ಪ್ರಕರಣಗಳ ಮಾಹಿತಿಗಾಗಿ ಕಿಯೋಸ್ಕ್ ಲೋಕಾರ್ಪಣೆ
ಕೋಲಾರ: ಕಕ್ಷಿದಾರರು ತಮ್ಮ ಮೊಕದ್ದಮೆಗಳ ವಿವರ ಹಾಗೂ ವಿಚಾರಣೆ ಯಾವ ಹಂತದಲ್ಲಿದೆ, ಮುಂದಿನ ವಿಚಾರಣೆ ಯಾವಾಗ ನಡೆಯುತ್ತಿದೆ ಎಂಬುದನ್ನು ತಿಳಿಯಲು ಜಿಲ್ಲಾ ನ್ಯಾಯಾಲಯದಲ್ಲಿ ಕಿಯೋಸ್ಕ್ ಕೇಂದ್ರ ಸ್ಥಾಪಿಸಲಾಗಿದೆ.
ಈ ನಿಟ್ಟಿನಲ್ಲಿ ಇನ್ನು ಮುಂದೆ ಎಲ್ಲಾ ಪ್ರಕರಣಗಳ ವಿವರಗಳನ್ನು ಕಿಯೋಸ್ಕದಲ್ಲಿ ನಮೂದಿಸಿದಾಗ ತಮ್ಮ ಪ್ರಕರಣದ ಮಾಹಿತಿ ಬಹುಬೇಗ ಪಡೆಯಲು ಅನುಕೂಲವಾಗುತ್ತದೆ.
ಸೋಮವಾರ ಜಿಲ್ಲಾ ನ್ಯಾಯಾಲಯದಲ್ಲಿ ಕಿಯೋಸ್ಕ್ ಕೇಂದ್ರ ಲೋಕಾರ್ಪಣೆ ಮಾಡಿ ಮಾತನಾಡಿದ ಜಿಲ್ಲಾ, ಸತ್ರ ನ್ಯಾಯಾಧೀಶ ರೇಣುಕಾ ಪ್ರಸಾದ್, ಜಿಲ್ಲೆಯ ಐದು ತಾಲೂಕುಗಳಲ್ಲಿನ ನ್ಯಾಯಾಲಯಗಳ ಪ್ರಕರಣಗಳ ಮಾಹಿತಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಸ್ಥಾಪಿಸಿರುವ ಕಿಯೋಸ್ಕದಲ್ಲಿ ಪಡೆಯಬಹುದೆಂದು ತಿಳಿಸಿದರು.
ಮೊಕದ್ದಮೆಗಳ ಪೂರ್ಣ ಮಾಹಿತಿ: ಕಿಯೋಸ್ಕ ಸ್ಥಾಪನೆಯಿಂದ ಕಕ್ಷಿದಾರರಿಗೆ ಮೊಕದ್ದಮೆಗಳ ಪೂರ್ಣ ಮಾಹಿತಿಯನ್ನು ಪಡೆಯಲು ಸುಲಭವಾಗುತ್ತದೆ ಎಂದರಲ್ಲದೆ ಕಳೆದ ಹತ್ತು ವರ್ಷಗಳ ಪ್ರಕರಣಗಳ ಮಾಹಿತಿಯನ್ನು ಕಿಯೋಸ್ಕಾದಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.
ನ್ಯಾಯಾಲಯದ ತೀರ್ಪಿನ ಪ್ರತಿಗಳನ್ನು ನೀಡಲು ಇನ್ನು 6 ತಿಂಗಳು ಬೇಕಾಗುತ್ತದೆ. ಅದಕ್ಕೆ ಎಲ್ಲಾ ರೀತಿಯಲ್ಲಿ ಸಜ್ಜುಗೊಳಿ ಸಬೇಕಾಗಿದೆ ಎಂದು ಹೇಳಿದರು.
ಬೆಂಗಳೂರಿನ ಹೈಕೋರ್ಟ್ನಲ್ಲಿ ಪ್ರಕರಣವಿದ್ದರೂ ಮಾಹಿತಿಯನ್ನು ಪಡೆದು ಕೊಳ್ಳಬಹುದು. ಉಚ್ಚ ನ್ಯಾಯಾಲಯದ ಪ್ರಕರಣ ಸಂಖ್ಯೆ ನಮೂದಿಸಿ ರಿಟ್, ಪಿಟೀಷನ್, ಮೇಲ್ಮನವಿ ಬಗ್ಗೆ ಸಹಾ ಸಾರ್ವಜನಿಕರು ಮಾಹಿತಿ ಪಡಯಬಹುದು ಎಂದು ಇದೆ ವೇಳೆ ತಿಳಿಸಿದರು.
ಸಾರ್ವಜನಿಕರು ಇನ್ನು ಮುಂದೆ ಪ್ರಕರಣಗಳ ಮಾಹಿತಿಯನ್ನು ಕಿಯೋಸ್ಕ್ ನೀಡುತ್ತದೆ ಹಾಗೂ ವಕೀಲರಿಂದಲೂ ಸಹಾ ಪ್ರಕರಣಗಳ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇ ಕೋರ್ಟ್ ಕಾರ್ಯಕ್ರಮದಲ್ಲಿ ಪ್ರಕರಣ ಮಾಹಿತಿ ಎಲ್ಲಾ ಕಾಲದಲ್ಲೂ ಲಭ್ಯವಿರುತ್ತದೆ. ಪ್ರತಿದಿನ ಸಂಜೆ 5.30 ಗಂಟೆ ಮೇಲೆ ಪ್ರಕರಣಗಳ ಮಾಹಿತಿಯನ್ನು ಕಿಯೋಸ್ಕಗೆ ಅಪ್ ಲೋಡ್ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಮಾತನಾಡಿ, ಕಕ್ಷಿದಾರರು ಪ್ರಕರಣ ವಿವರಗಳನ್ನು ಆಯಾ ವಕೀಲರಿಂದಲೂ ಪಡೆಯಬಹುದು. ಕಕ್ಷಿದಾರರ ವಾದ-ವಿವಾದಗಳ ಕೆಲಸಗಳನ್ನು ವಕೀಲರೇ ಮಾಡುತ್ತಾರೆ ಎಂಬುದನ್ನು ಸಾರ್ವಜನಿಕರು ಅರಿಯಬೇಕೆಂದರು.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸಂಗಣ್ಣ ಪಾಟೀಲ್, ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಕಿಣಿಕೇರಿ, ಕುಟುಂಬ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಪ್ರೇಮಾವತಿ ಮಲ್ಲಿಕಾರ್ಜುನ, ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಕುಮಾರ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆರ್. ನಟೇಶ್, ಮೊದಲ ಹೆಚ್ಚುವರಿ ಸಿಜೆಎಂ ಕೆಂಗಬಾಲಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

