ಮುಂದುವರಿದ ನಾಮಕರಣ ವಿವಾದ
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಸುಮಾರು 25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿ ಸಂಕೀರ್ಣಕ್ಕೆ ನಾಮಕರಣ ಮಾಡುವುದು ವಿವಾದವನ್ನು ಸೃಷ್ಟಿಸಿದೆ.
ಪ್ರಸ್ತುತ ಬೆಂಗಳೂರು ಮಾರ್ಗದ ರಸ್ತೆಯಲ್ಲಿ ನಗರದಿಂದ 7 ಕಿ.ಮೀ. ದೂರದಲ್ಲಿರುವ ರೇಷ್ಮೆ ಬಿತ್ತನೆ ಕೋಠಿ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿ, ಉತ್ತರ ಧ್ರುವಂ ದಕ್ಷಿಣ ಧ್ರುವಕೂ ಎನ್ನುವಂತೆ ನಗರದ ಬೇರೆ ಬೇರೆ ಕಡೆ ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.
ಈ ನಡುವೆ ಜನರ ಅನವಶ್ಯಕ ಅಲೆದಾಟಕ್ಕೆ ಕಡಿವಾಣ ಹಾಕಿ, ಒಂದೇ ಕಡೆ ಉತ್ತಮ ಸೇವೆಯನ್ನು ನೀಡಲು ಅನುಕೂಲವಾಗುವಂತೆ ನಗರದ ಅಣಕನೂರು ಬಳಿ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಈ ಮಧ್ಯೆ ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿ ಸಂಕೀರ್ಣಕ್ಕೆ ಹೆಸರಿಡುವ ವಿಷಯದಲ್ಲಿ ವಿವಾದವನ್ನು ಹುಟ್ಟಿಸಲಾಗಿದೆ.
ಇದೀಗ ಜಿಲ್ಲಾಡಳಿತದ ಅಧಿಕೃತ ವೆಬ್ಸೈಟ್ನಲ್ಲೂ ಸರ್ ಎಂ.ವಿ. ಜಿಲ್ಲಾ ಸಂಕೀರ್ಣ ಎಂದು ಪ್ರಕಟಿಸಲಾಗಿದೆ. ಈ ನಡುವೆ ಜಿಲ್ಲೆಯ ಹೆಚ್ಚು ಜನರು ಸರ್ ಎಂ.ವಿ. ಜಿಲ್ಲಾ ಸಂಕೀರ್ಣ ಎಂದು ಹೆಸರಿಡಬೇಕೆಂದು ಒತ್ತಾಯಿಸುತ್ತಿದ್ದರ ಮಧ್ಯೆ ರಾಜ್ಯದಲ್ಲಿನ ಯಾವುದೇ ಜಿಲ್ಲಾಡಳಿತಕ್ಕೆ ಕಟ್ಟಡಕ್ಕೆ ಯಾವುದೇ ವ್ಯಕ್ತಿಯ ಹೆಸರಿನ್ನಿಟ್ಟಿಲ್ಲ. ಇದು ಇಲ್ಲೂ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಲಾಗುತ್ತಿದೆ. ಹೀಗಿದ್ದರೂ ಜಿಲ್ಲಾಡಳಿತ ಮಾತ್ರ ಇದೀಗ ಜಾಣತನದ ವರ್ತನೆಯನ್ನು ತೋರುತ್ತಿದೆ.
ಸರ್ಎಂವಿ ಹೆಸರು ಬೇಕು: ಕಸಾಪ, ಜಿಲ್ಲಾ ಛಾಯಾಚಿತ್ರ ಗ್ರಾಹಕರ ಸಂಘ, ಕರುನಾಡು ಸೇನೆ, ಕರವೇ, ರೈತ ಸಂಘ ಸೇರಿದಂತೆ ನಾನಾ ಸಂಘಟನೆಗಳು ಸಂಕೀರ್ಣಕ್ಕೆ ಸರ್ ಎಂ. ವಿಶ್ವೇಶ್ವರಯ್ಯನವರ ಹೆಸರಿಡಬೇಕೆಂದು ಒತ್ತಾಯಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

