ಕೋಲಾರ

ಕಾಲು-ಬಾಯಿ ಜ್ವರ ನಿರೋಧಕ ಲಸಿಕೆ: ವೆಂಕಟೇಶ್

Published On :

ಬಾಗೇಪಲ್ಲಿ: ತಾಲೂಕಿನಾದ್ಯಂತ ರಾಸುಗಳಿಗೆ ಉಚಿತವಾಗಿ ಕಾಲು-ಬಾಯಿ ಜ್ವರ ನಿರೋಧಕ ಲಸಿಕೆ ಹಾಗೂ ಚುಚ್ಚುಮದ್ದು ನೀಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ತಾಲೂಕಿನ ರೈತರು ತಮ್ಮ ರಾಸುಗಳಿಗೆ ಲಸಿಕೆ ಮತ್ತು ಚುಚ್ಚುಮದ್ದು ಹಾಕಿಸುವ ಮೂಲಕ ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ವಿ. ವೆಂಕಟೇಶ್ ಮನವಿ ಮಾಡಿದ್ದಾರೆ. ತಾಲೂಕಿನಲ್ಲಿ ರಾಸುಗಳಿಗೆ ಕಾಲು-ಬಾಯಿ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ  ಸಂಯುಕ್ತ ಆಶ್ರಯದಲ್ಲಿ ರಾಸುಗಳಿಗೆ ಕಾಲು-ಬಾಯಿ ಜ್ವರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ರಾಸುಗಳಿಗೆ ಉಚಿತವಾಗಿ ಕಾಲು-ಬಾಯಿ ಜ್ವರ ನಿರೋಧಕ ಲಸಿಕೆ, ಚುಚ್ಚುಮದ್ದು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದೇ ರೀತಿಯಲ್ಲಿ ಸೆ.4ರಂದು ಗೊರ್ತಪಲ್ಲಿ, ವೀರಾಪುರ, ಶ್ರೀರಾಮಪುರ, ಗೊರ್ತಪಲಿ(ಕಾಲೋನಿ), ಕೃಷ್ಣಾಪುರ, ಸಜ್ಜೇಪಲ್ಲಿ, ದೊನ್ನೆಕೊಂಡ, ಡಿ.ಕೊತ್ತಪಲ್ಲಿ, ಜೀಕವಾಂಡ್ಲಪಲ್ಲಿ, ಸಾಕವಾಂಡ್ಲಪಲ್ಲಿ. ಸೆ.5ರಂದು-ದಿಗವಗೊಲ್ಲಪಲ್ಲಿ, ಉಗ್ರಾಣಂಪಲ್ಲಿ, ಬಾಬೇನಾಯ್ಕನ ತಾಂಡಾ, ಯಗವತಾಂಡ, ಯರ್ರಗಾನಪಲ್ಲಿ, ಮಲ್ಲೇಪಲ್ಲಿ, ಬಿಳ್ಳೂರು, ಕೊತ್ತೂರು, ಗದ್ಗವಾಂಡ್ಲಪಲ್ಲಿ, ಬೋಯಿಪಲ್ಲಿ. ಸೆ.6ರಂದು- ಇಂದುಕೊರೋಳ್ಳಪಲ್ಲಿ, ಸುಜ್ಞಾನಂಪಲ್ಲಿ, ದಿಗಿನೇಪಲ್ಲಿ, ಅಡವಿಕೊತ್ತೂರು, ನಂದಪ್ಪಗಾರಿಪಲ್ಲಿ, ಯರ್ರಪೆಂಟ್ಲ, ಹನುಮಂತಪುರ, ಬಂಡಕಿಂದಪಲ್ಲಿ, ವಂಗಾರ್‌ಲಪಲ್ಲಿ, ಗೌರವಾಂಡ್ಲಪಲ್ಲಿ. ಸೆ.7ರಂದು-ಗೊಲ್ಲಪಲ್ಲಿ, ನಗುರ್‌ಲು, ತೋಳ್ಳಪಲ್ಲಿ, ಗುಮ್ಮನಾಯಕನಪಾಳ್ಯ, ತುಂಗೇಟಿ ದಿನ್ನ, ಆಗಟಿಮಡಕ, ಪೆದ್ದರೆಡ್ಡಿಪಲ್ಲಿ, ಗೊಮ್ಮವಾಂಡ್ಲಪಲ್ಲಿ, ಕೊಂಡರೆಡ್ಡಿಪಲ್ಲಿ, ಕಲ್ಲಿಪಲ್ಲಿ. ಸೆ.8ರಂದು-ರಾಜವಾಂಡ್ಲಪಲ್ಲಿ, ಕೊತ್ತಕೋಟವಾಂಡ್ಲಪಲ್ಲಿ, ಕುರುವಪಲ್ಲಿ, ಸೋಮನಾಥಪುರ, ಬೂದಿಲಿಪಲ್ಲಿ, ನಕ್ಕಲಪಲ್ಲಿ, ಸೀಮನ್ನಗಾರಿಪಲ್ಲಿ, ಸೀಗಲಪಲ್ಲಿ, ಗುಂಟಮಾರಪಲ್ಲಿ, ಯಲಗಲಪಲ್ಲಿ, ಬೈರೆಗೊಲ್ಲಪಲ್ಲಿ. ಸೆ.10ರಂದು-ಗಾದಿವಾಂಡ್ಲಪಲ್ಲಿ, ಕುರುಬರಹಳ್ಳಿ, ಚಿನ್ನಗಾನಪಲ್ಲಿ, ದೊಡ್ಡವಾರಿಪಲ್ಲಿ, ಮಂಗಳಮಡುಗುವಾರಪಲ್ಲಿ, ಶಿವಪುರ, ರಾಚವಾರಪಲ್ಲಿ, ಗೊಟ್ಟಹಳ್ಳಿ, ಮೂಗಿರೆಡ್‌ಡಿಪಲ್ಲಿ, ಮೂಗಿರೆಡ್‌ಡಿಪಲ್ಲಿ ತಾಂಡ. ಸೆ.11ರಂದು ಕದಿರ್‌ನಗಾರಿ ಕೋಟ, ಧೋರಣಲಪಲ್ಲಿ, ಆರ್.ನಲ್ಲಗುಟ್ಲಪಲ್ಲಿ, ಮಾಮಿಡಿಕಾಯಿಲಪಲ್ಲಿ, ದೇವರಮಾಕಲಪಲ್ಲಿ, ಪೈಳೋಳ್ಳಪಲ್ಲಿ, ಅರಿಗೆವಾರಿಗುಟ್ಟ, ಒಂಟರಿವಾಂಡ್ಲಪಲ್ಲಿ, ರಾಮಾನುಪಾಡಿ, ಬೆಸ್ತಲಪಲ್ಲಿ. ಸೆ.12ರಂದು ನಾರಾಯಣಪಲ್ಲಿ, ರಾಮಸ್ವಾಮಿಪಲ್ಲಿ, ರಾಶ್ಚೆರುವು, ಕೊಂಡೂರುಪಲ್ಲಿ, ಸೋಮಾಕಲಪಲ್ಲಿ, ಮುಸಿಲಿಗಾನಪಲ್ಲಿ, ಗಡ್ಡಂಪಲ್ಲಿ, ತುರಿಕೇಶಿಪಲ್ಲಿ, ಕಲ್ಲೂರೋಳ್ಳಪಲ್ಲಿ, ಕೊತ್ತಪಲ್ಲಿ ಗ್ರಾಮಗಳಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಉಚಿತವಾಗಿ ರಾಸುಗಳಿಗೆ ಲಸಿಕೆ ಮತ್ತು ಚಚ್ಚುಮದ್ದು ಹಾಕಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.