ಕೋಲಾರ ಪತ್ರಿಕಾ ವಿತರಕರ ದಿನಾಚರಣೆ
ಕೋಲಾರ: ಪತ್ರಿಕಾ ವಿತರಣೆ ದಿನಾಚರಣೆ ಅಂಗವಾಗಿ ಕೋಲಾರ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದಿಂದ ಹಿರಿಯ ಪತ್ರಿಕಾ ವಿತರಕರಾಗಿದ್ದ ಬಿ.ಎ. ಗೋಪಾಲಗುಪ್ತ ರವರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತಾಡಿದಂತಹ ಹಿರಿಯ ಪತ್ರಿಕಾ ವಿತರಕರಾದ ಬಿ.ವಿ. ಗೋಪಾಲಗುಪ್ತ ರವರು ಪತ್ರಿಕಾ ವಿತರಕರು ಯಾವುದೇ ಜಗಳ ಮಾಡಿಕೊಳ್ಳದೆ ಹೊಂದಾಣಿಕೆಯಿಂದ ವ್ಯಾಪಾರ ನಡೆಸಿಕೊಂಡು ಹೋಗುವಂತೆ ಎಲ್ಲಾ ಏಜೆಂಟರಿಗೆ ಕಿವಿ ಮಾತು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಅವರು ಪತ್ರಿಕಾ ವಿತರಕರಿಗೆ ಜಿಲ್ಲಾ ಪತ್ರಕರ್ತರ ಸಂಘದ ಸಹಕಾರ ಎಂಬುದು ಸದಾ ಇರುತ್ತದೆ ಅದನ್ನು ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೆ.ಎಸ್. ಗಣೇಶ್ ಅವರು ಪತ್ರಿಕೆ ವಿತರಕರು ತುಂಬಾ ಶ್ರಮ ಪಡುತ್ತಾರೆ. ಮಳೆ ಗಾಳಿ ಚಳಿ ಎನ್ನದೆ ಪತ್ರಿಕೆ ಹಂಚುತ್ತಾರೆಂದು ಎಂದು ನುಡಿದರು.
ಹಿರಿಯ ಪತ್ರಕರ್ತ ವಾಸುದೇವಹೊಳ್ಳರವರು ಮಾತನಾಡಿ ಇದೇ ಮೊದಲ ಬಾರಿಗೆ ಪತ್ರಿಕಾ ದಿನಾಚರಣೆ ಆರಂಭಿಸಿದ್ದಾರೆ ಪ್ರತಿವರ್ಷ ಹೀಗೆ ಇದೇ ರೀತಿ ಆಚರಣೆ ಮಾಡಿಕೊಂಡು ಹೋಗಲು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಿ. ರಮೇಶ್, ಉಪಾಧ್ಯಕ್ಷರಾದ ಸಿ. ರಮೇಶ್, ಕಾರ್ಯದರ್ಶಿ ಎನ್. ಮಂಜುನಾಥ್, ಖಜಾಂಚಿ ವಿಜಯ್ಕುಮಾರ್, ಮಾಜಿ ಅಧ್ಯಕ್ಷಶ್ರೀನಿವಾಸಶೆಟ್ಟಿ, ಶ್ರೀನಿವಾಸಮೂರ್ತಿ, ಕಾರಂತ್, ಸಾಗರ್, ಹರೀಶ್, ಎಸ್.ಕೆ. ಮಂಜುನಾಥ್, ಎಂ. ಮಂಜುನಾಥ್, ಮಹದೇವಪ್ಪ, ಮುನಿರಾಜು, ಅನೀಲ್, ರಾಜಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

