ಕೆಎಟಿ ಆದೇಶದ ವಿರುದ್ಧ ಜೆಡಿಯುಎಫ್ ಧರಣಿ
ಕೆಜಿಎಫ್: ಕೆಜಿಎಫ್‌ನಿಂದ ಬಂಗಳೂರಿಗೆ ವರ್ಗಾವಣೆಗೊಂಡಿರುವ ಡಿವೈಎಸ್ಪಿ ಹೆಚ್.ಪಿ. ರಾಜಣ್ಣ ಅವರನ್ನು ಮತ್ತೆ ಕೆಜಿಎಫ್‌ಗೆ ವರ್ಗಾವಣೆ ಮಾಡಲು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ (ಕೆಎಟಿ) ಆದೇಶದ ವಿರುದ್ಧ ಕೆಜಿಎಫ್‌ನ ಬಿಜಿಎಂಎಲ್‌ನ ಜೆಡಿಯುಎಫ್ ಕಾರ್ಯಕರ್ತರು ನಗರದ ಸೂರಜ್‌ಮುಲ್ ವೃತ್ತದಲ್ಲಿ ರಸ್ತೆತಡೆ ಪ್ರತಿಭಟನೆ ನಡೆಸಿದರು.
ಕೆಜಿಎಫ್ ಚಿನ್ನದ ಗಣಿಯನ್ನು ಗ್ಲೋಬಲ್ ಟೆಂಡರ್ ಮೂಲಕ ಪುನರಾರಂಭಿಸಲು ಸುಪ್ರೀಂಕೋಟ್ ಆದೇಶಿಸಿದ್ದು ಚಿನ್ನದ ಗಣಿ ಪುನರಾರಂಭಕ್ಕೆ ಕಾರ್ಮಿಕರು ಮತ್ತು ಕ್ಷೇತ್ರದ ಸಾರ್ವಜನಿಕರು ಎದುರು ನೋಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಜಿಎಂಎಲ್‌ಗೆ ಸೇರಿದ ಕೋಟ್ಯಂತರ ಆಸ್ತಿಯನ್ನು ಕಳ್ಳರು ಲೂಟಿ ಮಾಡುತ್ತಿದ್ದು ಇಲ್ಲಿನ ಬಿಜಿಎಂಎಳ್ ಆಡಳಿತ ಮಂಡಳಿತ ಅಧಿಕಾರಿ ಸಂಪತ್‌ಕುಮಾರ್ ಭಾಗಿಯಾಗಿದ್ದಾರೆ ಎಂಭ ಆರೋಪದ ಮೇಲೆ ಕೇಂದ್ರ ಸರ್ಕಾರ ತನಿಖೆಯನ್ನು ಕೈಗೊಂಡಿದೆ.
ತನಿಖೆಯಿಂದ ತಾವು ಮಾಡಿದಂತಹ ಕೃತ್ಯ ಬೆಳಕಿಗೆ ಬರುವ ಸಾಧ್ಯತೆಯಿಂದಾಗಿ ಸಂಪತ್‌ಕುಮಾರ್ ಕೆಜಿಎಫ್‌ನಿಂದ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಡಿವೈಎಸ್ಪಿ ಹೆಚ್.ಪಿ. ರಾಜಣ್ಣ ಅವರೊಂದಿಗೆ ಕೈಜೋಡಿಸಿ ಆಗಸ್ಟ್ ತಿಂಗಳಲ್ಲಿ ಬಿಜಿಎಂಎಲ್ ಚಿನ್ನದ ಗಣಿಗೆ ಸೇರಿದ ಮೈಸೂರು ಮಿಲ್‌ನಲ್ಲಿ ಚಿನ್ನದ ಅದಿರನ್ನು ಕಳವು ಮಾಡಲು ಯತ್ನಿಸಿದ ಮೂವರು ಭದ್ರತಾ ಸಿಬ್ಬಂದಿ ಸೇರಿದಂತೆ ಇತರೆ 17 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಸ್ಪಿ ರಾಜಣ್ಣ ಅವರನ್ನು ಹೆಚ್ಚಿನ ತನಿಖೆ ನಡೆಸುವಂತೆ ನೇಮಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಬಿಜಿಎಂಎಲ್ ಆಡಳಿತಾಧಿಕಾರಿ ಸಂಪತ್‌ಕುಮಾರ್ ಅವರನ್ನು ತನಿಖೆಯಿಂದ ಪಾರುಮಾಡಲು ಪ್ರಕರಣದ ದಿಕ್ಕುತಪ್ಪಿಸಲು ಡಿವೈಎಸ್ಪಿ ರಾಜಣ್ಣ ಮುಂದಾಗಿದ್ದಾರೆ ಎಂದು ಆರೋಪಿಸಿ ಸೂಕ್ತ ತನಿಖೆ ನಡೆಸುವಂತೆ ರಾಜ್ಯ ಗೃಹ ಸಚಿವರಲ್ಲಿ ಮನವಿ ಸಲ್ಲಿಸಲಾಗಿತ್ತು. ಡಿವೈಎಸ್ಪಿ ರಾಜಣ್ಣ ಅವರನ್ನು ಕೆಜಿಎಫ್‌ನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದ್ದು ಪುನಹ ರಾಜಣ್ಣ ಅವರನ್ನು ಕೆಜಿಎಫ್‌ಗೆ ವರ್ಗಾಯಿಸಲು ಕೆಎಟಿ ಆದೇಶಿಸಿದ್ದು ರಾಜ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಬಗ್ಗೆ ಕ್ರಮ ಜರುಗಿಸಲು ಕೋರಿ ಬಿಜಿಎಂಎಲ್ ಜೆಡಿಯುಎಫ್ ಕಾರ್ಯಕರ್ತರು ಮನವಿಯನ್ನು ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವೃತ್ತನಿರೀಕ್ಷಕ ಲಕ್ಷ್ಮೀನಾರಾಯಣ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಂಖಂಡ ಆರ್. ಗೋಪಿನಾಥ್, ಶಿವಭೂಷಣಂ, ಕಪಿಲ್, ಎಸ್.ಸುಂದರಂ, ಜಾನ್, ಮಗೇಂದ್ರನ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

