ಟೇಕಲ್ ಶಾಲೆಯಲ್ಲಿ ಗಾಂಧಿ ಜಯಂತಿ
ಟೇಕಲ್: ಗಾಂಧೀಜಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಟೇಕಲ್ ತಾಪಂ ಸದಸ್ಯೆ ನಿರ್ಮಲಾ ಆಂಜಿನಪ್ಪ ತಿಳಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉರ್ದು ಶಾಲೆಗಳ ಆಶ್ರಯದಲ್ಲಿ ಲಕ್ಷ್ಮೀವರದರಾಜಸ್ವಾಮಿ ದೇವಸ್ಥಾನದ ಆವರಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗಾಂಧೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ದಿ.ವೆಂಕಟರಮಣಶೆಟ್ಟಿ ಜ್ಞಾಪಕಾರ್ಥವಾಗಿ ಟಿ.ಆರ್. ಪ್ರಭಾಕರ್ ಶೆಟ್ಟಿ ಮಕ್ಕಳಿಗೆ ಲೋಟ ವಿತರಿಸಿದರು. ರಾಮಕೃಷ್ಣಪ್ಪ ಮಕ್ಕಳಿಗೆ ತಟ್ಟೆ ನೀಡಿದರು. ಗಂಗಾಧರ್, ಶ್ರೀನಿವಾಸ್ ಗಾಂಧಿಜೀ ಬಗ್ಗೆ ತಿಳಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಿ.ಜಿ. ಮುನಿಶಾಮಿಗೌಡ, ಟೇಕಲ್ ಆಂಜಿನಪ್ಪ, ಎಸ್.ಜಿ. ರಾಮಮೂರ್ತಿ, ಸಿ. ವೆಂಕಟೇಶ್, ಶ್ರೀನಿವಾಸ್, ವಜೀರ್, ಯಲ್ಲಪ್ಪ ಹಾಜರಿದ್ದರು.
ಗಾಂಧೀಜಿ ಆದರ್ಶ ಪಾಲಿಸಬೇಕು
ಚಿಕ್ಕಬಳ್ಳಾಪುರ: ಮಹಾತ್ಮ ಗಾಂಧೀಜಿಯವರು ತಿಳಿಸಿದ ಮಾರ್ಗದಲ್ಲಿ ನಾವೆಲ್ಲರೂ ನಡೆದಾಗ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ವಿಶಾಲ್ ತಿಳಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ 145 ನೇ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧೀಜಿಯವರ ಆದರ್ಶ ಜೀವನವೇ ಸಮಾಜಕ್ಕೆ ಮಾರ್ಗದರ್ಶಕವಾದುದು ಎಂದರು. ಶಾಸಕ ಡಾ.ಕೆ. ಸುಧಾಕರ್ ಮಾತನಾಡಿ, ಸತ್ಯ ಮತ್ತು ಅಹಿಂಸೆಯೇ ಗಾಂಧೀಜಿಯವರ ಹೋರಾಟದ ಪ್ರಮುಖ ಅಸ್ತ್ರಗಳು. ಕೊನೆಗೆ ತಮ್ಮ ಅಹಿಂಸಾ ಮಾರ್ಗದಿಂದಲೇ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಎಂದೆಂದಿಗೂ ಅವರು ಯುವ ಜನಾಂಗಕ್ಕೆ ಸ್ಪೂರ್ತಿಯಾಗಿದ್ದಾರೆ ಎಂದರು. ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿರವರು ಒಂದೇ ವ್ಯಕ್ತಿತ್ವವನ್ನು ಹೊಂದಿದ್ದ ಮಹಾನ್ ವ್ಯಕ್ತಿಗಳು. ಇವರಿಬ್ಬರ ಜಯಂತಿ ಒಂದೇ ದಿನ ಬರುವುದು ವಿಶೇಷ ಎಂದರು. ಕಾರ್ಯಕ್ರಮಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಅಪರ ಜಿಲ್ಲಾಧಿಕಾರಿ ಸತ್ಯಭಾಮ, ಉಪ ವಿಭಾಗಾಧಿಕಾರಿ ಶಾಂತಲಾ, ಡಿವೈಎಸ್ಪಿ ದೇವಯ್ಯ, ತಹಸೀಲ್ದಾರ್ ನಟೇಶ್ ಇದ್ದರು.
ಶತಮಾನೋತ್ಸವ
ಕೆಜಿಎಫ್: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ಪ್ರಾರಂಭಗೊಂಡು 100 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕೆಜಿಎಫ್ನ ಎಸ್ಬಿಎಂ ಶಾಖೆಯಿಂದ ಸಂಭ್ರಮಾಚರಿಸಲಾಯಿತು. ಬ್ಯಾಂಕ್ ಮುಂಭಾಗ ಸರ್.ಎಂ. ವಿಶ್ವೇಶ್ವರಯ್ಯ ಅವರ ಭಾವ ಚಿತ್ರವನ್ನಿಟ್ಟು ಪುಷ್ಪ ಅರ್ಪಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಕೆಜಿಎಫ್ ಶಾಖೆಯ ವ್ಯವಸ್ಥಾಪಕ ಬಾಲಸುಬ್ರಮಣ್ಯಂ, ಕಾರ್ಯದರ್ಶಿ ಎನ್.ಆರ್. ಪುರುಷೋತ್ತಮ, ತ್ಯಾಗರಾಜನ್, ಬಿ.ಎಸ್. ಕುಮಾರ್, ಸಿಬ್ಬಂದಿ ರಾಜಣ್ಣ, ನಂದಗೋಪಾಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

