ಉಪ ಲೋಕಾಯುಕ್ತರ ಭೇಟಿ, ಅಹವಾಲು ಸ್ವೀಕಾರ
ಬಂಗಾರಪೇಟೆ: ರಾಜ್ಯ ಉಪ ಲೋಕಾಯುಕ್ತ ಸುಭಾಷ್ ಅಡಿ ಅವರು ಮಂಗಳವಾರ ದಿಢೀರನೆ ಪಟ್ಟಣಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಸಾರ್ವಜನಿಕರಿಂದ ಇಲಾಖೆವಾರು ದೂರುಗಳನ್ನು ಪಡೆದು ಬುಧವಾರ ಕೋಲಾರದಲ್ಲಿ ಎಲ್ಲಾ ಅಧಿಕಾರಿಗಳ ಸಭೆಯನ್ನು ಕರೆದಿದ್ದು ಅಲ್ಲಿ ಅರ್ಜಿದಾರರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.
ಉಪ ಲೋಕಾಯುಕ್ತರು ಬರುವ ವಿಷಯವನ್ನು ಎಲ್ಲಾ ಅಧಿಕಾರಿಗಳ ಗಮನಕ್ಕೆ ಮೊದಲೇ ಬಂದಿದ್ದರಿಂದ ತಮ್ಮ ಇಲಾಖೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಂಡು ಅವರ ಆಗಮನಕ್ಕಾಗಿ ಕಾದು ಕುಳಿತಿದ್ದರು. ಆದರೆ ಉಪ ಲೋಕಾಯುಕ್ತರು ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಸರ್ಕಾರಿ ಆಸ್ಪತ್ರೆಗೆ ಮಾತ್ರ ಭೇಟಿ ನೀಡಿ ಅಲ್ಲಿ ರೋಗಿಗಳಿಗೆ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿದೆಯೋ ಇಲ್ಲವೋ ಎಂಬ ಬಗ್ಗೆ ಖುದ್ದು ರೋಗಿಗಳಿಂದ ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದು ಮುಂದೆ ಸಾಗಿದರು. ಉಪ ಲೋಕಾಯುಕ್ತರು ಬಂದ ವೇಗದಲ್ಲೆ ಮತ್ತೆ ಪಟ್ಟಣದಿಂದ ನಿರ್ಗಮಿಸಿದ್ದು ಮಾತ್ರ ಅಧಿಕಾರಿಗಳಿಗೆ ನೆಮ್ಮದಿಯಾಗಿ ಉಸಿರಾಡುವಂತಾಯಿತು.
ಸಾರ್ವಜನಿಕ ಆಸ್ಪತ್ರೆಯು 35 ಬೆಡ್ ಆಸ್ಪತ್ರೆಯಾಗಿದ್ದರೂ ಅಗತ್ಯಕ್ಕಿಂತಲೂ ವೈದ್ಯರ ಹಾಗೂ ಸಿಬ್ಬಂದಿ ಕೊರತೆಯಿರುವುದು ಉಪ ಲೋಕಾಯುಕ್ತರ ಗಮನಕ್ಕೆ ವೈದ್ಯರು ತಂದರು. ವೈದ್ಯರ ಹಾಗೂ ಸಿಬ್ಬಂದಿ ಹಾಜರಾತಿ ಪುಸಕ್ತವನ್ನು ಪರಿಶೀಲಿಸಿ ಎಲ್ಲಾ ವಾರ್ಡ್ಗಳಿಗೂ ಭೇಟಿ ನೀಡಿ ರೋಗಿಗಳಿಂದ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಸಾರ್ವಜನಿಕರು ಇದು ಹೆಸರಿಗೆ ಸರ್ಕಾರಿ ಆಸ್ಪತ್ರೆಯಾಗಿದೆ ಇಲ್ಲಿ ನಡೆಯುವುದೆಲ್ಲಾ ಖಾಸಗಿ ಆಸ್ಪತ್ರೆಯಂತೆ ಯಾವುದೇ ಸೌಲಭ್ಯಗಳಿಲ್ಲ ಔಷಧಿಗಳನ್ನು ಕೊಡುವುದಿಲ್ಲ ಹೊರಗಡೆ ಔಷದಿ ಅಂಗಡಿಗಳಲ್ಲಿ ತೆಗೆದುಕೊಳ್ಳಿ ಎಂದು ಚೀಟಿ ಬರೆದು ಕೊಡುವರು ಎಂಬ ಆರೋಪಕ್ಕೆ ಆಕ್ರೋಶಗೊಂಡು ಉಪ ಲೋಕಾಯುಕ್ತರು ಯಾಕೆ ರೀ ನಿಮ್ಮಲ್ಲಿ ಔಷಧಿಗಳು ಇಲ್ಲವೆ ಏಕೆ ಹೊರಗಡೆಗೆ ಚೀಟಿ ಕೊಡುವಿರಿ ನಿಮ್ಮಲ್ಲಿ ದಾಸ್ತಾನು ಇಲ್ಲದಿದ್ದರೆ ನೀವೆ ತಂದು ಕೊಡಬೇಕು ಎಂದು ಔಷದಾಲಯ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಉಪ ಲೋಕಾಯುಕ್ತ ಸುಭಾಷ್ ಅಡಿ ಅವರು ಪಟ್ಟಣದ ಬಹುತೇಕ ಇಲಾಖೆ ಮೇಲೆ ದೂರುಗಳ ಕೇಳಿ ಬಂದಿವೆ ಇವೆಕ್ಕೆಲ್ಲ ಬುಧವಾರ ಕೋಲಾರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಇತ್ಯರ್ಥಪಡಿಸಲಾಗುವುದು ಎಂದರಲ್ಲದೆ ಹದಗೆಟ್ಟಿರುವ ತಾಲೂಕು ಆಡಳಿತಕ್ಕೆ ಚುರುಕು ಮುಟ್ಟಿಸಿ ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಸಾರ್ವಜನಿಕರಿಗೆ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಪ್ರವಾಸ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

