ಚುನಾವಣೆ; ಮಾಜಿ ಶಾಸಕ ಸುಧಾಕರ್ಗೆ ಮುಖಭಂಗ
ಕ.ಪ್ರ.ವಾರ್ತೆ ಚಿಂತಾಮಣಿ ಸೆ. 2
ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮಾಜಿ ಶಾಸಕ ಎಂ.ಸಿ. ಸುಧಾಕರ್ಗೆ ಮುಖಭಂಗವಾಗಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಬೆಂಬಲಿತ ಸದಸ್ಯರು ಬಹುಮತ ಪಡೆದಿದ್ದಾರೆ.
ತಾಲೂಕಿನ ಮೈಲಾಂಡ್ಲಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಭಾನುವಾರ ನಡೆದ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಬೆಂಬಲಿತ ಜೆಡಿಎಸ್ ಸದಸ್ಯರಾದ ರವೀಂದ್ರಗೌಡ, ರಾಮಪ್ಪ, ಮುನಿರತ್ನಮ್ಮ, ದೊಡ್ಡಮುನಿವೆಂಕಟಪ್ಪ, ಶಿವಾರೆಡ್ಡಿ ಗೆದ್ದಿದ್ದಾರೆ. ಮಾಜಿ ಶಾಸಕ ಸುಧಾಕರ್ ಬೆಂಬಲಿತ 4 ಜನ ಸದಸ್ಯರಾದ ವಿಶ್ವನಾಥ ಶರ್ಮ, ಆನೂರು ಮಂಜು, ಅಶ್ವಥಪ್ಪ, ರತ್ನಮ್ಮ ಜಯಶೀಲರಾಗಿದ್ದಾರೆ. ಕಾಂಗ್ರೆಸ್ಸಿನ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಬೆಂಬಲಿತ ಸದಸ್ಯ ನಟರಾಜ್ ಜಯಶೀಲರಾಗಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ವಿಜಯೋತ್ಸವ: ಬಹುಮತ ಪಡೆದ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಆಡಳಿತ 'ಕೈ' ವಶ ಮಾಡಿಕೊಂಡ ಜೆಡಿಎಸ್ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕುರುಬೂರು ಗ್ರಾಮದಲ್ಲಿ ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು. ನಂತರ ಜೆಡಿಎಸ್ ಹಿರಿಯ ಮುಖಂಡ ಹಾಗೂ ಸದಸ್ಯ ರವೀಂದ್ರಗೌಡ ಮಾತನಾಡಿ, ಹಣ ಬಲದಿಂದ ಮತದಾರರನ್ನು ಆಸೆ, ಆಮಿಷಗಳನ್ನು ತೋರಿದ ಮಾಜಿ ಶಾಸಕ ಸುಧಾಕರ್ ಈ ಚುನಾವಣೆಯಲ್ಲಿ ಮುಖಭಂಗವಾಗಿ ಸೋಲನ್ನು ಸಹಿಸದೆ ಹಣ ಹೆಂಡ ಸುರಿದರೂ ಮತದಾರರನ್ನು ಇದನ್ನು ತಿರಸ್ಕರಿಸಿ ಜೆಡಿಎಸ್ಗೆ ಬಹುಮತ ನೀಡಿದ್ದಾರೆಂದು ಹೇಳಿದರು.
ಪೊಲೀಸ್ ಬಂದೋಬಸ್ತ್: ಮೈಲಾಂಡ್ಲಹಳ್ಳಿಯ ಕಾಲೇಜು ಮೈದಾನದ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾಜಿ ಕೃಷ್ಣೇಗೌಡ, ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ರಾಚಾಪುರ ಶ್ರೀನಿವಾಸ್, ಬಂದಾರ್ಲಹಳ್ಳಿ ಮಂಜಣ್ಣ, ವಂಶಿ, ಮಲ್ಲಿಕಾರ್ಜುನಗೌಡ, ಶಿವಣ್ಣ, ನಾಗರಾಜ್, ಸುರೇಂದ್ರಗೌಡ, ಸೀನಣ್ಣ, ನಾರಾಯಣಮೂರ್ತಿ ಸೇರಿದಂತೆ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

