ಯ ನಾರಾಯಣಸ್ವಾಮಿ, ಮುಖಂಡರಾದ ಗೋಪಸಂದ್ರದ ನಾಗರಾಜ್, ನಾರಾಯಣಸ್ವಾಮಿ, ಬಿ.ಜಿ. ಸತೀಶ್, ಉಪತಹಸೀಲ್ದಾರ್ ರವಿಶಂಕರ್, ರೆವಿನ್ಯೂ ಅಧಿಕಾರಿ ನಾರಾಯಣಾಚಾರ್, ಗ್ರಾಮ ಲೆಕ್ಕಿಗರಾದ ಶ್ರೀನಿವಾಸ್, ರಘು, ಚನ್ನಮಲ್ಲಯ್ಯ, ಶರತ್ ಮುಂತಾದವರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.