ಕೋಲಾರ

ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಇಲ್ಲ: ಸುಬ್ಬಾರೆಡ್ಡಿ

Published On :

ಬಾಗೇಪಲ್ಲಿ: ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಬರುವ ಅನುದಾನದಲ್ಲಿ ಯಾವುದೇ ಕಾಮಗಾರಿಗಳಲ್ಲಿ ನೂರಕ್ಕೆ ನೂರರಷ್ಟು ಉತ್ತಮ ಗುಣಮಟ್ಟ ಇರಲೇಬೇಕು. ಗುಣಮಟ್ಟದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜೀ ಆಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.  
ತಾಲೂಕಿನ ಪಾತಪಾಳ್ಯ ಹೋಬಳಿ  ಬಿಳ್ಳೂರು ಗ್ರಾಮದಲ್ಲಿ ಪಿಎಂಜಿಎಸ್ವೈ ಯೋಜನೆಯಡಿಯಲ್ಲಿ  ರು. 2 ಕೋಟಿ 15 ಲಕ್ಷ ವೆಚ್ಚದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಮ್ಮ 5 ವರ್ಷಗಳ ಅಧಿಕಾರದ ಅವಧಿಯಲ್ಲಿ  ರಸ್ತೆ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ಇದೆ ವೇಳೆ ಶಾಸಕರು ವಾಗ್ದಾನ ಮಾಡಿದರು.
ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ: ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನದಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಹಣದ ಆಸೆಗಾಗಿ ಕಳಪೆ ಕಾಮಗಾರಿ ಕೈಗೊಳ್ಳುವ ಮೂಲಕ ಕ್ಷೇತ್ರದ ಜನತೆಯನ್ನು ವಂಚಿಸುವಂತಹ ಅಧಿಕಾರಿಗಳನ್ನ ಹಾಗೂ ಗುತ್ತಿಗೆದಾರರನ್ನು ನಾನು ಸುಮ್ಮನೆ ಬಿಡುವುದಿಲ್ಲ. ಕಳಪೆಯೇನಾದರೂ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬಿಳ್ಳೂರು-ತಿಮ್ಮಂಪಲ್ಲಿ ರಸ್ತೆಗೆ ಮುಕ್ತಿ: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದಿದ್ದ ತಾಲೂಕಿನ ಬಿಳ್ಳೂರು-ತಿಮ್ಮಂಪಲ್ಲಿ ರಸ್ತೆಗೆ ಕೊನೆಗೂ ಮುಕ್ತಿ ದೊರೆಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಈ ಭಾಗದ ಜನರಿಗೆ ಸರಿಯಾದ ರಸ್ತೆಯಿಲ್ಲದೇ ತೊಂದರೆಯಾಗಿತ್ತು. ಬಾಗೇಪಲ್ಲಿಯಿಂದ ತಿಮ್ಮಂಪಲ್ಲಿ ಗ್ರಾಮದವರೆಗೂ ಉತ್ತಮ ರಸ್ತೆಯಿದೆ. ಆದರೆ ತಿಮ್ಮಂಪಲ್ಲಿ ಗ್ರಾಮದಿಂದ ಬಿಳ್ಳೂರಿನವರವಿಗೂ ಸುಮಾರು ವರ್ಷಗಳಿಂದಲ್ಲೂ ದುರಸ್ತಿ ಕಾಣದೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು  ಎಂದರು.
ಕಾಮಗಾರಿ ಮುಂದಿನ ವರ್ಷ ಪೂರ್ಣ:ಈಗಾಗಲೇ ತಿಮ್ಮಂಪಲ್ಲಿಯಿಂದ ಸಾಕವಾಂಡ್ಲಪಲ್ಲಿ ವರೆವಿಗೂ ಲೋಕೋಪಯೋಗಿ ಇಲಾಖೆ ವತಿಯಿಂದ ಸುಸಜ್ಜಿತ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಸಾಕವಾಂಡ್ಲಪಲ್ಲಿಯಿಂದ ಬಿಳ್ಳೂರಿನ ವರೆವಿಗೂ ಪಿಜಿಎಸ್ವೈ ಯೋಜನೆಯಲ್ಲಿ 2.15 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು ಈ ಕಾಮಗಾರಿಯನ್ನು ಮುಂದಿನ 2014ರ ಫೆಬ್ರವರಿ ಒಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು.ಬಿಳ್ಳೂರು ಮಾರ್ಗದ ಮಧ್ಯೆ ತಿರುವಿನಲ್ಲಿ ಬೃಹತ್ ಕಲ್ಲು ಬಂಡೆಯಿದ್ದು ಅಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವ ಪರಿಣಾಮ ರಸ್ತೆ ಕಾಮಗಾರಿಗೆ ಮುಂಚಿತವಾಗಿಯೇ ಆ ಕಲ್ಲು ಬಂಡೆಯನ್ನು ತೆಗೆದು ನೆರವಾಗಿ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಿದರು.
ಪಿಎಂಜಿಎಸ್ವೈ ಇಲಾಖೆ ಎಇಇ ರಾಮಕೃಷ್ಣಪ್ಪ, ಎಇ ಶ್ರೀನಿವಾಸ್, ಜಿಪಂ ಮಾಜಿ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ, ಮಾಜಿ ಉಪಾಧ್ಯಕ್ಷ ಚೆಂಡೂರ್ ವೆಂಕಟೇಶ್, ಭೂ ಅಭಿವೃದ್ಧಿ ಬ್ಯಾಂಕ್  ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಅಮರನಾಥರೆಡ್ಡಿ, ಗ್ರಾಮದ ಮುಖಂಡರಾದ ಸೂರ್ಯನಾರಾಯಣರೆಡ್ಡಿ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.