ಸರಳ ವಿವಾಹಗಳಿಂದ ನೆಮ್ಮದಿ
ಚಿಂತಾಮಣಿ: ಅದ್ಧೂರಿ ಮದುವೆ ಕಾರ್ಯಗಳಿಗೆ ಕಡಿವಾಣ ಹಾಕಿ ಸರಳ ವಿವಾಹಗಳಿಂದ ನೆಮ್ಮದಿ ಜೀವನ ನಿರ್ವಹಿಸಲು ಸಾಧ್ಯವೆಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು.
ತಾಲೂಕಿನ ಕಂಗಾನಹಳ್ಳಿ ಗ್ರಾಮದ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಭೋಜನ ಶಾಲೆ ಹಾಗೂ ಉಚಿತ ಸಾಮೂಹಿಕ ವಿವಾಹಗಳಲ್ಲಿ ಭಾಗವಹಿಸಿ ಮಾತನಾಡಿ, ಮಳೆ, ಬೆಳೆಯಿಲ್ಲದೆ ಜನರು ಸಂಕಷ್ಟದಲ್ಲಿ ಇರುವುದರಿಂದ ಸಾಧ್ಯವಾದಷ್ಟು ಸರಳ ವಿವಾಹಗಳಿಂದ ನೆಮ್ಮದಿ ಜೀವನ ಮಾಡಲು ಸಾಧ್ಯವೆಂದು ಹೇಳಿದರು. ಕಾಂಗ್ರೆಸ್ ಮುಖಂಡರಾದ ವಾಣಿ ಕೃಷ್ಣಾರೆಡ್ಡಿ ನೂತನ ವಧು ವರರಿಗೆ ಶುಭ ಹಾರೈಸಿ, ಜೀವನದಲ್ಲಿ ಕಷ್ಟ ಸುಖ ಎರಡನ್ನು ಸಮಾನವಾಗಿ ಸ್ವೀಕರಿಸಿ ನೆಮ್ಮದಿಯ ಜೀವನ ನಡೆಸಲು ಹಾರೈಸಿದರು. ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಜಾನಪದ ಕಲಾವಿದ ಮುನಿರೆಡ್ಡಿ ಮತ್ತು ವರದನಾಯಕನಹಳ್ಳಿ ತಿರುಮಲ ಪ್ರಕಾಶ್ರಿಂದ ಜಾನಪದ ಹಾಗೂ ಡೊಳ್ಳು ಕುಣಿತ ಉತ್ತಮವಾಗಿ ಮೂಡಿಬಂತು. ಡಿವೈಎಸ್ಪಿ ಸಣ್ಣತಿಮ್ಮಯ್ಯ, ತಾಪಂ ಸದಸ್ಯ ಮುನಿ ಆಂಜಪ್ಪ, ಗ್ರಾಪ ಅಧ್ಯಕ್ಷ ನಾರಾಯಣಮ್ಮ, ಬೂರಗಮಾಕಲಹಳ್ಳಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಅಧ್ಯಕ್ಷ ಚೊಕ್ಕರೆಡ್ಡಿ, ಶ್ರೀರಾಮಪ್ಪ, ಮಂಜುನಾಥ್, ಪಾಲು ನಾರಾಯಣಸ್ವಾಮಿಇದ್ದರು.
ಒಂದೇ ವೇದಿಕೆಯಲ್ಲಿ ವೈರಿಗಳು
ಚಿಂತಾಮಣಿ: ಖಾಸಗಿ ಕಾರ್ಯಕ್ರಮವೊಂದರಲ್ಲಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹಾಗೂ ಕಾಂಗ್ರೆಸ್ ಮುಖಂಡರಾದ ವಾಣಿಕೃಷ್ಣಾರೆಡ್ಡಿ ಪ್ರಥಮವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದರಿಂದ ಕಾರ್ಯಕರ್ತರಲ್ಲಿ ಸಿಹಿ ಮತ್ತು ಕಹಿ ಉಂಟಾಗಿದೆ. ತಾಲೂಕಿನ ಅಂಬಾಜಿದುರ್ಗ ಹೋಬಳಿ ಕಂಗಾನಹಳ್ಳಿ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇವಾಲಯದಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹಗಳಲ್ಲಿ ನೂತನ ದಂಪತಿಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ನೀಡುವ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದರಿಂದ ಹಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೆ ಸದಾ ಬೆಂಬಲಿಸುತ್ತಿದ್ದ ಜನರು ಮಾಜಿ ಸಚಿವ ದಿವಂಗತ ಕೆ.ಎಂ. ಕೃಷ್ಣಾರೆಡ್ಡಿ ನಂತರ ಅವರ ಪುತ್ರಿ ವಾಣಿ ಕೃಷ್ಣಾರೆಡ್ಡಿ ಉತ್ತರಾಧಿಕಾರಿಯಾಗಿ ರಾಜಕೀಯಕ್ಕೆ ಪ್ರವೇಶಿಸಿದಾಗ ರಾಜಕೀಯ ವಿರೋಧ ವ್ಯಕ್ತವಾಗಿತ್ತು.
ಪದಾಧಿಕಾರಿಗಳ ಆಯ್ಕೆ
ಮಾಲೂರು: ತಾಲೂಕು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಗೆ ನೂತನ ಪದಾಧಿಕಾರಿಗಳನ್ನು ಪಟ್ಟಣದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಜಿಲ್ಲಾ ಸಂಚಾಲಕ ವರದಗಾನಹಳ್ಳಿ ಮುನಿವೆಂಕಟಪ್ಪ ಅಧ್ಯಕ್ಷತೆಯಲ್ಲಿ ತಾಲೂಕು ಸಂಚಾಲಕರಾಗಿ ಉಪವಾಸಪುರ ಆನಂದ್, ಸಂಘಟನಾ ಸಂಚಾಲಕರಾಗಿ ಅರಸನಹಳ್ಳಿ ಶಂಕರ್, ಅಬ್ಬೇನಹಳ್ಳಿ ನಾಗರಾಜ್, ಖಂಜಾಚಿಯಾಗಿ ಕಡದನಹಳ್ಳಿ ನಾರಾಯಣಸ್ವಾಮಿ, ಕಲಾ ಮಂಡಳಿ ಸಂಚಾಲಕರಾಗಿ ರಾಜೇನಹಳ್ಳಿ ಅಂಬರೀಶ್ರನ್ನು ಆಯ್ಕೆಮಾಡಲಾಗಿದೆ. ಪೆದ್ದೂರ್ ವೆಂಕಟರಾಮ್, ಕಾಂತರಾಜ್, ಲಕ್ಕೂರು ವೆಂಕಟೇಶ್, ವೆಂಕಟೇಶ್, ವೆಂಕಟಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

