ಕೋಲಾರ

ಮದುವೆಗೆ ಅಡ್ಡಿ; ಯುವಕ ಆತ್ಮಹತ್ಯೆ ವಿಫಲ ಯತ್ನ

Published On :

ಚಿಂತಾಮಣಿ: ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳ ಮದುವೆಗೆ ಪೋಷಕರು ಅಡ್ಡಿಯಾಗಿದ್ದಾರೆಂದು ಆರೋಪಿಸಿ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಯರ್ರಯ್ಯಗಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ: ತಾಲೂಕಿನ ಯರ್ರಯ್ಯಗಾರಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಸರಸ್ವತಿ(ಹೆಸರು ಬದಲಾಯಿಸಿದೆ)(17) ಬಾಲಕಿ ಕಳೆದ 1 ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಕಾಣೆಯಾಗಿರುವುದಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಘಟನೆಗೆ ಸಂಬಂಧಿಸಿ ಪತ್ತೆ ಹಟ್ಟಿದ ಪೊಲೀಸರು, ಶ್ರೀನಿವಾಸಪುರ ತಾಲೂಕಿನ ಮೂಗಲಹಳ್ಳಿ ಗ್ರಾಮದಿಂದ ಬಾಲಕಿಯನ್ನು ಕರೆದುಕೊಂಡು ಬಂದರು.
ಪ್ರೇಮ ಪ್ರಕರಣ ಬಯಲು: ಯರ್ರಯ್ಯಗಾರಹಳ್ಳಿ ಗ್ರಾಮದ ಅದೇ ಕೋಮಿಗೆ ಸೇರಿದ ಅಜಯ್ಕುಮಾರ್(20) ಬಿನ್ ವೆಂಕಟೇಶಪ್ಪ ಎಂಬಾತನು ಕಳೆದ ಹಲವು ದಿನಗಳಿಂದ ಸರಸ್ವತಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ಹುಡುಗಿ ಕಡೆಯವರು ಮದುವೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಓಡಿ ಹೋಗಿರುವುದಾಗಿ ಪೊಲೀಸರ ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದೆ.
ಹುಡುಗಿ ಕಡೆಯ ಪೋಷಕರು ಹುಡುಗನ ಸಂಬಂಧ ಇಷ್ಟವಿಲ್ಲದೆ, ಹುಡುಗಿಗೆ ಬುದ್ಧಿವಾದ ಹೇಳಿದರೆಂದು ಎಂದು ತಿಳಿದು ಸೋಮವಾರ ರಾತ್ರಿ ಹುಡುಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡ ಅಜಯ್ಕುಮಾರ್ನನ್ನು ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಎಸ್ಎನ್ಆರ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹುಡುಗಿ ಪೋಷಕರ ದೂರು: ಬಾಲಕಿಯನ್ನು ನಂಬಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವ ಆರೋಪಿ ಅಜಯ್ಕುಮಾರ್ ವಿಷ ಸೇವಿಸಿರುವುದಾಗಿ ನಾಟಕವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೆಪ ಮಾಡಿದ್ದಾನೆ. ಇತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.