ಅನ್ನಪ್ರಸಾದಂನಿಂದ ನಿರಂತರ ಸೇವೆ
ಟೇಕಲ್: ಮಾಲೂರಿನ ಕೃಷ್ಣಯ್ಯಶೆಟ್ಟರು ಶಾಸಕರಾಗಿದ್ದಾಗ ತಿರುಮಲದಲ್ಲಿನ ಕರ್ನಾಟಕ ಭವನದ ಬಳಿ ತಮ್ಮ ತಂದೆಯವರ ಜ್ಞಾಪಕಾರ್ಥ ನಾರಾಯಣಶೆಟ್ಟಿ ಮೆಮೊರಿಯಲ್ ಟ್ರಸ್ಟ್ ವತಿಯಿಂದ ಬಾಲಾಜಿ ದರ್ಶನಕ್ಕೆ ತಿರುಮಲಕ್ಕೆ ಬರುವ ಭಕ್ತರಿಗೆ ಉಚಿತ ಅನ್ನಪ್ರಸಾದಂ ಪ್ರಾರಂಭಿಸಿದ್ದರು. ಇದು 3 ವರ್ಷದಿಂದ ಈ ಕಾರ್ಯ ಯಾವುದೇ ಅಡ್ಡಿ ಆತಂಕವಿಲ್ಲದೆ ನಿರಂತರವಾಗಿ ನಡೆಯುತ್ತಿದೆ.
6.10.2011ನೇ ಗುರುವಾರ ಪ್ರಾರಂಭಗೊಂಡ 'ಉಚಿತ ಅನ್ನಪ್ರಸಾದಂ' ಇಂದಿಗೂ ನಡೆಯುತ್ತಾ ಬಂದಿದೆ. ದಿನವಹಿ 2500 ರಿಂದ 3000 ಸಾವಿರ ಭಕ್ತರು ಇದನ್ನು ಸ್ವೀಕರಿಸುತ್ತಾರೆ. ಮುಂಜಾನೆ ಫಲಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂಜಾನೆ ಕಾಫಿ ವ್ಯವಸ್ಥೆ ಇರುತ್ತದೆ. ಶ್ರಾವಣ ಮಾಸ, ಭಾದ್ರಪದ ಮಾಸ, ಹಾಗೂ ಬ್ರಹ್ಮರಥೋತ್ಸವಗಳಲ್ಲಿ 15,000ಕ್ಕೂ ಹೆಚ್ಚು ಭಕ್ತರು ಇಲ್ಲಿ ಬಂದು ಪ್ರಸಾದ ಸ್ವೀಕರಿಸುತ್ತಾರೆ. ಕರ್ನಾಟಕ ಭವನವಾದ್ದರಿಂದ ಬಹುತೇಕ ಕನ್ನಡಿಗರೇ ಉಳಿದುಕೊಂಡು ಇದರ ಉಪಯೋಗ ಪಡೆದುಕೊಳ್ಳುತ್ತಾರೆ. ಅದರಲ್ಲೂ ಮಾಲೂರಿನಿಂದ ಹೋದ ಜನತೆ ಅಲ್ಲಿ ಹೋಗಿ ಪ್ರಸಾದ ಸ್ವೀಕರಿಸುವುದು ಸಾಮಾನ್ಯ.
ತಿಂಗಳಿಗೊಮ್ಮೆಯಾದರೂ ತಿರುಮಲಕ್ಕೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆಯುವ ಕೃಷ್ಣಯ್ಯಶೆಟ್ಟಿ,ಕನ್ನಡಪ್ರಭದೊಂದಿಗೆ ಮಾತನಾಡಿ, ಇದು ನನ್ನ ಹರಕೆಯಾಗಿದೆ. 10 ವರ್ಷಗಳ ಕಾಲ ಈ ಸೇವೆ ನಡೆಸಲಾಗುತ್ತದೆ. ನಮ್ಮ ತಂದೆ-ತಾಯಿಯವರ ಹೆಸರು ಚಿರಸ್ಥಾಯಿಯಾಗಿ ಇರಲು ಈ ಅನ್ನಪ್ರಸಾದವನ್ನು ನೀಡುತ್ತಿರುವುದಾಗಿ ತಿಳಿಸಿದರು. ಮುಳಬಾಗಿಲಿನಲ್ಲಿ ನನ್ನದೇ ಸ್ವಂತ ಜಮೀನಿನಲ್ಲಿ ಕಲ್ಯಾಣ ಮಂಟಪವನ್ನು ಕಟ್ಟಿಸುತ್ತಿದ್ದು, ಇಲ್ಲಿ ಬಹುತೇಕ ತಿರುಮಲಕ್ಕೆ ನಡೆದು ಹೋಗುವವರಿಗೆ ಸಕಲ ಸಿದ್ಧತೆ ಮಾಡಿಕೊಡುವುದಾಗಿ ತಿಳಿಸಿದರು.
ರಾಜ್ಯೋತ್ಸವ ಆಚರಣೆ; ಪೂರ್ವಭಾವಿ ಸಭೆ
ಕೋಲಾರ: ನಗರದಲ್ಲಿ ಅ.31 ರಂದು ರಾಷ್ಟ್ರೀಯ ಸಂಕಲ್ಪ ದಿನಾಚರಣೆಯನ್ನು ಆಚರಿಸಲು ಹಾಗೂ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಸಂಬಂಧ ಪೂರ್ವಭಾವಿ ಸಭೆಯನ್ನು ಅ.19 ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಗೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಾಗಿ ರಾಷ್ಟ್ರೀಯ ಸಂಕಲ್ಪ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಲು ತಮ್ಮ ಸಲಹೆ ನೀಡಲು ಜಿಲ್ಲಾ ಆಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

