ಕೋಲಾರ

ಕಳಪೆ ಕಾಮಗಾರಿ: ದಿಢೀರ್ ಪ್ರತಿಭಟನೆ

Published On :

ಮಾಲೂರು: ಗುತ್ತಿಗೆದಾರ ಮರಳು ಬದಲಿಗೆ ಮಣ್ಣು ಬಳಸಿ ಚರಂಡಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಸಾರ್ವಜನಿಕರು ಕಾಮಗಾರಿಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದ ಘಟನೆ ಇಲ್ಲಿನ ವಾರ್ಡ್ ನಂ.4 ರಲ್ಲಿರುವ ಕುಂಬಾರ ಪೇಟೆ ಸರ್ಕಾರಿ ಶಾಲೆ ಬಳಿ ಬುಧವಾರ ನಡೆದಿದೆ.
ಇಲ್ಲಿನ ಪುರಸಭೆ ವತಿಯಿಂದ ಕುಂಬಾರಪೇಟೆ ಮುಖ್ಯರಸ್ತೆಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಫಿಲ್ಟರ್ ಮರಳು ಹೆಚ್ಚಿಗೆ ಬಳಸಿ ಕಾಮಗಾರಿ ನಡೆಸಲಾಗುತ್ತಿತ್ತು. ಕಾಮಗಾರಿಗೆ ಮರಳು ರೀತಿಯಲ್ಲಿರುವ ಮಣ್ಣನ್ನು ಸಿಮೆಂಟ್‌ನೊಂದಿಗೆ ಬೆರೆಸಿ ಡೆಸ್ಕ್‌ಸ್ಯಾಬ್ ನಿರ್ಮಿಸುತ್ತಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಸ್ಥಳದಲ್ಲಿದ್ದ ಗುತ್ತಿಗೆದಾರರನ್ನು ತರಾಟೆ ತೆಗೆದುಕೊಂಡರಲ್ಲದೆ, ಈ ಸಂಬಂಧ ಪುರಸಭೆಗೆ ದೂರನ್ನು ಸಹ ನೀಡಿದರು. ವಿಷಯ ತಿಳಿದ ಪುರಸಭೆ ಅಭಿಯಂತರ ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ತಿಳಿಸಿದರು. ನಂತರ ಮರಳನ್ನು ತರಿಸಿ ಕಾಮಗಾರಿ ಮುಂದುವರಿಸುವಂತೆ ಗುತ್ತಿಗೆದಾರರಿಗೆ ಆದೇಶಿಸಿದರು.
ಗುಣಮಟ್ಟ ಕಾಪಾಡಲು ಆಗ್ರಹ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ರೀತಿಯಲ್ಲಿ ಪುರಸಭೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪಟ್ಟಣದ ವಾಲ್ಮೀಕಿ ರಸ್ತೆಯಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯಲ್ಲಿ ಹಳೇ ಚರಂಡಿಯಲ್ಲಿದ್ದ ಚಪ್ಪಡಿ ಕಲ್ಲನ್ನು ಒಡೆದು ಹಾಕಿ ತೆಗೆಯಲಾಗುತ್ತಿದೆ.
ಹಲವೆಡೆ ಕಾಮಗಾರಿಯಲ್ಲಿ ಮರಳು ಬದಲು ಮಣ್ಣನ್ನು ಬಳಸಲಾಗುತ್ತಿದೆ. ಚರಂಡಿ ಕಾಮಗಾರಿಯ ಕಾಂಕ್ರೀಟ್‌ನಲ್ಲಿ ಕಂಬಿ ಬಳಕೆ ಅವಶ್ಯಕತೆಗಿಂತ ಬಹಳ ಕಡಿಮೆ ಉಪಯೋಗಿಸಲಾಗುತ್ತಿದೆ. ಈ ಬಗ್ಗೆ ಪುರಸಭೆ ತೋರುತ್ತಿರುವ ಜಾಣ ಕುರುಡು ಭವಿಷ್ಯದಲ್ಲಿ ಜನತೆ ಭಾರಿ ಬೆಲೆ ತರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪುರಸಭೆ ಮುಖ್ಯಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಮುಲಾಜಿಗೆ ಒಳಗಾಗದೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.