ಡುಂಢಿ ಕೃತಿಯ ಮರು ಮುದ್ರಣ ಇಲ್ಲ
ಕೋಲಾರ: ಡುಂಢಿ ಕೃತಿಯಲ್ಲಿ ವಿಶೇಷವೇನು ಇಲ್ಲ, ನನ್ನ ಕೃತಿ ನಿಷೇಧಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯ ಹೋರಾಟ ಮುಂದುವರೆದಿದೆ ಎಂದು ಕೃತಿಯ ಲೇಖಕ ಯೋಗೇಶ್ ಮಾಸ್ಟರ್ ತಿಳಿಸಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗುರುವಾರ ಕೋಲಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ತಮ್ಮ ಪುಸ್ತಕದ ಬಗ್ಗೆ ಚರ್ಚೆ ಆಗಬಹುದಿತ್ತು ಮಾಧ್ಯಮದ ಬಳಿ ಯಾರನ್ನೂ ಅವಹೇಳನ ಮಾಡುವ, ನೋವನ್ನುಂಟು ಮಾಡುವ ಉದ್ದೇಶ ನನಗಿಲ್ಲ. ಸಾಮರಸ್ಯ ಕಾಪಾಡುವುದೇ ನನ್ನ ಮುಖ್ಯ ಉದ್ದೇಶ ಎಂದರು. ಡುಂಢಿ ಪುಸ್ತಕದಲ್ಲಿ ಅಂಥ ವಿಶೇಷವೇನು ಇಲ್ಲ. ಎಷ್ಟೋ ಸಂಶೋಧನಾ ಕೃತಿಗಳು ಬಂದಿದ್ದು, ಇದನ್ನು ಸಣಜನಾತ್ಮಕವಾಗಿ, ಸಂವೇದನಾ ಶೀಲವಾಗಿ, ಭಾವನಾತ್ಮಕವಾಗಿ ಬರೆಯಲಾಗಿದೆ ಅಷ್ಟೆ. ಆದರೆ ಈ ರೀತಿ ವಿವಾದ ಉಟಾಗಿದ್ದು ಮಾತ್ರ ದುರಾದೃಷ್ಟಕರ ಎಂದರು. ಈ ಪುಸ್ತಕದ ವಿವಾದ ತನಗೆ ಆಶ್ಚರ್ಯವನ್ನು ಉಂಟು ಮಾಡಿದೆ. ಸುದ್ದಿಯ ಮೇಲೆ ಆಗಿರುವ ಸದ್ದು ಇದಾಗಿದೆ ಅಷ್ಟೇ ಎನ್ನಬಹುದು. ಈ ಪುಸ್ತಕದಲ್ಲಿ ಸಂಶೋಧನೆ ಮಾಡಿ ಬರೆದ ವಿಚಾರವಾಗಿದ್ದು ಇದರಲ್ಲಿ ಯಾವುದೇ ವಾದ-ಸಿದ್ಧಾಂತ ಮಂಡನೆಯಾಗಲಿ ಯಾವುದೂ ಇಲ್ಲ ಎಂದು ನುಡಿದರು.. ಡುಂಢಿ ಪುಸ್ತಕದಲ್ಲಿ ವೈಚಾರಿಕವಾಗಿ ಈ ಪುರಾಣಗಳನ್ನು ಅವಲೋಕಿಸುವ ಚಿಂತನೆ ನನ್ನದಾಗಿದೆ, ಇದುವರೆವಿಗೂ ಈ ಪುರಾಣಗಳನ್ನು ಸಾಂಕೇತಿಕವಾಗಿ ಹೇಳಲಾಗುತ್ತಿದೆ ಎಂಬುವುದು ನನ್ನ ನಂಬಿಕೆಯಾಗಿದ್ದು, ಇಲ್ಲಿ ಏನು ಹೇಳಲಾಗುತ್ತಿದೆ ಎಂಬ ಜಾಡನ್ನು ಹಿಡಿದು, ಒಗಟುಗಳನ್ನು ಒಡೆಯುವುದು ನನ್ನ ಉದ್ದೇಶದ ವಿಚಾರಧಾರೆಯಾಗಿತ್ತು ಎಂದರು.
ನಾನು ನಾಸ್ತಿಕನೂ ಅಲ್ಲ ಆಸ್ತಿಕನೂ ಅಲ್ಲ ನಾನೊಬ್ಬ ಐತಿಹಾಸಿಕ ವಿಚಾರಧಾರೆಯುಳ್ಳವನು ಹಾಗಾಗಿ ಈ ಪುರಾಣಗಳ ಮೂಲವನ್ನು ಇದರ ಹಿಂದಿನ ಅರ್ಥಗಳನ್ನು ಹುಡುಕುತ್ತಾ ಹೋದೆ ಅಷ್ಟೆ ಎಂದು ನುಡಿದರು.
ವಿವಾದಗಳು ನನಗೆ ಬೇಕಿಲ್ಲ ಇದರಿಂದ ಬಹಳ ದೂರ ಇರುವವನು ನಾನು, ಎಲ್ಲೋ ನನ್ನ ಪಾಡಿಗೆ ಇದ್ದ ನನ್ನನ್ನು ಬೇರೆ ಕೃತಿಗಳ ಮೂಲಕ ಪರಿಚಯವಾಗಿದ್ದೇನೆ. ಆದರೆ ಈ ರೀತಿಯ ವಿವಾದಕ್ಕೆ ತೆರೆ ಎಳೆಯುವುದಾಗಿ ಈ ಮೂಲಕ ಡುಂಢಿ ಪುಸ್ತಕ ಮರು ಮುದ್ರಣ ಸಂಪೂರ್ಣ ಕೈ ಬಿಡುವೆ. ಬೇರೆ ಕೃತಿಗಳು ಹೊರತರುವುದಿಲ್ಲ ಎಂದಲ್ಲ ನನ್ನ ಬಳಿ ಈಗಾಗಲೇ ಸುಮಾರು 160 ಕೃತಿಗಳು ಪ್ರಕಟಣೆಗೆ ಸಿದ್ಧವಾಗಿವೆ ಅವನ್ನು ನಿಧಾನವಾಗಿ ಒಂದೊಂದಾಗಿ ಹೊರತರುವೆ ಎಂದು ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

