ಚಾಲಕನ ಸಮಯ ಪ್ರಜ್ಞೆ: ತಪ್ಪಿದ ಭಾರಿ ದುರಂತ
ಬಂಗಾರಪೇಟೆ: ಮಾನವ ಸಹಿತ ಲೆವೆಲ್ ಕ್ರಾಸಿಂಗ್ ಬಳಿ ಕಾವಲುಗಾರನ ನಿರ್ಲಕ್ಷ್ಯದಿಂದಾಗಿ ಅನಿರೀಕ್ಷಿತವಾಗಿ ಗೂಡ್ಸ್ ಗಾಡಿಯೊಂದು ಬಂದರೂ ಗೇಟ್ ಹಾಕಲು ದಿಕ್ಕಿಲ್ಲದೆ ಅತ್ತ ವಾಹನಗಳು ಒಮ್ಮೆಲೆ ಸಂಚರಿಸಿದ್ದರಿಂದ ಸಂಭವಿಸಬೇಕಾದ ಭಾರಿ ಅನಾಹುತ ಚಾಲಕನ ಸಮಯ ಪ್ರಜ್ಞೆಯಿಂದಾಗಿ ತಪ್ಪಿದೆ.
ಪಟ್ಟಣದ ಹೊರವಲಯದ ಎಸ್.ಎನ್. ರೆಸಾರ್ಟ್ ಬಳಿ ಇರುವ ಲೆವೆಲ್ ಕ್ರಾಸಿಂಗ್ನಲ್ಲಿ ಕಾವಲುಗಾರ ಬೇರೆಡೆ ಹೋಗಿದ್ದಾಗ ಪಟ್ಟಣದಿಂದ ಕೋಲಾರಕ್ಕೆ ಹೋಗಲು ಗೂಡ್ಸ್ ರೈಲು ಬಂದಿದೆ. ಇತ್ತ ಗೇಟ್ ಹಾಕಲು ಯಾರೂ ಇಲ್ಲ. ಮತ್ತೊಂದೆಡೆ ಎರಡೂ ಕಡೆಗಳಿಂದ ವಾಹನಗಳು ರಭಸವಾಗಿ ಬರುತ್ತಿದ್ದವು. ಗೂಡ್ಸ್ ರೈಲು ಬರುತ್ತಿರುವುದು ಯಾರಿಗೂ ಅರಿವೇ ಇಲ್ಲದೆ ವಾಹನಗಳನ್ನು ಚಲಾಯಿಸುತ್ತಿದ್ದರು. ಅಲ್ಲದೆ ಈ ಸಮಯದಲ್ಲಿ ಯಾವುದೇ ರೈಲು ಬರುವುದಿಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಆದರೆ ಅನಿರೀಕ್ಷಿತವಾಗಿ ರೈಲು ಬಂದೇ ಬಿಟ್ಟಿತು. ಸ್ವಲ್ಪ ರೈಲಿನ ಚಾಲಕ ಯಾಮಾರಿದ್ದರೆ ಭಾರಿ ಅನಾಹುತ ಸಂಭವಿಸಬೇಕಿತ್ತು. ಗೇಟ್ ಹಾಕದಿರುವುದನ್ನು ಗಮನಿಸಿ ತಕ್ಷಣ ರೈಲನ್ನು ನಿಲ್ಲಿಸಿದರು. ರೈಲನ್ನು ಕಂಡು ವಾಹನ ಸವಾರರೂ ಆಶ್ಚರ್ಯಗೊಂಡು ಭಯಭೀತರಾದರು.ನಂತರ ಸಾರ್ವಜನಿಕರೇ ಗೇಟ್ ಹಾಕಿ ರೈಲು ಸಂಚಾರಕ್ಕೆ ಮುಕ್ತ ಮಾಡಿಕೊಟ್ಟರು. ಇಲಾಖೆ ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದ್ದು ಇಲಾಖೆ ವಿರುದ್ಧ ಸಾರ್ವಜನಿಕರು ಶಾಪ ಹಾಕುತ್ತಿದ್ದರು. ಪಟ್ಟಣದಿಂದ ಕೋಲಾರ ರೈಲ್ವೆ ನಿಲ್ದಾಣದವರೆಗೂ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಯಾವುದೇ ಅಡಚಣೆಯಾಗದಂತೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲು ರೈಲ್ವೆ ಇಲಾಖೆ ಈ ಮಾರ್ಗದಲ್ಲಿ ಬರುವ 6 ಗೇಟೆಗಳನ್ನು ಮುಚ್ಚಿ ಅಂಡರ್ಪಾಸ್ ನಿರ್ಮಾಣ ಮಾಡುತ್ತಿದೆ. ವಾಸ್ತವವಾಗಿ ಈ ಮಾರ್ಗದಲ್ಲಿ ಬೆಳಗ್ಗೆ ಬಿಟ್ಟರೆ ಮತ್ತೆ ಸಂಜೆ ಮಾತ್ರ ರೈಲು ಸಂಚಾರವಿದೆ ಇಷ್ಟಕ್ಕೆ ಅಂಡರ್ಪಾಸ್ ಮಾರ್ಗದ ಅಗತ್ಯ ಇತ್ತೇ ಎಂಬ ಟೀಕೆಗಳು ರೈತರಿಂದ ಕೇಳಿ ಬಂದವು. ಅಲ್ಲದೆ ಅಂಡರ್ಪಾಸ್ಗಳು ತುಂಬಾ ಕಿರಿದಾಗಿರುವುದರರಿಂದ ದ್ವಿಚಕ್ರ ವಾಹನಗಳಿಗೆ ಮಾತ್ರ ಅನುಕೂಲವಾಗುವುದೇ ವಿನಃ ದೊಡ್ಡ ವಾಹನಗಳಿಗಲ್ಲ ಎಂದು ರೈತರು ವಿರೋಧ ವ್ಯಕ್ತಪಡಿಸಿದ್ದು.ಈ ಅಂಡರ್ಪಾಸ್ಗಳಿಗೆ ಇಲಾಖೆ ಕೋಟ್ಯಂತರ ರು. ವೆಚ್ಚ ಮಾಡುತ್ತಿದೆ. ಆದರೆ ಲೆವೆಲ್ ಕ್ರಾಸಿಂಗ್ ಬಳಿ ಕಾವಲುಗಾರನನ್ನು 24ಗಂಟೆಯೂ ಕಾರ್ಯನಿರ್ವಹಿಸುವಂತೆ ಮಾಡಬೇಕೆಂಬ ಸಮಯ ಪ್ರಜ್ಞೆ ಇಲ್ಲವೆ ಎಂದು ಪ್ರಶ್ನಿಸಿ ಮುಂದಾದರು ಇಂತಹ ಪ್ರಕರಣ ಮರುಕಳಿಸದಂತೆ ಇಲಾಖೆ ಎಚ್ಚರವಹಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

