ಕೋಲಾರ

'ಕರ್ತವ್ಯದಲ್ಲಿ ಗಳಿಸುವ ಜನಮನ್ನಣೆ ಮುಖ್ಯ'

Published On :

ಗೌರಿಬಿದನೂರು: ಸರ್ಕಾರಿ ನೌಕರಿಯಲ್ಲಿ ವರ್ಗಾವಣೆ ಮತ್ತು ನಿವೃತ್ತಿ ಎರಡೂ ಸಾಮಾನ್ಯ. ಆದರೆ ಸೇವಾವಧಿಯಲ್ಲಿ ಎಷ್ಟರ ಮಟ್ಟಿಗೆ ಸೇವೆ ಸಲ್ಲಿಸಿ ಜನಮನ್ನಣೆ ಪಡೆದಿದ್ದೇವೆ ಎಂಬುದು ಮುಖ್ಯ ಎಂದು ಗ್ರಾಮಾಂತರ ಠಾಣೆ ನಿರ್ಗಮಿತ ಸಬ್‌ಇನ್ಸ್‌ಪೆಕ್ಟರ್ ಎಸ್.ಯಶ್ವಂತ್ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮಾಂತರ ಠಾಣೆಯಿಂದ  ವೇಮಗಲ್ ಪುರ ಪೊಲೀಸ್‌ಠಾಣೆಗೆ ವರ್ಗಾವಣೆಯಾದ ಸಂದರ್ಭದಲ್ಲಿ  ಪಟ್ಟಣದ ಆಚಾರ್ಯ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದೈಹಿಕ ಶಿಕ್ಷಕ ಎನ್.ನಾರಾಯಣಸ್ವಾಮಿ, ಕ್ರೀಡಾಪಟು ನವೀನ್ ಮತ್ತಿತರರು ಇದೆ ಸಂದರ್ಭದಲ್ಲಿ  ಮಾತನಾಡಿದರು.
ಎಸ್‌ಬಿಎಂ ಬ್ಯಾಂಕ್ ವ್ಯವಸ್ಥಾಪಕ ರಂಗನಾಥ್, ದಂತವೈದ್ಯ ಡಾ.ಕಿರಣ್, ಕೇಶವಮೂರ್ತಿ, ಕುಮಾರ್, ಪ್ರಭಾಕರ್, ಜಯಪ್ರಕಾಶ್, ಶಿವಾಜಿರಾವ್, ಗೋಪಾಲ್, ರಾಮು, ಗುಲ್ಲುಅಹಮದ್, ಚಂದ್ರು ಮುಂತಾದವರು ಹಾಜರಿದ್ದರು.
ಮುನಿರೆಡ್ಡಿಗೆ ಹಿರಿಯ ನಾಗರಿಕ ಪ್ರಶಸ್ತಿ ಪ್ರದಾನ
ಕೋಲಾರ: ಜಿಲ್ಲೆಯ ಹಿರಿಯ ರಂಗಭೂಮಿ ಕಲಾವಿದ ಮದ್ದೇರಿ ಪಿ. ಮುನಿರೆಡ್ಡಿ ಅವರಿಗೆ ಬೆಂಗಳೂರಿನಲ್ಲಿ ಮಂಗಳವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮುನಿರೆಡ್ಡಿಯವರಿಗೆ 1 ಲಕ್ಷ ನಗದು ಸಹಿತ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆ.ಆರ್.ಪುರಂ ಶಾಸಕ ಬೈರತಿ ಬಸವರಾಜ್, ವಿಕಲ ಚೇತನ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಜಯ ವಿಭವಸ್ವಾಮಿ, ಕಾರ್ಯದರ್ಶಿ ರಮೇಶ್ ಜಲಕಿ ಇದ್ದರು.
ಬಲಿಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕೋಲಾರ: ಯೋಗಿ ನಾರೇಯಣ ಬಲಿಜ ನೌಕರರ ಸೇವಾ ಟ್ರಸ್ಟ್ ವತಿಯಿಂದ ಜಿಲ್ಲಾ ಮಟ್ಟದ ಬಲಿಜ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಜನಾಂಗದ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಲ್ಲಿ ವಿಜೇತರಾದ ಜನಾಂಗದವರಿಗೆ ಸನ್ಮಾನ ಸಮಾರಂಭವನ್ನು ಅ.2 ರಂದು ಬುಧವಾರ ಬೆಳಗ್ಗೆ 11ಗಂಟೆಗೆ ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕಾಂಗ್ರೆಸ್‌ನ ವಿಕ್ಷಕ ಹಾಗೂ ಶಾಸಕ ಎಂ.ಆರ್. ಸೀತಾರಾಮ್ ಕಾರ್ಯಕ್ರಮ ಉದ್ಘಾಟಿಸಲಿದ್ದು,  ಯೋಗಿ ನಾರೇಯಣ ಬಲಿಜ ನೌಕರರ ಸೇವಾ ಟ್ರಸ್ಟ್ ಅಧ್ಯಕ್ಷ ರಾಜಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಟಿ. ವೇಣುಗೋಪಾಲ್, ಮಾಲೂರು ಮಾಜಿ ಶಾಸಕ ಎ. ನಾಗರಾಜ್, ಎ.ದೇವಪ್ರಸನ್ನ, ಎಸ್.ವಿ. ಪದ್ಮನಾಭ, ಕೇಶವಮೂರ್ತಿ ಇನ್ನಿತರರು ಭಾಗವಹಿಸಲಿದ್ದಾರೆ.
ಹಸುಗೂಸನ್ನು ನಾಲೆಗೆಸೆದ ತಾಯಿ
ಮಳವಳ್ಳಿ: ಮೂರು ತಿಂಗಳ ಹೆಣ್ಣು ಮಗುವೊಂದನ್ನ ಹೆತ್ತ ತಾಯಿಯೇ ನಾಲೆಗೆ ಎಸೆದು ಹತ್ಯಗೈದಿರುವ ಪ್ರಕರಣ ತಾಲೂಕಿನ ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಮಳವಳ್ಳಿ ಹೊರವಲಯದ ಮಾಗನೂರು ಗ್ರಾಮದ ವಾಸಿ ಶಿವಸ್ವಾಮಿ ಎಂಬವರ ಪತ್ನಿ ಜ್ಯೋತಿ ಎಂಬವರೇ ತನ್ನ ಕರುಳ ಬಳ್ಳಿಯನ್ನ ನಾಲೆಗೆ ಎಸೆದು ಹತ್ಯಗೈದ ಆರೋಪಿ ಎಂದು ಆರಕ್ಷಕ ಮೂಲಗಳಿಂದ ತಿಳಿದು ಬಂದಿದೆ. ಗ್ರಾಮದ ಶಿವಸ್ವಾಮಿ ಪತ್ನಿ ಸೋಮವಾರ ಈ ಕೃತ್ಯ ಎಸಗಿದ್ದು ಮಂಗಳವಾರ ಪೊಲೀಸರು ತಾಯಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.