ನ್ಯೂ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಗುಡಿಬಂಡೆ: ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಆಯೋಜಿಸಿದ್ದ ಮನರಂಜನಾ ಕ್ರೀಡೆಗಳನ್ನು ನಡೆಸಿ ವಿಶೇಷವಾಗಿ ಶಿಕ್ಷಕರ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ಪಿ.ಎನ್. ರಾಜಶೇಖರ್ ಒಳ-ಹೊರಗಿನ ಅಂಧಕಾರವನ್ನು ದೂರ ಮಾಡಿ ಬೆಳಕಿನಡೆಗೆ ಕರೆದೊಯ್ಯುವ ಕಾರ್ಯ ಶಿಕ್ಷಕರು ಮಾಡುತ್ತಿದ್ದು, ಉತ್ತಮ ಸಮಾಜವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಂದಿನ ಶಿಕ್ಷಕ ವರ್ಗ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಕರಾಗಬೇಕೆಂದರು. ಈ ನಿಟ್ಟಿನಲ್ಲಿ ಅವರ ದಿನಾಚರಣೆಯನ್ನೇ ಶಿಕ್ಷಕರ ದಿನಾಚರಣೆ ಎಂದು ಆಚರಿಸಲಾಗುತ್ತಿದೆ ಎಂದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಗೌರಿಬಿದನೂರು ಪ್ರೌಢಶಾಲೆಯ ಶಿಕ್ಷಕ ಆದರ್ಶ ಮಕ್ಕಳಿಗೆ ಯಾರು ಒಳ್ಳೆಯ ವಿದ್ಯೆಯನ್ನು ನೀಡಿ ಸಮಾಜಕ್ಕೆ ಒಬ್ಬ ಒಳ್ಳೆಯ ಪ್ರಜೆಯನ್ನಾಗಿ ನೀಡುತ್ತಾನೊ ಅಂತಹ ಶಿಕ್ಷಕನನ್ನು ತಂದೆ ತಾಯಿಂಗಿಂತಲೂ ಹೆಚ್ಚಿನ ಮಹತ್ವದ ಸ್ಥಾನ ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಡಿ.ಎಲ್. ಪರಿಮಳ, ಗಂಗಾಧರ, ಬಾಬಾಜಾನ್, ಶ್ರೀನಾಥ್, ಮೊಹಸೀನ, ಅಶ್ವತ್ಥಪ್ಪ, ಸುಶೀಲ, ಅಶ್ವತ್ಥಮ್ಮ, ನೇತ್ರಾವತಿ, ಪಿ.ಬಿ. ಗೋಪಾಲಕೃಷ್ಣ, ಪೂರ್ಣಿಮಾ, ನಸ್ರೀನ್ ತಾಜ್, ಮಂಜುಳ, ಶ್ರೀನಾಥ್, ಶ್ರೀನಿವಾಸ, ಮುನಿರಾಜು ಸೇರಿದಂತೆ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

