ರಾಜ್ಯ ಮಟ್ಟದ ದಸರಾ ಕ್ರೀಡಾ ಕೂಟಕ್ಕೆ ಆಯ್ಕೆ
ಚಿಕ್ಕಬಳ್ಳಾಪುರ: ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ 2013-14ನೇ ಸಾಲಿನ ಬೆಂಗಳೂರು ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ದಸರಾ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಪುರುಷರ ಗುಂಪು ವಿಭಾಗದ ಥ್ರೋ ಬಾಲ್ನಲ್ಲಿ ಪ್ರಥಮ ಸ್ಥಾನ ಮಹ್ಮದ್ ಹಾಕಿಬ್ ಮತ್ತು ತಂಡ, ನೆಟ್ಬಾಲ್ನಲ್ಲಿ ಪ್ರಥಮ ಸ್ಥಾನ ನಾಗರಾಜ್ ಮತ್ತು ತಂಡ, ಹ್ಯಾಂಡ್ಬಾಲ್ನಲ್ಲಿ ದ್ವಿತೀಯ ಸ್ಥಾನ ಅರುಣ್ಕುಮಾರ್ ಮತ್ತು ತಂಡ, ಬ್ಯಾಸ್ಕೆಟ್ಬಾಲ್ನಲ್ಲಿ ದ್ವಿತೀಯ ಸ್ಥಾನ ಅಶೋಕ್ ಮತ್ತು ತಂಡ, ಕರಾಟೆಯಲ್ಲಿ ಪ್ರಥಮ ಸ್ಥಾನ ಹೃತ್ವಿಕ್ಯಾದವ್ ಎನ್, ಎಂ.ಪಿ. ಜಾಗೃತ್ಗೌಡ, ಪಿ. ರವಿತೇಜ, ಚರಣ್ ಎಂ., ಸಲ್ಮಾನ್ ಪಾಷ ಹಾಗೂ ದ್ವಿತೀಯ ಸ್ಥಾನವನ್ನು ಆರ್. ಗಣೇಶ್ಕುಮಾರ್, ನೂರುಲ್ಲಾ ಎಂ, ಕಿರಣ್ ಎಲ್, ಯುವರಾಜ್ ಎಸ್. ಅಬ್ದುಲ್ ಇಮ್ರಾನ್ ವಿಜೇತರಾಗಿದ್ದಾರೆ. ಮಹಿಳೆಯರ ಗುಂಪು ವಿಭಾಗದ ಥ್ರೋಬಾಲ್ನಲ್ಲಿ ಪ್ರಥಮ ಸ್ಥಾನ ಪ್ರೇರಣಾ ಮತ್ತು ತಂಡ, ಹ್ಯಾಂಡ್ಬಾಲ್ನಲ್ಲಿ ದ್ವಿತೀಯ ಸ್ಥಾನ ಶಗುಪ್ತಾ ಖಾನಂ ಎಸ್, ಕರಾಟೆಯಲ್ಲಿ ಪ್ರಥಮ ಸ್ಥಾನ ರಿಷಿಕಾ, ಹರ್ಷವರ್ಧಿನಿ, ಸ್ಪೂರ್ತಿ ರಾಜ್ಯ ಮಟ್ಟದ ದಸರಾ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ. ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಜಿಲ್ಲೆಯ ಬಿ.ಆರ್. ರಂಗನಾಥ್ 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಹಾಗೂ 200 ಮೀಟರ್ನಲ್ಲಿ ದ್ವಿತೀಯ, ರಾಹುಲ್ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ನವೀನ್ ತೃತೀಯ ಸ್ಥಾನ, ರಾಹುಲ್.ಬಿ 5000 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಶಿವಕುಮಾರ್ ತೃತೀಯ, ರಂಗನಾಥ್ ಮತ್ತು ತಂಡ ರಿಲೇಯಲ್ಲಿ ತೃತೀಯ ಹಾಗೂ ಭರತ್ಕುಮಾರ್ ಮತ್ತು ತಂಡ ತೃತೀಯ ಸ್ಥಾನವನ್ನು ಪಡೆದಿದ್ದು ಮಹಿಳೆಯರ ವೈಯಕ್ತಿಕ ಗುಂಪಿನಲ್ಲಿ ವಿಶಾಖ ಜೆ. 100 ಮೀಟರ್ ಬಟರ್ಪ್ಲೇ ಈಜಿನಲ್ಲಿ ಪ್ರಥಮ ಸ್ಥಾನ ಹಾಗೂ 200 ಮೀಟರೆ ಈಜಿನಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ದಸರಾ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಾರೆ.
ಜವಾಬ್ದಾರಿ ಹೆಚ್ಚಿಸಿದೆ: ಶಾಸಕ ವರ್ತೂರು
ಕೋಲಾರ: ನನ್ನನ್ನು ಕ್ಷೇತ್ರದ ಜನತೆ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ ನಂತರ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದು ಶಾಸಕ ವರ್ತೂರು ಪ್ರಕಾಶ್ ಹೇಳಿದರು. ತಾಲೂಕಿನ ಉರಟಿ ಅಗ್ರಹಾರದಲ್ಲಿ ಗ್ರಾಮಸ್ಥರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಬಾರಿ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಈ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಸಲುವಾಗಿ ಏಳೆಂಟು ಕೊಳವೆ ಬಾವಿ ಕೊರೆಸಿದರೂ ಪ್ರಯೋಜನವಾಗಿರಲಿಲ್ಲ. ಬೆಂಗಳೂರಿನ ಒಬ್ಬರು ಗ್ರಾಮದಲ್ಲಿ ಅವರಿಗೆ ಸಂಬಂಧಸಿದ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು, ಆ ಮಾಲೀಕರ ಕೈ ಕಾಲು ಹಿಡಿದು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಯಿತು ಎಂದು ಸ್ಮರಿಸಿದರು. ಬೆಗ್ಲಿ ಪ್ರಕಾಶ್, ರಾಜಣ್ಣ, ಆನಂದ್ ಕುಮಾರ್, ವೀರಭದ್ರಪ್ಪ, ಮಂಜುನಾಥ್, ಚೌಡರೆಡ್ಡಿ, ವೆಂಕಟೇಶ್, ಮುನಿಯಪ್ಪ, ರಾಜಣ್ಣ, ಚನ್ನಸಂದ್ರ ವೆಂಕಟೇಶ್ ಇದ್ದರು.
11 ರಂದು ಮಾರಾಟ ಮೇಳ
ಚಿಕ್ಕಬಳ್ಳಾಪುರ: ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಅ.11 ರ ಮಧ್ಯಾಹ್ನ 12 ಗಂಟೆಗೆ ವಸ್ತ್ರ ನಂದಿ-2013 ಕೈಮಗ್ಗ ವಸ್ತ್ರಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮವನ್ನು ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಉದ್ಘಾಟಿಸುವರು. ಶಾಸಕ ಡಾ.ಕೆ. ಸುಧಾಕರ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವರಾದ ಡಾ.ಎಂ. ವೀರಪ್ಪ ಮೊಯ್ಲಿ, ಕೆ.ಹೆಚ್ .ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭೆ ಉಪ ಸಭಾಪತಿ ಎನ್.ಹೆಚ್.ಶಿವಶಂಕರ್ ರೆಡ್ಡಿ, ಜಿ.ಪಂ. ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಝರೆಪ್ಪ ಮೊಳಿಕೇರಿ, ಜವಾಹರ್ಲಾಲ್ ಕನ್ಸೋತ್ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

