ಕೋಲಾರ

ಪಟ್ಟಣದ ವಿವಿಧೆಡೆ ಗಾಂಧಿ ಜಯಂತಿ

Published On :

ಬಂಗಾರಪೇಟೆ: ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳು ಮಹಾತ್ಮ ಗಾಂಧಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು.
ಕನ್ನಡ ಸಂಘದಿಂದ ಕುವೆಂಪು ವೃತ್ತದಲ್ಲಿ ಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗಾಂಧಿ ಬಗ್ಗೆ ನೆರೆದಿದ್ದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸೇರಿದಂತೆ ಗಣ್ಯರು ಗುಣಗಾನ ಮಾಡಿದರು. ಇದೇ ವೇಳೆ ಪಾರ್ಥಿಬನ್ ಪಟ್ಟಣದಿಂದ ಪಾಕಿಸ್ತಾನ ಗಡಿವರೆಗೂ ಬೈಕ್ನಲ್ಲಿ ಸಂಚರಿಸಿ ಭಾರತ ಮತ್ತು ಪಾಕ್ ನಡುವೆ ಸೌಹಾರ್ಧದ ಭಾಂದವ್ಯ ಮೂಡಿಸಲು ಪ್ರಯಾಣ ಬೆಳೆಸಿದರು. ಪುರಸಭೆಯಲ್ಲಿಯೂ ಗಾಂಧಿ ಜಯಂತಿಯನ್ನು ಸರಳವಾಗಿ ಆಚರಿಸಿದರೆ, ಪಟ್ಟಣದ ಗಾಂಧಿನಗರದ ನಿವಾಸಿಗರು ಗಾಂಧಿಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿ ಸಾರ್ವಜನಿಕರಿಗೆ ಸಿಹಿ ಹಂಚಿದರು. ಮುತ್ತಿನ ಪಲ್ಲಕಿಯನ್ನು ಗಾಂಧಿ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದರು. ಇಲ್ಲಿಯೂ ಅವರ ವ್ಯಕ್ತಿತ್ವದ ಬಗ್ಗೆ ಯುವಕರಿಗೆ ಅರಿವು ಮೂಡಿಸುವಂತೆ ಜಾಗೃತಿ ಮೂಡಿಸುವ ಭಾಷಣ ಗಣ್ಯರಿಂದ ನಡೆಯಿತು. ಕಾಂಗ್ರೆಸ್ ಭವನದಲ್ಲಿಯೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಸ್ಮರಣೆ ಮಾಡಲಾಯಿತು. ಎಲ್ಲಾ ಕಾರ್ಯಕ್ರಮದಲ್ಲಿಯೂ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಕ್ರಿಯವಾಗಿ ಭಾಗವಹಿಸಿದ್ದರು. ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ, ಕೆ.ಚಂದ್ರಾರೆಡ್ಡಿ, ರಂಗರಾಮಯ್ಯ, ಪ್ರಸಾದ್, ಮುರಳಿ, ಚಂದ್ರಶೇಖರಗೌಡ, ಕಸಾಪ ಅಧ್ಯಕ್ಷ ಆರ್. ಅಶ್ವಥ್, ಅಪ್ಪಯ್ಯಗೌಡ ಮತ್ತು ಎಲ್ಲಾ ಪುರಸಭೆ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.