ಬಲಿಜಿಗರು ಗುಂಪುಗಾರಿಕೆ ಬಿಡಬೇಕು
ಕೋಲಾರ: ಸಮುದಾಯಲ್ಲಿ ಒಗ್ಗಟ್ಟಿನ ಕೊರತೆ ಇದೆ. ಗುಂಪುಗಾರಿಕೆ ಬಿಟ್ಟು ಸಮುದಾಯ ಒಂದಾಗಿ ಸಮಾಜಕ್ಕೆ ನಮ್ಮ ಶಕ್ತಿ ತೋರಿಸಬೇಕು ಎಂದು ಶಾಸಕ ಎಂ.ಆರ್. ಸೀತಾರಾಂ ಹೇಳಿದರು.
ಶ್ರೀ ಯೋಗಿ ನಾರೇಯಣ ಬಲಿಜ ನೌಕರರ ಸೇವಾ ಟ್ರಸ್ಟ್ವತಿಯಿಂದ ಇಲ್ಲಿನ ಕೆಇಬಿ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬಲಿಜ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಮುದಾಯದ ಚುನಾಯಿತ ಜನಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮುದಾಯದಲ್ಲಿ ಉತ್ತಮ ಸ್ಥಾನದಲ್ಲಿರುವವರು ಸೇವಾ ಮನೋಭಾವ ಅಳವಡಿಸಿಕೊಳ್ಳಬೇಕು. ಸಹಾಯ ಪಡೆದವರು ಕೃತಜ್ಞತಾ ಮನೋಭಾವದಿಂದ ಸಮುದಾಯದಲ್ಲಿರುವ ಬಡವರನ್ನು ಗುರುತಿಸಿ ಸಹಾಯ ಮಾಡಿ ಋಣ ತೀರಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ನ್ಯೂ ಬಾಲ್ಡ್ವಿನ್ ವಿದ್ಯಾಸಂಸ್ಥೆಯ ಸಂಸ್ಥಾಪಕ ವೇಣುಗೋಪಾಲ್ ಮಾತನಾಡಿ, ನಿಸ್ವಾರ್ಥ ಸೇವೆ ಮಾಡುವ ಸೇವಾ ಟ್ರಸ್ಟ್ ಚಟುವಟಿಕೆ ಅಭಿನಂದನೀಯ. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪುರಸ್ಕರಿಸುವುದು ಒಳ್ಳೆಯ ಕೆಲಸ ಎಂದರು. ಬಲಿಜ ಸಮುದಾಯವನ್ನು 2ಎಯಿಂದ 3ಎಗೆ ಸೇರಿಸಿ ಅನ್ಯಾಯ ಮಾಡಿದ್ದರು. ಈ ಅವಧಿಯಲ್ಲಿ ಸಮುದಾಯಕ್ಕೆ ಉದ್ಯೋಗ ಸಿಗಲು ಕಷ್ಟವಾಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಶೈಕ್ಷಣಿಕ ಮೀಸಲಾತಿ ಸಿಕ್ಕಿತು ಎಂದು ಹೇಳಿದರು.
ಮಾಲೂರು ಕ್ಷೇತ್ರದಿಂದ ಮಾಜಿ ಶಾಸಕ ಎ. ನಾಗರಾಜು ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಜತೆ ಮಾತನಾಡಿದಾಗ ಸ್ಪಂದಿಸಲಿಲ್ಲ, ನಮ್ಮಲ್ಲಿ ಒಗ್ಗಟ್ಟಿಲ್ಲ ಎಂಬ ವಿಷಯ ಅವರಿಗೆ ಅರ್ಥವಾಗಿದೆ. ಬಲಹೀನತೆ ನಮ್ಮಲ್ಲೇ ಇದೆ ಎಂದರು. ಶ್ರೀ ಯೋಗಿನಾರೇಯಣ ಬಲಿಜ ನೌಕರರ ಸೇವಾ ಟ್ರಸ್ಟ್ ಅಧ್ಯಕ್ಷ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎ. ನಾಗರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಎ. ದೇವಪ್ರಕಾಶ್, ಡಿಡಿಪಿಐ ಎಸ್.,ವಿ. ಪದ್ಮನಾಭ್, ಶ್ರೀ ಯೋಗಿನಾರೇಯಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಾಮಾ ರಂಗಪ್ಪ, ಡಾ. ಲಕ್ಷ್ಮಯ್ಯ, ಬಲಿಜ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್. ರವೀಂದ್ರ ಕುಮಾರ್, ಆಶ್ರಯ ಸಮಿತಿ ಮಾಜಿ ಅಧ್ಯಕ್ಷ ಕೆ.ವಿ. ಸುರೇಶ್ ಕುಮಾರ್, ಬಿ.ಎಂ. ಚಂದ್ರಪ್ಪ, ಕೃಷ್ಣಮೂರ್ತಿ, ರಾಜೇಂದ್ರನ್ ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಭಾಗವತರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

