ಕೋಲಾರ

ಕಾರು ಡಿಕ್ಕಿ-ಇಬ್ಬರು ಸಾವು

Published On :

ಕೋಲಾರ: ರಸ್ತೆ ದಾಟುತ್ತಿದ್ದ ಮೂವರು ವ್ಯಕ್ತಿಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ಇನ್ನೊಬ್ಬರು ಗಾಯಗೊಂಡಿರುವ ಘಟನೆ ಕೋಲಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಂಡರಾಜನಹಳ್ಳಿ ದರ್ಗಾ ಬಳಿ ಭಾನುವಾರ ರಾತ್ರಿ ನಡೆದಿದೆ. ಮೃತರನ್ನು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಚಿಂತಮಾಕನಪಲ್ಲಿ ಗ್ರಾಮದ ದ್ವಾರಕನಾಥ್ ಮತ್ತು ದೇವಕೃಷ್ಣ ಎಂದು ಗುರುತಿಸಲಾಗಿದ್ದು, ಗಾಯಾಳು ಪುಟ್ಟರಾಜು ಎಂಬುವರನ್ನು ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಕಳೆದ ರಾತ್ರಿ ಈ ನತದೃಷ್ಟರು ವರ್ತೂರ್ ಸಂತೆಗೆ ಹೋಗಿ ಟಾಟಾ ಎಸ್ ವಾಹನದಲ್ಲಿ ತಮ್ಮ ಊರಿಗೆ ವಾಪಸಾಗುವಾಗ ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ನ್ಯೂ ತಾಜ್ ಹೊಟೇಲ್ಗೆ ಊಟ ಮಾಡಲೆಂದು ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ರಸ್ತೆ ದಾಡುತ್ತಿದ್ದಾಗ, ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಕಾರು ಚಾಲಕನ ಅತಿ ವೇಗ ಹಾಗೂ ಅಜಾಗರುಕತೆಯಿಂದ ಈ ಅಪಘಾತ ನಡೆದಿದ್ದು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಎಸ್ಎಫ್ಸಿಎಸ್: ವರ್ತೂರು ಬಣಕ್ಕೆ ಜಯ
ಕೋಲಾರ: ತಾಲೂಕಿನ ಕ್ಯಾಲನೂರು ಎಸ್ಎಫ್ಸಿಎಸ್ಗೆ ನಡೆದ ಚುನಾವಣೆಯಲ್ಲಿ ಶಾಸಕ ವರ್ತೂರು ಪ್ರಕಾಶ್ ಬಣದ ತಿಪ್ಪೇನಹಳ್ಳಿ ಆರ್.ಕೃಷ್ಣಪ್ಪ , ಅಮ್ಮನಲ್ಲೂರು ವೆಂಕಟರೆಡ್ಡಿ, ಕರೇನಹಳ್ಳಿ ನಾರಾಯಣಪ್ಪ, ರಾಮಪುರ ಆಂಜಿನಪ್ಪ, ಚಲ್ದಿಗಾನಹಳ್ಳಿ ರಾಜಣ್ಣ, ಕ್ಯಾಲನೂರು ನಜೀರ್ ಅಹಮದ್, ರಾಮಾಂಜಿನಯ್ಯ, ಕಾಡಹಳ್ಳಿ ಅಶ್ವಥಮ್ಮ ಆಯ್ಕೆಯಾಗಿದ್ದಾರೆ. ನೂತನ ನಿರ್ದೇಶಕರನ್ನು ಶಾಸಕ ವರ್ತೂರು ಪ್ರಕಾಶ್ ಅಭಿನಂದಿಸಿ, ರೈತರ ಹಿತದೃಷ್ಟಿಯಿಂದ ಎಸ್ಎಫ್ಸಿಎಸ್ ನೂತನ ಆಡಳಿತ ಮಂಡಲಿ ಸದಸ್ಯರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಎಂದು ಕಿವಿಮಾತು ಹೇಳಿದರು. ಇದೆ ವೇಳೆ ಬೆಗ್ಲಿ ಪ್ರಕಾಶ್, ಕೃಷ್ಣಾಪುರ ಶ್ರೀನಿವಾಸ್, ತಿಪ್ಪೇನಹಳ್ಳಿ ನಾಗೇಶ್ ಮತ್ತಿತರು ಉಪಸ್ಥಿತರಿದ್ದರು.
ಕನ್ಯಕಾ ಪರಮೇಶ್ವರಿ ಸೊಸೈಟಿಗೆ ಆಯ್ಕೆ
ಕೋಲಾರ: ನಗರದ ಕನ್ಯಕಾಪರಮೇಶ್ವರಿ ಸೊಸೈಟಿಯ 2013-18 ನೇ ಸಾಲಿನ ನಿರ್ದೇಶಕರ ಚುನಾವಣೆಯಲ್ಲಿ 9 ಸಾಮಾನ್ಯ ಹಾಗೂ 2 ಮಹಿಳಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಕಾರ್ಯದರ್ಶಿ ಬಿ. ಮುನಿನಂಜಯ್ಯ ತಿಳಿಸಿದ್ದಾರೆ. ನಿರ್ದೇಶಕರ ಚುನಾವಣೆಯನ್ನು ಸೆ.7 ರಂದು ನಿಗದಿಪಡಿಸಲಾಗಿದ್ದು 31 ನಾಮಪತ್ರಗಳು ಸಲ್ಲಿಕೆಯಾಗಿದ್ದು ಕಡೇ ಗಳಿಗೆಯಲ್ಲಿ 20 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದ ಕಾರಣ ಉಳಿದ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಚುನಾವಣೆ ನಡೆಸುವ ಅಗತ್ಯ ಕಾಣಬರುತ್ತಿಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿರ್ದೇಶಕರಾಗಿ ಸಿ.ಎಂ. ಅಶ್ವಥನಾರಾಯಣ ಗುಪ್ತ, ಡಿ.ಕೆ. ಬಾಲಾಜಿ, ಎ.ಎಸ್. ಬದರೀನಾಥ್, ಟಿ.ಜಿ. ರಾಘವೇಂದ್ರ ಬಾಲಾಜಿ, ಜಿ.ಸಿ. ರಾಜೇಶ್ ಬಾಬು, ಜೆ.ಜಿ. ಶಿವಶೇಖರ್, ಡಿ.ಡಿ. ಸುಬ್ರಮಣ್ಯಂ, ಸಿ.ಪಿ. ಸುರೇಶ್ಬಾಬು, ಸಿ.ಜಿ. ಸೂರ್ಯನಾರಾಯಣಶೆಟ್ಟಿ, ರಕ್ಷ ಎಸ್. ಮೂರ್ತಿ, ಬಿ.ಜಿ. ಶ್ರೀದೇವಿ ಆಯ್ಕೆಯಾಗಿರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.