ಕೋಲಾರ

ಶಾಸಕರಿಂದ ಅಹವಾಲು ಸ್ವೀಕಾರ

Published On :

ಕ.ಪ್ರ.ವಾರ್ತೆ ಕೋಲಾರ ಅ.17
ನಗರಸಭೆಗೆ ಸೇರಿದ ವಾರ್ಡ್ ನಂ. 1ರ ಟಮಕಾ ಪ್ರದೇಶದಲ್ಲಿ ಶಾಸಕ ಆರ್. ವರ್ತೂರ್ ಪ್ರಕಾಶ್ ಸಂಚರಿಸಿ ಜನತೆಯ ಕುಂದು ಕೊರತೆ ಅಲಿಸಿದರು.
ಟಮಕದಲ್ಲಿರುವ ದಲಿತ ಕಾಲೋನಿಗೆ ಭೇಟಿ ನೀಡಿದ ಶಾಸಕರು ಸ್ಥಳೀಯರಿಂದ ಅಹವಾಲು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ನಿವಾರಣೆ ಮಾಡುವುದಾಗಿ ಭರವಸೆ ನೀಡಿದರು.
ಈ ಭಾಗದಲ್ಲಿ ದಲಿತ ಸಮುದಾಯದವರು  ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕೆಂದು ಯುವಕರು ಶಾಸಕರಲ್ಲಿ ಬೇಡಿಕೆ ಇಟ್ಟರು. ಭವನ ನಿರ್ಮಾಣಕ್ಕೆ  ದೇವಸ್ಥಾನದ ಸಮೀಪ ಇರುವ ಕುಂಟೆಯ ಜಾಗವನ್ನು ತೋರಿಸಿದಾಗ ಸ್ಥಳ ಪರಿಶೀಲಿಸಿದ ಶಾಸಕರು, ಈ ಬಗ್ಗೆ ನಗರಸಭೆ ಆಯುಕ್ತರಿಂದ ದಾಖಲೆಗಳನ್ನು ತರಿಸಿಕೊಂಡು ಅದ್ಯಯನದ ನಂತರ ಸೂಕ್ತ ನಿರ್ಧಾರ ತೆಗದುಕೊಳ್ಳುವುದಾಗಿ ಭರವಸೆ ನೀಡಿದರು.
ಡಿ. ಸೋಮಣ್ಣ,  ಇ. ರಾಜಣ್ಣ,  ಟಿ.ಕೆ. ಕೃಷ್ಣೇಗೌಡ, ಕೆ.ವಿ. ವೆಂಕಟೇಶ್, ವಿಶ್ವನಾಥ್, ನಾರಾಯಣಸ್ವಾಮಿ,  ವೆಂಕಟರಾಜು, ಅಂಬರೀಷ್, ಮಲ್ಲೇಶ್, ಟಿ.ಸಿ. ಸಂತೋಷ್, ವೆಂಕಟೇಶ್ ಇದ್ದರು.

'ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಳ್ಳಿ'
ಗೌರಿಬಿದನೂರು: ಮಾನವರಾಗಿ ಹುಟ್ಟಿದ ಮೇಲೆ ಬದುಕನ್ನು ಆಧ್ಯಾತ್ಮಿಕ ಚಿಂತನೆಗೆ ಒಳಪಡಿಸಿ ಜೀವನ ಸಾಗಿಸಬೇಕು ಎಂದು ಉಡಿಪಿ ಪೇಜಾವರ ಮಠದ ವಿಶ್ವೇಶ ತೀರ್ಥಪಾದಂಗಳವರು ಹೇಳಿದರು.
ಹೊಸೂರು ಹೋಬಳಿ ರಮಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ವರಮಹಾಲಕ್ಷ್ಮಿ ದೇವಸ್ಥಾನದ ಟ್ರಸ್ಟಿನ ವತಿಯಿಂದ ಹಮ್ಮಿಕೊಂಡಿದ್ದ ರಾಜಗೋಪುರದ ಪ್ರಥಮ ಅಮೃತ ಶಿಲೆ ಸಮರ್ಪಣಾ ಸಮಾರಂಭದಲ್ಲಿ ಅನುಗ್ರಹ ಭಾಷಣ ನೀಡಿದರು. ವರಲಕ್ಷ್ಮಿ ದೇವಿ ಆದ್ಯಾತ್ಮಿಕ ಹಾಗೂ ಭೌತಿಕ ದೇವತೆಯಾಗಿ ಪೂಜಿಸಲ್ಪಟ್ಟಿದ್ದಾಳೆ ಎಂದು ತಿಳಿಸಿದರು. ವಿಧಾಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ಇತಿಹಾಸದಲ್ಲಿ ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸ ವಿದೆ. ಧರ್ಮಾಚರಣೆಯಲ್ಲಿ ಮಠಗಳು ಪ್ರಮುಖ ಪಾತ್ರ ವಹಿಸುತ್ತಿವೆ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಮಾಜಿ ಸಚಿವರಾದ ದಿವಂಗತ ಅರ್.ಎನ್. ಲಕ್ಷ್ಮೀಪತಿಯವರ ನೆನಪಿಗಾಗಿ 25ಲಕ್ಷ ರು.ಗಳೊಂದಿಗೆ ರಮಾಪುರದಲ್ಲಿ ಸಮುದಾಯ ಭವನ ನಿರ್ಮಾಣ ವಾಗಲಿದೆ ಎಂದರು.
ಇದೇ ರೀತಿಯಲ್ಲಿ ಡಿ. ಪಾಳ್ಯದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿ.ವಿ. ಕೃಷ್ಣರಾವ್, ವಿದುರಾಶ್ವತ್ಥದಲ್ಲಿ ಈ ಕ್ಷೇತ್ರದ ಮೊದಲ ಶಾಸಕ ದಿ. ನಾಗಯ್ಯರೆಡ್ಡಿ, ತೊಂಡೇ ಬಾವಿಯಲ್ಲಿ ಮಾಜಿ ಶಾಸಕರಾದ ದಿ.ಬಿ.ಎನ್.ಕೆ. ಪಾಪಯ್ಯ ನವರ ನೆನಪಿನಲ್ಲಿ ಸಮುದಾಯ ಭವನಗಳು ನಿರ್ಮಾಣವಾಗಲಿದೆ ಎಂದರು.
ಅಪರ ಗೃಹ ರಕ್ಷಕದಳದ ಮಹಾ ನಿರ್ದೇಶಕ ಗೋಪಾಲ್ ಬಿ. ಹೊಸೂರು ತಹಸೀಲ್ದಾರ್ ಡಾ.ಎನ್. ಭಾಸ್ಕರ್, ಟ್ರಸ್ಟಿನ ಗೌರವಾಧ್ಯಕ್ಷ ಆರ್.ಎಸ್. ಶಿವಪ್ರಸಾದ್, ಯಲುವಳ್ಳಿ ರಮೇಶ್, ಸುಬ್ಬರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.