ಪತ್ರಿಕಾ ವಿತರಕರಿಗೆ ಗುಂಪು ವಿಮೆ'
ಮಾಲೂರು: ತಾಲೂಕಿನ ಪತ್ರಿಕಾ ವಿತರಕರಿಗೆ ತಾಲೂಕು ಪಂಚಾಯಿತಿಯಲ್ಲಿ ಗುಂಪು ವಿಮೆ ಮಾಡುವ ಅವಕಾಶ ದೂರಕಿಸಿಕೊಡುವ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಾಲೂಕು ಪಂಚಾಯಿತಿ ಸದಸ್ಯ ಎಸ್.ವಿ.ಲೋಕೇಶ್ ಭರವಸೆ ನೀಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಚುಟಕು ಸಾಹಿತ್ಯ ಪರಿಷತ್, ಕಸಾಪ ಹಾಗೂ ಪತ್ರಕರ್ತರ ಸಂಘದ ಸಹಕಾರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ವಿತರಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಕರ್ತರು ವರದಿ ಮಾಡಬಹುದು. ಆದರೆ ಅದು ಮುದ್ರಣವಾಗಿ ಬೆಳಗ್ಗಿನ ಜಾವ ಮಳೆ-ಚಳಿ ನಡುವೆ ಒದುಗರ ಮನೆ ತಲುಪಬೇಕಾದರೆ ವಿತರಕರ ಶ್ರಮವೇ ಕಾರಣ. ಅಸಂಘಟಿತ ಕಾರ್ಮಿಕರಂತೆ ದುಡಿಯುತ್ತಿರುವ ಪತ್ರಿಕಾ ವಿತರಕರಿಗೆ ಸರ್ಕಾರದಿಂದ ತಾಪಂ ಮೂಲಕ ಸಿಗಬಹುದಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಸಿಗುವಂತೆ ಮಾಡುವುದಾಗಿ ತಿಳಿಸಿದರು.
ಪತ್ರಕರ್ತ ಸಂಘದ ಅಧ್ಯಕ್ಷ ಎಂ.ವಿ.ರವೀಂದ್ರ ಮಾತನಾಡಿ, ಇಂದಿನ ವಾತಾವರಣದಲ್ಲಿ ಕಾಣೆಯಾಗುತ್ತಿರುವ ಸಮಯ ಪಾಲನೆ ಈಗ ಉಳಿದಿರುವುದು ಪತ್ರಿಕಾ ವಿತರಕರಲ್ಲಿ ಮಾತ್ರ. ಸೂರ್ಯನಂತೆ ವರ್ಷದ ಎಲ್ಲ ಕಾಲದಲ್ಲೂ ಮಳೆ-ಗಾಳಿ-ಚಳಿ ಎನ್ನದೆ ಬೆಳಗ್ಗಿನ ಜಾವ ಒದುಗರನ್ನು ತಲುಪಿಸುವ ಕಾಯಕದಲ್ಲಿ ತೂಡಗಿಸಿಕೊಂಡಿರುವ ವಿತರಕರು, ಸಕಾಲದಲ್ಲಿ ಪತ್ರಿಕೆಯನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಆಧಾರಸ್ತಂಭಗಳು: ಕಸಾಪ ಜಿಲ್ಲಾ ಕಾರ್ಯದರ್ಶಿ ಅಶ್ವಥ್ ರೆಡ್ಡಿ ಮಾತನಾಡಿ, ಸಮಾಜದ ಪ್ರತಿಭೆ-ಸಮಸ್ಯೆಗಳನ್ನು ಗುರ್ತಿಸುವ ಕೆಲಸ ವರದಿ ಮೂಲಕ ಪತ್ರಕರ್ತ ಮಾಡಿದರೆ, ಸಮಾಜಕ್ಕೆ ಸಕಾಲದಲ್ಲಿ ತಲುಪಿಸುವ ಕೆಲಸ ಪತ್ರಿಕಾ ವಿತರಕರು ಮಾಡುತ್ತಿದ್ದಾರೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಇಬ್ಬರು ಆಧಾರ ಸ್ತಂಭಗಳ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಪತ್ರಿಕಾ ರಂಗದಲ್ಲಿರುವವರು ಸಂಕುಚಿತ ಮನೋಭಾವ ವುಳ್ಳ, ಋಣಾತ್ಮಕ ಕಟ್ಟುಪಾಡುಗಳಿಗೆ ಒಳಗಾದ ಹಾಗೂ ಒಳ್ಳೆಯದನ್ನು ಸಹಿಸದ ಹೃದಯಗಳಿಂದ ಸಮಾಜದ ಸ್ವಾಸ್ಥ್ಯ ಕಳೆದುಹೋಗುತ್ತಿದೆ. ಸಮಾಜದಲ್ಲಿ ತಾವು ಇರುವ ಕಾಯಕದಲ್ಲಿ ಬದ್ಧತೆ ಪ್ರದರ್ಶಿಸಬೇಕು. ಋಣಾತ್ಮಕ ಮನಸ್ಥಿತಿಯನ್ನು ಬದಲಿಸಿಕೊಂಡು ಸಮಾಜ ಮುಖಿ ಧೋರಣೆ ಅಳವಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಿಕಾ ವಿತರಕರಾದ ಕೇಶವ ಮೂರ್ತಿ, ಶ್ರೀನಾಥ್ ಅವರನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು. ಪತ್ರಕರ್ತ ಸಂಘದ ಪವನ್ ರಮೇಶ್, ಜಿಲ್ಲಾ ಉಪಾಧ್ಯಕ್ಷ ರಾಜಗೋಪಾಲ್, ನಾರಾಯಣಸ್ವಾಮಿ ಮಾತನಾಡಿದರು. ಚುಟುಕು ಸಾಹಿತ್ಯ ಪರಿಷತ್ನ ಅಧ್ಯಕ್ಷ ಕುಂತೂರು ಚಂದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಸಂಘದ ಕಾರ್ಯದರ್ಶಿ ರವಿಕುಮಾರ್, ಕರವೇ ರಾಜು, ಬಾಲಕೃಷ್ಣ, ಶ್ರಿನಿಧಿ ಶ್ರೀನಿವಾಸ್, ಸಿರಾಜ್ ಅಹಮದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

