ಕೋಲಾರ

ಬಸ್ ಸಂಚಾರ ಅವ್ಯವಸ್ಥೆ: ದಿಢೀರ್ ಪ್ರತಿಭಟನೆ

Published On :

ಕ.ಪ್ರ.ವಾರ್ತೆ   ಮಾಲೂರು   ಸೆ.2
ಮಾಸ್ತಿ ಕಡೆ ಬಸ್ ಸಂಚಾರದ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳು ಸೋಮವಾರ ಸಂಜೆ ಬಸ್ ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ರಸ್ತೆ ಬಂದ್ ನಡೆಸಿದರು.
  ಪ್ರತಿ ನಿತ್ಯ ಗ್ರಾಮಾಂತರ ಪ್ರದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮಾಲೂರು ಪಟ್ಟಣಕ್ಕೆ ಬರುತ್ತಿದ್ದು, ಅದರಲ್ಲೂ ಮಾಸ್ತಿ ಕಡೆಯಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಟ್ಟಣಕ್ಕೆ ಬರುತ್ತಿದ್ದು, ಸರ್ಕಾರಿ ಬಸ್ಗಳು ನಿಗದಿತ ಸಮಯಕ್ಕೆ ಬಾರದೆ ತೊಂದರೆ ಅನುಭವಿಸುತ್ತಿದ್ದಾರೆ. ಮಾಸ್ತಿ ಕಡೆಗೆ ಪ್ರತಿ ಗಂಟೆಗೆ ಒಂದರಂತೆ ಬಸ್ ಸಂಚಾರವಿದ್ದ ಸರ್ಕಾರಿ ಬಸ್ಗಳು ಮಧ್ಯಾಹ್ನ ಒಂದು ಗಂಟೆ ನಂತರ ಬಸ್ ಸಂಚಾರ ವಿರಳದ ಜತೆಯಲ್ಲಿ ನಿಗದಿತ ವೇಳೆಯಲ್ಲಿ ಬರುತ್ತಿಲ್ಲ ಎಂದು ಆಪಾದಿಸಿದ ವಿದ್ಯಾರ್ಥಿಗಳು ಈ ಬಗ್ಗೆ ಸ್ಥಳೀಯ ಡಿಪೋ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.ನಿಗದಿತ ವೇಳೆಗೆ ಬಸ್ ಬಾರದ ಹಿನ್ನೆಲೆಯಲ್ಲಿ ಬರುವ ಬಸ್ಗೆ ಇನ್ನೂರಕ್ಕೂ ಹೆಚ್ಚು ಜನ ಹತ್ತುವುದರಿಂದ ಪ್ರಾಮವನ್ನು ಕೈ ನಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಅದಲ್ಲದೇ ನಿಗದಿತ ವೇಳೆಗೆ ಗ್ರಾಮವನ್ನು ತಲುಪದ  ಕಾರಣ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಯಾಗುತ್ತಿದೆ ಎಂದ ವಿದ್ಯಾರ್ಥಿಗಳು ಕೆಲವು ಸರ್ಕಾರಿ ಬಸ್ಗಳ ನಿರ್ವಾಹಕರು ಖಾಸಗಿ ಬಸ್ ಮಾಲೀಕರೊಡನೆ ಶಾಮೀಲಾಗಿ ಖಾಸಗಿ ಬಸ್ ನಿಗದಿತ ವೇಳೆಯಲ್ಲಿ ತೆರಳಿದ ನಂತರ ಸರ್ಕಾರಿ ಬಸ್ಗಳು ಬರುತ್ತಿದ್ದು, ನಮ್ಮ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ಬಸ್ ನಿಲ್ದಾಣದಲ್ಲಿ ಪಿಕ್ ಅವರ್ ಆಗಿದ್ದ ಕಾರಣ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಿ ಇತರರ ಸಂಚಾರಕ್ಕೆ ತೊಂದರೆಯಾಗುವ ಕಾರಣ ತಮ್ಮ ಪ್ರತಿಭಟನೆಯನ್ನು ಡಿಪೋ ಮುಂದೆ ಮಾಡುವಂತೆ ತಿಳಿಸಿ ವಿದ್ಯಾರ್ಥಿಗಳನ್ನು ಚದುರಿಸಿದರು.   
ಪೊಲೀಸರಿಂದ ದೌರ್ಜನ್ಯ: ಬಸ್ ತೊಂದರೆ ನಿತ್ಯ ಅನುಭವಿಸುತ್ತಿರುವ ನಮಗೆ ಡಿಪೋ ವ್ಯವಸ್ಥಾಪಕರಿಂದಲೂ ಸ್ಪಂದನೆ ಸಿಗದ ಕಾರಣ ನಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದರೆ, ಪೊಲೀಸರು ವಿನಾ ಕಾರಣ ನಮ್ಮನ್ನು ಪ್ರತಿಭಟನೆ ವಿಫಲಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಅಸಹಕಾರ ತೋರುತ್ತಿದ್ದಾರೆ ಎಂದು ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಮುಖಂಡರಾದ ರವಿ, ಪೃಥ್ವಿ, ಅನಿಲ್, ರಘು, ಲೋಕೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.