ಕೋಲಾರ

ತಾಲೂಕು ವ್ಯವಸಾಯೋತ್ಪನ್ನ ಸಂಘ ಬಿಜೆಪಿ ಮಡಿಲಿಗೆ

Published On :

ಚಿಂತಾಮಣಿ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಸಂಘಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಬಹುಮತ ಪಡೆದು ಜಯಶೀಲರಾಗಿದ್ದಾರೆ ಎಂದು ಚುನಾವಣಾಧಿಕಾರಿ ಹರೀಶ್ ಹೇಳಿದರು.
ಚಿಂತಾಮಣಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಸಂಘಕ್ಕೆ 2010-11 ರಿಂದ 2014-15 ನೇ ಸಾಲಿನ ಉಳಿದ ಅವಧಿಗೆ ಎ ವರ್ಗದ ಆಡಳಿತ ಮಂಡಳಿ ಸದಸ್ಯರ ನಿರ್ದೇಶಕರ 14 ಅಭ್ಯರ್ಥಿಗಳ ಪೈಕಿ ಬಿಜೆಪಿ ಅಭ್ಯರ್ಥಿಗಳಾದ ಬಿ.ಮಂಜುನಾಥ್, ವಿ.ಆರ್.ಪ್ರಕಾಶ್ ಗುಪ್ತಾ, ಎಸ್.ಪ್ರದೀಪ್, ಟಿ.ಸಿ.ಪ್ರಸಾದ್ ರೆಡ್ಡಿ, ಎನ್.ಶಂಕರಪ್ಪ, ಆರ್.ಶಿವಾರೆಡ್ಡಿ, ಬಿ.ಎನ್.ಶ್ರೀನಿವಾಸಪ್ಪ ಬಹುಮತ ಪಡೆದು ವಿಜೇತರಾಗಿದ್ದಾರೆ ಎಂದು ಹರೀಶ್ ತಿಳಿಸಿದರು.
ವಿಜಯೋತ್ಸವ: ಪಟ್ಟಣದ ತಾಲೂಕು ಬಿಜೆಪಿ ಘಟಕದ ವತಿಯಿಂದ ನೂರಾರು ಕಾರ್ಯಕರ್ತರು ಸೇರಿ ವಿಜಯೋತ್ಸವ ಆಚರಿಸುತ್ತಾ ಪಟಾಕಿ ಸಿಡಿಸಿ ಸಿಹಿ ಹಂಚಿದರು. ನಂತರ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಪಕ್ಷದ ಬಾವುಟಗಳನ್ನು ಹಿಡಿದು ಬೈಕ್ ರ್ಯಾಲಿ ನಡೆಸಿದರು.
ಕಳೆದ 35 ವರ್ಷಗಳಿಂದ 2 ಕುಟುಂಬದ ರಾಜಕಾರಣಕ್ಕೆ ಸೀಮಿತಗೊಂಡಿದ್ದ ಈ ಸಂಘವನ್ನು ಬಿಜೆಪಿಯು ಮಂಗಳವಾರ ತನ್ನ ವಶಕ್ಕೆ ಪಡೆಯುವ ಮೂಲಕ ಕುಟುಂಬ ರಾಜಕಾರಣದ ಭದ್ರಕೋಟೆಯನ್ನು ಧೂಳಿ ಮಾಡಿತು.
ಗೆಲುವಿಗೆ ಸಂಪೂರ್ಣ ಸಹಕಾರ ನೀಡಿದ ಬಿಜೆಪಿಯ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸತ್ಯನಾರಾಯಣ ಮಹೇಶ್ ಕಾರ್ಯಕರ್ತರು ಹಾಗೂ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸತ್ಯನಾರಾಯಣ ಮಹೇಶ್, ನಗರಸಭಾ ಸದಸ್ಯ ಸುಜಾತಮ್ಮ ಶಿವಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಅಟ್ಟೂರು ಮಂಜುನಾಥ್, ನಗರ ಘಟಕದ ಗೋವಿಂದ್, ಮುಖಂಡರಾದ ಮಾಡಿಕೆರಿ ಅರುಣ್, ವೆಂಕಟರವಣ, ಡಾಬಾ ಮಂಜುನಾಥ್, ಪಾರ್ಥಸಾರಥಿ, ಕಾಗತಿ ನಾಗರಾಜ್, ಪ್ರದೀಪ್ ಸೇರಿಂದತೆ ನೂರಾರು ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.
ಪಟ್ಟಣದ ಟಿಎಪಿಸಿಎಂಎಸ್‌ನ ಕಚೇರಿ ಮುಂಭಾಗ ಮಂಗಳವಾರ ಬೆಳಗ್ಗಿನಿಂದಲೇ ಡಿವೈಎಸ್‌ಪಿ ಸಣ್ಣತಿಮ್ಮಪ್ಪ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಟಿಎಪಿಸಿಎಂಎಸ್ ಕಾರ್ಯದರ್ಶಿ ಎನ್.ವೆಂಕಟೇಶ್, ಸಬ್‌ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ಹಾಗೂ ಚುನಾಚವಣೆ ಸಿಬ್ಬಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.