ಕೋಲಾರ

ವೃತ್ತಿಯಲ್ಲಿ ಕೀಳರಿಮೆ ಬೇಡ: ಡಾ. ಶಿವರಾಮರೆಡ್ಡಿ

Published On :

ಗೌರಿಬಿದನೂರು: ಮಕ್ಕಳನ್ನು ಪ್ರತಿಭಾವಂತ ಪ್ರಜೆಗಳನ್ನಾಗಿ ಮಾಡಿ ಜಗತ್ತಿನ ಶ್ರೇಷ್ಠ ವ್ಯಕ್ತಿಗಳನ್ನು ಮಾಡುತ್ತಿರುವ ಹೆಮ್ಮೆಯ ಸೇವೆ ಶಿಕ್ಷಣಸೇವೆ. ಈ ಸೇವೆಯನ್ನು ಸಲ್ಲಿಸುತ್ತಿರುವವರು ಹೆಮ್ಮೆಯಿಂದ ಗೌರವದಿಂದ ಅನುಭವಿಸಿ ಯಾವುದೇ ಕೀಳರಿಮೆ ಬೇಡ ಎಂದು ಚಿಕ್ಕಬಳ್ಳಾಪುರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎನ್. ಶಿವರಾಮರೆಡ್ಡಿ ಕರೆ ನೀಡಿದರು.
ಇಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಡಾ.ಎಸ್. ರಾಧಾಕೃಷ್ಣನ್ 125ನೇ ಜಯಂತಿ ಹಾಗೂ 51ನೇ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.
ಒಬ್ಬ ಸಾಮಾನ್ಯ ಬಡ ಶಿಕ್ಷಕ ನಮ್ಮ ದೇಶದ ಶ್ರೇಷ್ಠ ಶಿಕ್ಷಕನಾಗಿ, ರಾಷ್ಟ್ರಪತಿಯಾಗಿ, ಅಂತಾರಾಷ್ಟ್ರೀಯ ವ್ಯಕ್ತಿಯಾಗಿದ್ದು ಪ್ರತಿಭೆಗೆ ಸಿಕ್ಕ ಗೌರವವಾಗಿದೆ ಎಂದರು.
ಪೊಲೀಸ್, ಕಂದಾಯ, ಆರ್.ಟಿಓ ಮುಂತಾದ ಇಲಾಖೆಗಳಲ್ಲಿ ಕೆಲಸ ಮಾಡುವವರು ಹೆಚ್ಚು ಹಣ ಸಂಪಾದಿಸುತ್ತಾರೆ. ಆದರೆ ಒಬ್ಬ ಬಡಶಿಕ್ಷಕನ ಸಂಬಳ ಇಂದು ಜೀವನ ನಡೆಸುವುದು ಕಷ್ಟ ನಮ್ಮ ಮಕ್ಕಳೇ ಸಾಫ್ಟ್‌ವೇರ್ ಉದ್ಯೋಗಿಗಳಾಗಿ ಲಕ್ಷದಷ್ಟು ಸಂಬಳ ಪಡೆಯುತ್ತಿರುವ ನಮಗೆ ಕೀಳರಿಮೆ ಉಂಟಾಗುವುದು ಸಹಜ. ಆದರೆ ಸೇವೆ ಹಿಂದೆ ಇರುವ ಗೌರವ ಆದರ್ಶ ಗುರುವಿನ ಸ್ಥಾನಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಅಂತಹ ಸ್ಥಾನವನ್ನು ಉಳಿಸಿಕೊಳ್ಳಬೇಕು ನಾವು ನಮ್ಮ ಶಿಕ್ಷರ ಆದರ್ಶಪಾಲಿಸಿ ಅವರಿಗೆ ಗೌರವಿಸಿದರೆ ನಮ್ಮ ಶಿಷ್ಯರು ನಮಗೆ ಗೌರವಿಸುತ್ತಾರೆ ಎಂದರು.
ಜಿ.ಪಂ. ಉಪಾಧ್ಯಕ್ಷ ರಾಘವೇಂದ್ರ ಹನುಮಾನ್ ಮಾತನಾಡಿ ನಮ್ಮ ಉತ್ತಮ ಪ್ರಜೆಗಳನ್ನು ಮಾಡಿದ ಶಿಕ್ಷಕರಿಗೆ ಹಾಗೂ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಮಸ್ಯೆಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.
ವಿಧಾನಸಭಾ ಉಪಾಧ್ಯಕ್ಷ, ಎನ್.ಹೆಚ್. ಶಿವಶಂಕರ ರೆಡ್ಡಿ ಮಾತನಾಡಿ ಡಾ.ಎಸ್. ರಾಧಾಕೃಷ್ಣನ್ ಅವರ ಜೀವನ ಆದರ್ಶಗಳು ಇಂದಿಗೂ ಶಿಕ್ಷಕರಿಗೆ ಮಾರ್ಗದರ್ಶವಾಗಿದ್ದು ಅವರ ಹಾಕಿದ ಆದರ್ಶ, ಸರಳತೆ ದೂರದೃಷ್ಟಿತ್ವ ಶಿಕ್ಷಕ ವೃತ್ತಿಯ ಗೌರವ ಶಿಸ್ತನ್ನು ಉಳಿಸಿಕೊಂಡಲ್ಲಿ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಹಾಗೂ ಗುಣಮಟ್ಟ ಹೊಂದಲು ಸಾಧ್ಯ ಎಂದರು.
ಗೌರಿಬಿದನೂರಿನಲ್ಲಿ ಗುರುಭವನ ಕಟ್ಟಿಸಲು ನಿಮಗೆ ಇಚ್ಛಾಶಕ್ತಿ ಇಲ್ಲ. ಇನ್ನು ಮೂರು ತಿಂಗಳಲ್ಲಿ ಗುರುಭವನ ಕಟ್ಟಿಸಲು ಮುಂದೆಬರದಿದ್ದಲ್ಲಿ ಗುರುಭವನಕ್ಕೆ ನೀಡಿರುವ ನಿವೇಶನವನ್ನು ಬೇರೆ ಇಲಾಖೆಗೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಶಿಕ್ಷರು ಗುರುಭವನಕ್ಕೆ ತಮ್ಮ ದೇಣಿಗೆಯನ್ನು ಘೋಷಿಸುವ ಮೂಲಕ ಸ್ಥಳದಲ್ಲಿಯೇ 5ರಿಂದ 25ಸಾವಿರವರೆಗೂ ದಾನ ನೀಡಿ ಒಟ್ಟು 1ಲಕ್ಷ 50ಸಾವಿರ ದೇಣಿಗೆ ಸಂಗ್ರಹಿಸಲಾಯಿತು.
ನಿವೃತ್ತಿ ಶಿಕ್ಷಕರಿಗೆ ಸನ್ಮಾನ, ನಿಧನ ಹೊಂದಿದ ಶಿಕ್ಷಕರ ಕುಟುಂಬದವರಿಗೆ ಸನ್ಮಾನ ಹಾಗೂ ಕ್ರೀಡಾಚಟುವಟಿಕೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ತಾ.ಪಂ. ಅಧ್ಯಕ್ಷ ನಿರಂಜನ್, ಉಪಾಧ್ಯಕ್ಷೆ ಜಲಜ ಚಂದ್ರಶೇಖರ್,  ಜಿ.ಪಂ. ಸದಸ್ಯರಾದ ಸಿ.ಆರ್. ನರಸಿಂಹಮೂರ್ತಿ, ಕೇಶವರೆಡ್ಡಿ, ವೇಣುಗೋಪಾಲ್ ರೆಡ್ಡಿ, ಬೊಮ್ಮಣ್ಣ, ಪ್ರಕಾಶ್ ರೆಡ್ಡಿ, ವಿ.ಪಿ. ನಾರಾಯಣಗೌಡ, ಜಿ.ವಿ. ಕೃಷ್ಣಮೂರ್ತಿ, ಜಿ.ಕೆ.ಸತೀಶ್, ಪುರಸಭಾ ಸದಸ್ಯರಾದ ನರಸಿಂಹಮೂರ್ತಿ, ರಮೇಶ್, ಮಾರ್ಕೆಟ್ ಮೋಹನ್, ಸುಭಾನ್, ಮುನಿರಾಜು, ಚಿದಾನಂದಗುಪ್ತ, ತಹಶೀಲ್ದಾರ್ ಡಾ.ಭಾಸ್ಕರ್, ರೆಡ್ಡಪ್ಪ, ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ಪದಾಧಿಕಾರಿಗಳಾದ ರಾಂಬಾಬು, ಸಂಜೀವರಾಯಪ್ಪ, ಬಾಲಪ್ಪ, ಲಿಂಗಪ್ಪ ಶಿಕ್ಷರ ಸಂಘದ ಅಧ್ಯಕ್ಷ ಸಿದ್ಧರಾಮಯ್ಯ ಸ್ವಾಗತಿಸಿ  ಜನಾರ್ಧನಮೂರ್ತಿ ಶಿವಣ್ಣ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.