ಕೋಲಾರ

ದಾಳಿ; ಮರಳು ಸಮೇತ ಲಾರಿ ವಶ

Published On :

ಚಿಂತಾಮಣಿ: ಆಂಧ್ರಪ್ರದೇಶ ಮಾರ್ಗವಾಗಿ ಮರಳನ್ನು ಸಾಗಿಸುತ್ತಿದ್ದ ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ಬಟ್ಲಹಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ ಮರಳು ಸಮೇತ ಲಾರಿಯನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ರಾತ್ರಿ ಯರ್ರಕೋಟೆ ಗ್ರಾಮದ ಬಳಿ ನಡೆದಿದೆ. ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಯರ್ರಕೋಟೆ ಮಾರ್ಗವಾಗಿ ಸೋಮವಾರ ರಾತ್ರಿ ಆಂಧ್ರಪ್ರದೇಶದ ಬಿ. ಕೊತ್ತಕೋಟ ಕಡೆಯಿಂದ ಮರಳು ತುಂಬಿಕೊಂಡು ಲಾರಿ ಬೆಂಗಳೂರಿಗೆ ಹೋಗುತ್ತಿದ್ದಾಗ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಪಿಎಸ್ಐ ವೀಣಾಕುಮಾರ್, ಸಿಬ್ಬಂದಿ ಏಕಾಏಕಿ ದಾಳಿ ನಡೆಸಿದಾಗ ಲಾರಿ ಚಾಲಕ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೇಸ್ ದಾಖಲಿಸಿಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.
ಡಾ. ಶ್ರೀಕಾಂತಂಗೆ ನಾಳೆ ಸನ್ಮಾನ
ಗೌರಿಬಿದನೂರು: ತಾಲೂಕಿನ ಚಿಂತಲಪಲ್ಲಿ ಗ್ರಾಮದವರಾದ ಸಂಗೀತ ವಿದ್ವಾನ್ ಹಾಗೂ ಸಂಗೀತದಲ್ಲಿ ಪ್ರತಿಭೆ ತೋರಿದ ಡಾ.ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ರವರಿಗೆ 30-08-1864ರಿಂದ 02-01-1945 ವರಿಗೂ ಜೀವಿಸಿ ಹರಿಕಥ ಪಿತಾಮಹ ಎಂದು ಕೀರ್ತಿ ಪಡೆದ ಆದಿಭಟ್ಲ ನಾರಾಯಣ ದಾಸು ರವರ 150ನೇ ಜಯಂತಿ ಸಂದರ್ಭವಾಗಿ ಆದಿಭಟ್ಲ ನಾರಾಯಣದಾಸ್ ಅವಾರ್ಡ್-2013ನ್ನು ಸೆ.5ರಂದು ನೀಡಿ ಗೌರವಿಸಿ ಹಾಗೂ  ಈ ಪ್ರಶಸ್ತಿಯೊಂದಿಗೆ 1ಲಕ್ಷ ರು. ಗಳನ್ನು ನೀಡಲಾಗುವುದು ಎಂದು ಬೆಂಗಳೂರಿನ ಬಸವೇಶ್ವರ ನಗರ ದಲ್ಲಿರುವ ಸಂಗೀತ ಜಾಗೃತಿ ಸಂಸ್ಥೆಯ ಆದಿಭಟ್ಲ ವಿ. ರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.