ರೈತ ಸಂಘದ ವರ್ತನೆಗೆ ಶಾಸಕರ ಗರಂ
ಬಂಗಾರಪೇಟೆ: ಕಳೆದ ಶುಕ್ರವಾರ ರೈತ ಸಂಘದವರು ಶಾಸಕ ಎಸ್.ಎನ್. ನಾರಾಯಣಸ್ವಾಮಿ ವೈಯಿಕ್ತಿಕ ವಿಚಾರಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದಕ್ಕೆ ಕೆಂಡಾಮಂಡಲರಾಗಿರುವ ಶಾಸಕರು ಮಂಗಳವಾರ ಹುದುಕುಳ ಗ್ರಾಮದ ಬಳಿ ರೈತ ಸಂಘದ ಕೆಲ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.
ತಾನು ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದರುವ ಕಾಮಗಾರಿಗಳಿಗೆ ಮರು ಜೀವ ನೀಡಲಾಗಿದೆ. ಅಲ್ಲದೆ ಕ್ಷೇತ್ರ ಜನರ ಸಮಸ್ಯೆಗಳಿಗೆ ಸ್ವಂದಿಸುವ ಮೂಲಕ ಜನಪ್ರಿಯೆವಾಗುತ್ತಿರುವುದನ್ನು ಸಹಿಸಲಾಗದೆ ಕೆಲವರು ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡು ವರ್ತಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ.
ಈ ಬಗ್ಗೆ ಕೋಲಾರ ಶಾಸಕ ವರ್ತೂರು ಪ್ರಕಾಶ್ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ರೈತ ಸಂಘದವರನ್ನು ರೋಲ್ಕಾಲ್ ಮುಖಂಡರು ಎಂದು ಜರಿದಿದ್ದರೂ ಚಕಾರವೆತ್ತದೆ ನನ್ನ ಚಾರಿತ್ರ್ಯಕ್ಕೆ ದಕ್ಕೆ ಬರುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಶಾಸಕರಾಗಿ ಆಯ್ಕೆಯಾದ ನಾಲ್ಕು ತಿಂಗಳಲ್ಲಿ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯರಗೋಳ್ ಯೋಜನೆಗೆ ಮರು ಜೀವ ನೀಡಿಲಾಗಿದೆ. ಮಿನಿ ವಿಧಾನಸೌಧ ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಲಾಗಿದೆ.
ಕೆರೆಗಳಲ್ಲಿ ಹೂಳೆತ್ತುವ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಇಷ್ಟೆಲ್ಲಾ ಅಭಿವೃದ್ಧಿ ಕೆಸಲಗಳನ್ನು ಮಾಡುತ್ತಿದ್ದರೂ ಪ್ರತಿಭಟನೆ ಹಾಸ್ಯಸ್ಪದವಾಗಿದೆ ಇನ್ನಾದರೂ ರೈತರು ರೈತರ ಸಮಸ್ಯೆಗಳಿಗೆ ಹೋರಾಟ ಮಾಡುವುದನ್ನು ಕಲಿಯಲಿ ಎಂದು ಬುದ್ದಿವಾದ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

