ಮಕ್ಕಳಲ್ಲಿ ಮೌಲ್ಯ ಹೆಚ್ಚಿಸಿ
ಕೋಲಾರ: ಉತ್ತಮ ಸಮಾಜ ನಿರ್ಮಾಣದಲ್ಲಿ ಗುರುಗಳ ಪಾತ್ರ ಮಹತ್ವದ್ದು, ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುವ ಮೂಲಕ ದೇಶದ ಭವಿಷ್ಯ ಉಜ್ವಲಗೊಳಿಸಿ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಶಿಕ್ಷಕರಿಗೆ ಕರೆ ನೀಡಿದರು.
ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಗುರುವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಭಾರತ ರತ್ನ ಡಾ.ಎಸ್. ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲಿ ಮೌಲ್ಯಗಳು ವೃದ್ಧಿಸುವುದು ಗುರುಗಳ ಪರಿಶ್ರಮದಿಂದ ಅದೇ ರೀತಿ ಪ್ರತಿಯೊಬ್ಬರ ಜೀವನ ಸುಗಮ ಹಾದಿಯಲ್ಲಿ ಸಾಗಬೇಕಾದರೆ ಗುರುವಿನ ಮಾರ್ಗದರ್ಶನ ಮುಖ್ಯವಾಗಿರುತ್ತದೆ ಎಂದರು. ಮಕ್ಕಳಿಗೆ ಪಾಠ-ಪ್ರವಚನದ ಜೊತೆಗೆ ನಮ್ಮ ದೇಶದ ಸಂವಿಧಾನ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದ ಮೌಲ್ಯಗಳು ಕುಸಿಯುವಂತಾಗಿದೆ, ಮಕ್ಕಳಲ್ಲಿ ಮೌಲ್ಯಗಳು ಪುನಶ್:ೇತನಗೊಳಿಸುವ ಕೆಲಸ ಶಿಕ್ಷಕರಿಂದಾಗಬೇಕೆಂದು ಸಲಹೆ ನೀಡಿದರು.
ಈ ಹಿಂದೆ ಶಿಕ್ಷಕರು ಮಕ್ಕಳಿಗೆ ಮೌಲ್ಯಗಳ ಜೊತೆಗೆ ಅಭಿವೃದ್ಧಿ ಕಾರ್ಯದಲ್ಲಿ ಆಸಕ್ತಿ ಮೂಡಿಸುತ್ತಿದ್ದರು, ಹಾಗಾಗಿ ಅನೇಕ ಕಲ್ಯಾಣಿಗಳು, ಕುಂಟೆಗಳು ಅನೇಕ ಕಡೆ ಉಳಿಯುವಂತಾಗಿದೆ. ಜಿಲ್ಲೆಯ ಪ್ರತಿಯೊಬ್ಬ ಶಿಕ್ಷಕರು ಸಹ ತಮ್ಮ ಸುತ್ತ ಮುತ್ತಲಿನ ಕೆರೆ, ಕಲ್ಯಾಣಿಗಳ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಜಿಲ್ಲೆಯ ಜನಪ್ರತಿನಿಧಿಗಳು ಗೈರು ಹಾಜರಾಗಿದ್ದರು.ಜಿ.ಪಂ ಹಂಗಾಮಿ ಅಧ್ಯಕ್ಷ ಜಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸಿಇಒ ಎಸ್.ಎಂ. ಝುಲ್ಫಿಖಾರ್ ಉಲ್ಲಾ, ತಾ.ಪಂ ಅಧ್ಯಕ್ಷೆ ಸಿ. ಭಾಗ್ಯಲಕ್ಷ್ಮೀ, ಉಪಾಧ್ಯಕ್ಷೆ ಸರಸ್ವತಿ, ಜಿಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಪ್ರಾಂಶುಪಾಲ ಎನ್. ಆಂಜಿನಪ್ಪ, ಮುನಿಯಪ್ಪ, ಶಿಕ್ಷಣಾಧಿಕಾರಿಗಳಾದ ಜಯರಾಮರೆಡ್ಡಿ, ಸಿದ್ದಲಿಂಗಯ್ಯ, ಬಿಇಓ ಶಿವಲಿಂಗಯ್ಯ, ನಾಗೇಂದ್ರ ಪ್ರಸಾದ್, ವೆಂಕಟಶಿವಪ್ಪ, ನಾಗರಾಜು, ಗೋಪಾಲರೆಡ್ಡಿ, ರಾಮಚಂದ್ರ ಇದ್ದರು.
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರಾದ ಎಲ್.ಎ.ವಿಜಯಕುಮಾರ್, ಜಿ.ವಿ. ರಾಮಚಂದ್ರಪ್ಪ, ಆನಂದಕುಮಾರ್, ಕೆ.ಎಂ. ರಾಜಪ್ಪ, ಸುಬ್ಬರಾಯಪ್ಪ, ವಿ. ಕಿಟ್ಟಣ್ಣ, ಕೆ.ವಿ. ಜಗನ್ನಾಥ, ಪ್ರೌಢಶಾಲಾ ಶಿಕ್ಷಕರಾದ ನಿರ್ಮಲ, ರುದ್ರಪ್ಪ, ವೀರಭದ್ರಚಾರಿ, ಅನ್ವರ್ ಉಲ್ಲಸನ್ ಹಾಗೂ ಟಿ.ವಿ. ಬೈರೆಡ್ಡಿ ಅವನ್ನು ಜಿಲ್ಲಾಧಿಕಾರಿ ಡಿ.ಕೆ. ರವಿ ಸನ್ಮಾನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

