ಕೋಲಾರ

ರೈತರಲ್ಲಿ ಭರವಸೆ ಮೂಡಿಸಿದ ಮಳೆ

Published On :

ಕ.ಪ್ರ.ವಾರ್ತೆ   ಕೋಲಾರ   ಸೆ.3
ಕಳೆದ ಮೂರು ದಿನಗಳಿಂದ ಬಯಲು ಸೀಮೆಗೆ ಸೇರಿದ ಕೋಲಾರ ಜಿಲ್ಲೆಯ ವಿವಿಧ ಕಡೆ ಮಳೆಯಾಗುತ್ತಿರುವುದರಿಂದ ರೈತರು ಸಂತಸಗೊಂಡಿದ್ದಾರೆ.
ಸೆ.1ರಿಂದ ಸೆ.3ರವರೆಗೆ ಬಂಗಾರಪೇಟೆ ತಾಲೂಕಿನಲ್ಲಿ 142.2 ಮಿ.ಮಿ., ಕೋಲಾರದಲ್ಲಿ 42.04 ಮಿ.ಮಿ.,ಮಾಲೂರಿನಲ್ಲಿ  49 ಮಿ.ಮಿ., ಮುಳಬಾಗಿಲು 85.04 ಮಿ.ಮಿ., ಹಾಗೂ ಶ್ರೀನಿವಾಸಪುರ ತಾಲೂಕಿನಲ್ಲಿ 95 ಮಿ.ಮಿ.ಮಳೆಯಾಗಿದೆ.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಒಟ್ಟು 414 ಮಿ.ಮಿ ಮಳೆಯಾಗಿದ್ದು ಕೋಲಾರ ಮತ್ತು ಮಾಲೂರಿನಲ್ಲಿ ಮಾತ್ರ ಕಡಿಮೆ ಮಳೆ ದಾಖಲಾಗಿದೆ.
ಬಂಗಾರಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದರು ಕೆರೆ-ಕುಂಟೆಗಳು ತುಂಬಿಲ್ಲ. ಇದಕ್ಕೆ ರಾಜ ಕಾಲುವೆಗಳ ಒತ್ತುವರಿಯೇ ಪ್ರಮುಖ ಕಾರಣ ಎಂಬುದು ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಕೋಲಾರ, ಮುಳಬಾಗಿಲು, ಮಾಲೂರು ಹಾಗೂ ಶ್ರೀನಿವಾಸಪುರದಲ್ಲಿ ಕಡಿಮೆ ಮಳೆಯಾಗಿದ್ದರೂ ರೈತರು ಭರವಸೆ ಹೊಂದಿದ್ದಾರೆ.
ಮಂಗಳವಾರ ರಾತ್ರಿ ಸಹ ಜಿಲ್ಲೆಯ ವಿವಿಧ ಕಡೆ ತುಂತರು ಮಳೆ ಬಿದ್ದಿದೆ. ಗೌರಿ-ಗಣೇಶ ಹಬ್ಬದವರೆಗೆ ಇದೇ ರೀತಿ ಮಳೆಯಾದಲ್ಲಿ ಸಣ್ಣ ಪುಟ್ಟ ಕೆರೆ ಕುಂಟೆಗಳು ಭರ್ತಿ ಆಗಬಹುದೆಂದು ರೈತರು ಆಶಾಭಾವನೆ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.