ಕೋಲಾರ

ಪಿಡಿಒ ನೇಮಕಕ್ಕೆ ಒತ್ತಾಯಿಸಿ ತಾಪಂಗೆ ಮುತ್ತಿಗೆ

Published On :

ಕೋಲಾರ: ತಾಲೂಕಿನ ಮಾರ್ಜೇನಹಳ್ಳಿ ಗ್ರಾಪಂಗೆ ಕಳೆದ ಮೂರು ತಿಂಗಳಿಂದ ಅಭಿವೃದ್ಧಿ ಅಧಿಕಾರಿ ಇಲ್ಲದಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಗುರುವಾರ ಕೋಲಾರ ತಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಮಾರ್ಜೇನಹಳ್ಳಿ ಗ್ರಾಪಂನಲ್ಲಿ ನರೇಗಾ ಕೆಲಸಗಳು ಕುಂಠಿತಗೊಂಡು ಶೂನ್ಯ ಸಾಧನೆ ದಾಖಲೆ ಆಗಿರುವುದಕ್ಕೆ ಗ್ರಾಪಂಗೆ ಪಿಡಿಒ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ, ಕೋಲಾರ ತಾಪಂ ಇಒ ಕೆ.ಎಸ್. ಭಟ್ ಅವರು ಪಿಡಿಒ ನೇಮಕಕ್ಕೆ ಕ್ರಮ ಜರುಗಿಸದಿರುವುದರಿಂದ ಅನೇಕ ಅಭಿವೃದ್ಧಿ ಕೆಲಸಗಳು ಅನುಷ್ಠಾನಕ್ಕೆ ತರಲಾಗಿಲ್ಲವೆಂದು ಗ್ರಾಪಂ ಸದಸ್ಯ ಕೆ.ಎಂ. ರವಿಚಂದ್ರೇಗೌಡ ದೂರಿದರು.
ಗ್ರಾಪಂಗೆ ಇಬ್ಬರು ಕಾರ್ಯದರ್ಶಿಗಳಿದ್ದಾರೆ, ಒಬ್ಬರು ಕಳೆದ ಆರು ತಿಂಗಳಿಂದ ಮತ್ತೊಬ್ಬರು 15 ದಿನಗಳಿಂದ ಕಚೇರಿಗೆ ಬಂದು ಹಾಜರಾತಿ ದಾಖಲು ಮಾಡುತ್ತಿದ್ದಾರೆಯಾದರೂ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಆಗುತ್ತಿಲ್ಲ, ಪಂಚಾಯಿತಿಗೆ ಒಬ್ಬರು ಮಾತ್ರ ಕಾರ್ಯದರ್ಶಿ ಇರಬೇಕು. ಆದರೆ,ನಮ್ಮ ಪಂಚಾಯಿತಿಗೆ ಇಬ್ಬರು ವರ್ಗಾವಣೆಯಾಗಿರುವುದು ಅಚ್ಚರಿ ಮೂಡಿಸಿದೆ, ಇದಕ್ಕೆಲ್ಲಾ ಕೋಲಾರ ತಾಪಂ ಇಒ ಅವರ ಬೇಜಾವಾಬ್ದಾರಿತನವೇ ಕಾರಣವೆಂದು ಆರೋಪಿಸಿದರು.
ತಾಪಂ ಇಒರವರು ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಂಡು ಸ್ವಹಿತಕ್ಕಾಗಿ ಬಳಕೆ ಮಾಡುತ್ತಿದ್ದಾರೆ, ನರೇಗಾ ಕೆಲಸ ಯಾವುದು ನಡೆಯುತ್ತಿಲ್ಲ, ಚುನಾಯಿತ ಜನಪ್ರತಿನಿಧಿಗಳಿಗೆ ಜನತೆ ಛೀಮಾರಿ ಹಾಕುತ್ತಿದ್ದಾರೆ.  ಸಮಸ್ಯೆ ಬಗೆಹರಿಸಲು ಜಿಪಂ ಸಿಇಒ ಅಥವಾ ಜಿಲ್ಲಾಧಿಕಾರಿಗಳು ಗಮನ ನೀಡದಿದ್ದರೆ ಪಂಚಾಯಿತಿಯು ಮತ್ತಷ್ಟು ಅಧೋಗತಿಗೆ ಇಳಿಯುತ್ತದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಸದಸ್ಯರಾದ ರವಿಚಂದ್ರೇಗೌಡ, ಸಯ್ಯದ್ ವಾಜೀದ್ ಪಾಷ, ಶಂಕರ್, ನಾರಾಯಣಸ್ವಾಮಿ, ಎಲವಾರದ ಚಿಕ್ಕಮುನಿಸ್ವಾಮಿ, ಜ್ಯೋತಿ ಚಂದ್ರ, ರಾಜೇಶ್ವರಿ ಮಂಜುನಾಥ್, ಸುಜಾತ ರಂಗೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.