'ದೇಸೀಯ ಬಿತ್ತನೆ ಬೀಜ ತಳಿಗಳು ವಿನಾಶದ ಅಂಚಿನಲಿ'್ಲ
ಮಾಲೂರು: ಸಂಕರಣ ತಳಿಗಳಿಂದಾಗಿ ದೇಶಿಯ ತಳಿಗಳು ವಿನಾಶದ ಅಂಚಿನಲ್ಲಿದೆ. ಇದರಿಂದ ಮುಂದೂಂದು ದಿನ ರೈತರು ಬೀಜಕ್ಕಾಗಿ ಹೈಬ್ರಿಡ್ ಬೀಜ ಕಂಪನಿಗಳನ್ನೇ ಅವಲಂಬಿಸಬೇಕಾಗುತ್ತದೆ ಎಂದು ಗ್ರೀನ್ ಪ್ರತಿಷ್ಠಾನದ ಪ್ರದೀಪ್ ಹೇಳಿದರು.
ತಾಲೂಕಿನ ಚಿಕ್ಕಇಗ್ಗಲೂರು ಗ್ರಾಮದಲ್ಲಿ ಬೆಳಕು ಸಂಸ್ಥೆ ತಾಲೂಕಿನ ಮಹಿಳಾ ಸಂಘಗಳ ಸದಸ್ಯರಿಗಾಗಿ ಆಯೋಜಿಸಿದ್ದ ಅದ್ಯಯನ ಪ್ರವಾಸದ ಸಮಾರೋಪ ಸಭೆಯಲ್ಲಿ ಮಾತನಾಡಿ, ನಮ್ಮ ರೈತರಿಗಾಗಿ ಉತ್ತಮ ಗುಣಮಟ್ಟದ ಕಡಿಮೆ ಬೆಲೆಯಲ್ಲಿ ದೊರಕುವ ದೇಶಿಯ ಬೀಜ ತಳಿಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಈಗಾಗಲೇ ಪ್ರತಿಷ್ಠಾನ ಕನಕಪುರ ತಾಲೂಕಿನ ಕುಲುಮೆ ದೊಡ್ಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಸಾವಯವ ವಿಧಾನಗಳ ಮೂಲಕ ದೇಶಿಯ ತಳಿಗಳನ್ನು ಬೆಳೆದು ಉತ್ತಮ ಬೀಜಗಳನ್ನು ಆಯ್ಕೆ ಮಾಡಿ ತಳಿ ಸಂರಕ್ಷಣೆ ಮಾಡುತ್ತಿದ್ದು, ಈವರೆಗೆ 14 ದೇಶಿ ರಾಗಿ ತಳಿಗಳನ್ನು, 20 ದೇಶಿಯ ಬತ್ತದ ತಳಿಗಳನ್ನು, ನವಣೆ, ಸಜ್ಜೆ ಮುಂತಾದ ದೇಶಿ ತರಕಾರಿಯನ್ನು ಬೆಳೆದು, ದೇಶಿ ತಳಿಗಳನ್ನು ರಕ್ಷಿಸಿ ಬೆಲೆಸಲಾಗುತ್ತಿದೆ ಎಂದರು.
ಬೆಳಕು ಸಂಸ್ಥೆಯ ಮಂಜುನಾಥ್ ಜವಳಿ ಮಾತನಾಡಿ, ತಾಲೂಕಿನ ಮಹಿಳಾ ಸಂಘದ ಸದಸ್ಯರ ಅದ್ಯಯನ ಪ್ರವಾಸ ಯಶಸ್ವಿಯಾಗಿದ್ದು, ಅಲ್ಲಿನ ಕಾರ್ಯಚಟುವಟಿಕೆಗಳನ್ನು ಮಾರ್ಗದರ್ಶಿಯಾಗಿ ತೆಗೆದುಕೊಳ್ಳುಲು ಮಹಿಳಾ ಒಕ್ಕೂಟ ನಿರ್ಧರಿಸಿದ್ದು,ದೇಶಿಯ ತಳಿ ಕಾಪಾಡಿಕೊಳ್ಳುವ ಜತೆಯಲ್ಲಿ ಬೀಜ ಬ್ಯಾಂಕ್ ರಚಿಸಲು ತೀರ್ಮಾನಿಸಿದ್ದಾರೆ. ಸಂಘಗಳಲ್ಲಿ ಐಕ್ಯತೆ ಮೂಡಿಸಿ ಸಮುದಾಯದ ಬೆಳೆವಣಿಗ ಒಕ್ಕೂಟದ ಸ್ಥಾಪನೆ ಮುಖ್ಯವಾಗಿದೆ ಎಂದರು. ಬೆಳಕು ಸಂಸ್ಥೆಯ ಡಿ. ಗಂರನಾಥ್ ಬಾಬು, ದೂಡ್ಡಿ ಮಹಿಳಾ ಸಂಘದ ನಾಗರತ್ನ, ಸಂತೋಷ್,ಚಿಕ್ಕಇಗ್ಗಲೂರು, ರಾಮನಾಥಪುರ, ದೂಡ್ಡ ಕಲ್ಲಹಳ್ಳಿ, ದೂಡ್ಡ ಇಗ್ಗಲೂರು, ಇಂದುಮಂಗಲ, ಭೈರಾಗಿ ಮಠ, ಕುಡೆಯನೂರು ಗ್ರಾಮದ ಮಹಿಳಾ ಸಂಘದ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

