ಕೋಲಾರ

ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್ ಸೂಕ್ತ

Published On :

ಮಾಲೂರು: ದೇಶದಲ್ಲಿ ಇಂಗ್ಲಿಷ್ ಭಾಷೆ ಹಾಸುಹೊಕ್ಕಾಗಿ ಅನಿರ್ವಾಯತೆ ಸೃಷ್ಟಿ ಮಾಡಿರುವ ಹಿನ್ನೆಲೆಯಲ್ಲಿ ನಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್ ಕಲಿಸುವುದು ಸೂಕ್ತ ಎಂದು ಶಾಸಕ ಕೆ.ಎಸ್. ಮಂಜುನಾಥ್ ಹೇಳಿದರು.
ಪಟ್ಟಣದ ಹೊರವಲಯ ಹೂಸೂರು ರಸ್ತೆಯಲ್ಲಿರುವ ಆರ್.ಜೆ. ಕನ್ವೆಂಕ್ಷನ್ ಹಾಲ್‌ನಲ್ಲಿ ಗುರುವಾರ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕನ್ನಡ ನಮ್ಮ ಅಧಿಕೃತ ಭಾಷೆಯಾಗಿದ್ದರೂ ಇಂಗ್ಲಿಷ್‌ಗೆ ಸಿಕ್ಕಿರುವ ಮಾನ್ಯತೆ ಕನ್ನಡಕ್ಕೆ ಸಿಗುತ್ತಿಲ್ಲ.ಇಂತಹ ವಾಸ್ತವ ಪರಿಸ್ಥಿತಿಯಲ್ಲಿ ಪ್ರಾಥಮಿಕ ಹಂತದಲ್ಲೇ ಇಂಗ್ಲಿಷ್ ಕಲಿಸುವ ಮೂಲಕ ರಾಜ್ಯ ಸರ್ಕಾರವು ನಮ್ಮ ಶಿಕ್ಷಣ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದರು.
ಪಟ್ಟಣದಲ್ಲಿ ಶಿಕ್ಷಕರ ಬಹು ವರ್ಷಗಳ ಬೇಡಿಕೆಯಾದ ಗುರುಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹತ್ತು ಲಕ್ಷ ರು.ನೀಡುವುದಾಗಿ ಘೋಷಿಸಿದ ಶಾಸಕರು ತಾಲೂಕು ಇಟ್ಟಿಗೆ ಕಾರ್ಖಾನೆ ಮಾಲೀಕರು 40 ಸಾವಿರ ಇಟ್ಟಿಗೆಯನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾ.ಪಂ. ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡುತ್ತ ದೇಶದ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಹೆಚ್ಚಿರುವುದರಿಂದ ದೇಶದ ಉನ್ನತಿಕರಣಕ್ಕೆ  ಜೈ ಜವಾನ್, ಜೈಕಿಸಾನ್ ಎಂದು ಹೇಳುವ ನಾವೂ ಜತೆಯಲ್ಲಿ ಜೈ ಗುರೂಜಿ ಎಂದು ಸಂಭೋದಿಸಬೇಕಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುಂಡಪ್ಪ ಮಾತನಾಡಿ ದರು.
ರಾಜ್ಯ ಪ್ರಶಸ್ತಿ ಪಡೆದ ಹಾಗೂ ನಿವೃತ್ತಿ ಹೂಂದಿದ್ದ ಶಿಕ್ಷಕರನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು.ಶಾಸಕ ಮಂಜುನಾಥ್ ಅವರು ಶಿಕ್ಷಕರೊಡನೆ ಸಂವಾದ ನಡೆಸಿ ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿದರು. ತಾ.ಪಂ. ಸದಸ್ಯ ಗೋಪಾಲ್‌ಗೌಡ, ಕೆಂಪಣ್ಣ, ಮುನಿನಾರಾಯಣ್ ಮಾತನಾಡಿದರು.ತಾ.ಪಂ. ಉಪಾಧ್ಯಕ್ಷೆ ರಾಜಮ್ಮ, ಜಿ.ಪಂ. ಮಾಜಿ ಸದಸ್ಯರಾದ ಪಿ.ನಾರಾಯಣಸ್ವಾಮಿ, ಆ. ಹನುಮಂತಪ್ಪ, ತಾ.ಪಂ. ಸದಸ್ಯ ಮೂರ್ತಿ,ಎಪಿಎಂಸಿ ಅಧ್ಯಕ್ಷ ಮಹೇಶ್‌ಬಾಬು,ಅಶ್ವಥ್ ನಾರಾಯಣ್ ಗೌಡ, ಜಯರಾಂ, ಆಂಜಿನಪ್ಪ, ಎ.ಕೆ. ವೆಂಕಟೇಶ್, ನರಸಿಂಹ, ಅದಿಲಕ್ಷ್ಮಿ, ಬಿಇಒ ಸುಬ್ರಮಣ್ಯ ಸ್ವಾಗತಿಸಿದರು. ಜಿ.ಪಂ. ಎಇಇ ಭದ್ರಿನಾಥ್, ಪಾಪಣ್ಣ,ಬಹುದ್ದೂರ್,ಸೂರ್ಯನಾರಯಣ್ ರಾವ್, ಮುನಿರಾಜು, ಮುನಿಸ್ವಾಮಿ, ಪರಮೇಶ್, ಚಿನ್ನಸ್ನಾಮಿಗೌಡ ಇದ್ದರು. ಬಿಇಒ ಸುಬ್ರಮಣ್ಯ ಸ್ವಾಗತಿಸಿದರು. ಪ್ರಸನ್ನಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.