ಮಳೆ; ಮನೆಗೆ ನುಗ್ಗಿದ ನೀರು
ಮುಳಬಾಗಲು: ಪಟ್ಟಣದ ನೇತಾಜಿ ನಗರದ ಸುಮಾರು 15 ಮನೆಗಳಿಗೆ ಸೋಮವಾರ ರಾತ್ರಿ ಸುರಿದ ಮಳೆಯ ಕಾರಣ ನೀರು ನುಗ್ಗಿದೆ. ನಾರಾಯಣಮ್ಮ, ಅಕ್ಕೆಮ್ಮ ವೆಂಕಟಮ್ಮ ಎಂಬುವರ ಮನೆಗಳಿಗೆ ಹೆಚ್ಚಿನ ಜಖಂ ಆಗಿದೆ ಎಂದು ದೂರು ನೀಡಲಾಗಿದೆ.
ಇಂದು ಲಲಿತಾ
ಸಹಸ್ರನಾಮಾರ್ಚನೆ
ಕೋಲಾರ: ನಗರದ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಅ.9 ರಂದು ಸಂಜೆ 6 ಗಂಟೆಗೆ ಪಿಸಿ ಬಡಾವಣೆಯ ಗಾಯತ್ರಿ ಮಂದಿರದಲ್ಲಿ ಲಲಿತಾ ಪಂಚಮಿ ಅಂಗವಾಗಿ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಜಿ. ರಾಮಪ್ಪ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಪ್ರ ಮಾತೆಯರು ಭಾಗವಹಿಸಬಹುದಾಗಿದ್ದು, ಪೂಜೆಗೆ ತಟ್ಟೆ, ಹಲಗಾರತಿ, ಪಂಚಪಾತ್ರೆ, ಉದ್ಧರಣೆ, ದೇವತಾ ಮೂರ್ತಿ ತಂದಲ್ಲಿ ಉಳಿದ ಪೂಜಾ ಸಾಮಗ್ರಿಗಳನ್ನು ಸಂಘದಿಂದ ನೀಡಲಾಗುವುದು ಎಂದು ತಿಳಿಸಿರುವ ಅವರು, 8 ವರ್ಷ ಮೇಲ್ಪಟ್ಟ ಬಾಲಕಿಯರು ಸಹಾ ಪೂಜೆಯಲ್ಲಿ ಭಾಗವಹಿಸಬಹುದೆಂದು ತಿಳಿಸಿದ್ದಾರೆ.
ಕುರುಬರ ಸಂಘಕ್ಕೆ ಆಯ್ಕೆ
ಕೋಲಾರ: ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾಗಿ ಆರ್.ವಿ. ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಆರ್. ಪಿಳ್ಳಪ್ಪರನ್ನು ನೇಮಿಸಲಾಗಿದೆ. ಶಾಸಕ ವರ್ತೂರು ಪ್ರಕಾಶ್ರ ಸಮ್ಮುಖದಲ್ಲಿ ಕನಕ ಮಂದಿರದಲ್ಲಿ ನಡೆದ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಪಿಳ್ಳಪ್ಪರನ್ನು ಕುರುಬರ ಸಂಘದ ಗೌರವಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಧುಸೂದನ್ ತಿಳಿಸಿದ್ದಾರೆ.
'ವಿದ್ಯಾರ್ಥಿಗಳು ದೇಶ ಸೇವೆಗೆ ಮುಂದಾಗಿ'
ಚಿಂತಾಮಣಿ: ವಿದ್ಯಾರ್ಥಿಗಳು ಪ್ರೀತಿ ಪ್ರೇಮದ ಗುಂಗಿನಲ್ಲಿ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಕರೆ ನೀಡಿದರು. ಪಟ್ಟಣದ ಬಾಲಕರ ಪದವಿ ಕಾಲೇಜಿನಲ್ಲಿ ಎನ್ಎಸ್ಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸದೃಢ ಸಮಾಜ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು. ಶ್ರೀಮಂತ ಬದುಕಿಗಿಂತಲೂ ಗೌರವಯುತವಾದ ಬದುಕು ಶ್ರೇಷ್ಠ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ಬುದ್ದ, ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದರಂಥವರ ವಿಚಾರ ಧಾರೆಗಳ ಅಧ್ಯಯನ ಮಾಡಬೇಕು. ಆಗ ಬದುಕಿನ ಮೌಲ್ಯ ಅರ್ಥವಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

