ಕೊನೆಗೂ ಪತ್ತೆಯಾದ ನವಜಾತ ಶಿಶು
ಗೌರಿಬಿದನೂರು: ಆ.31ರಂದು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ನಾಪತ್ತೆಯಾಗಿದ್ದ ನವಜಾತ ಶಿಶು ಸೋಮವಾರ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಗೌರಿಬಿದನೂರು ಪೊಲೀಸರು ನವಜಾತ ಶಿಶುವನ್ನು ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಬೆಳಿಗ್ಗೆ ಬೆಂಗಳೂರು ನಗರ ಬಸ್ಸಿನಲ್ಲಿ ಮಗವನ್ನು ಕೊಂಡೊಯ್ಯುತ್ತಿದ್ದ ಮಹಿಳೆಯೊಬ್ಬಳನ್ನು ಪಕ್ಕದಲ್ಲಿದ್ದ ಮಹಿಳೆಯೊಬ್ಬಳಿಗೆ 'ಸ್ವಲ್ಪ ಮಗು ಇಟ್ಟುಕೊಂಡಿರಿ' ಎಂದು ಮಗು ನೀಡಿ ಕೆಳಗಿಳಿದಿದ್ದಾಳೆ. ಮಗು ಪಡೆದವರು ಆಕೆ ವಾಪಸ್ ಬರುತ್ತಾಳೆ ಎಂದು ಕಾಯುತ್ತಿದ್ದರೂ ಮಗುವನ್ನು ನೀಡಿದಾಗಕೆ ವಾಪಸ್ ಬಾರದಿದ್ದಾಗ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಮಗುವನ್ನು ಕಿದ್ವಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಮಗುವಿನ ಬಗ್ಗೆ ಗೌರಿಬಿದನೂರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಗೌರಿಬಿದನೂರು ಪೊಲೀಸರು ಮಗುವಿನ ತಾಯಿ ಗೌರಿಬಿದನೂರು ತಾಲೂಕು ಹಾಲಗಾನಹಳ್ಳಿಯ ಗೀತಾ ಹಾಗೂ ಅವರ ತಾಯಿ ಶಾಂತಮ್ಮ ಅವರಿಗೆ ಮಾಹಿತಿ ನೀಡಿ ಬೆಂಗಳೂರಿಗೆ ತೆರಳಿ ಮಗು ಗುರ್ತಿಸಿದ್ದು ಮಗುವನ್ನು ಸುರಕ್ಷಿತವಾಗಿ ಗೌರಿಬಿದನೂರಿಗೆ ಕರೆತಂದಿದ್ದು ಮಗು ಆರೋಗ್ಯವಾಗಿದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಲಕ್ಷ್ಮಯ್ಯ ತಿಳಸಿದ್ದಾರೆ.
ಆರೋಪಿ ಪತ್ತೆಗೆ ಬಲೆ: ಮಗುವನ್ನು ಕಳವು ಮಾಡಿದ್ದ ಆರೋಪಿ ಪತ್ತೆ ಮಾಡಲು ಬಲೆ ಬೀಸಿದ್ದು ಶೀಘ್ರದಲ್ಲಿಯೇ ಪತ್ತೆಹಚ್ಚಲಾಗುವುದು ಎಂದು ವೃತ್ತ ನಿರೀಕ್ಷಕ ಲಕ್ಷ್ಮಯ್ಯ ತಿಳಿಸಿದ್ದಾರೆ. ನವಜಾತ ಶಿಶುಗಳು ನಾಪತ್ತೆ ಪ್ರಕರಣ ಪುನರಾವರ್ತನೆಯಾಗುತ್ತಿರುವುದು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ಆಡಳಿತದ ಬೇಜವಾಬ್ದಾರಿತನವಾಗಿದ್ದು, ಈ ನಿಟ್ಟಿನಲ್ಲಿ ಗಂಭೀರ ಹಾಗೂ ಸೂಕ್ಷ್ಮ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

