ವಿಧಾನಸೌಧ ಭ್ರಷ್ಟಾಚಾರದ ಕೂಪ: ಶಾಸಕ ಮಂಜುನಾಥ್
ಮಾಲೂರು: ವಿಧಾನಸೌಧ ಭ್ರಷ್ಠಾಚಾರದ ಕೂಪವಾಗಿದ್ದು, ನನ್ನಂತಹ ಯುವಕರಿಗೆ ರಾಜಕೀಯವು ಭ್ರಮನಿರಶನವಾಗಿದೆ ಎಂದು ಶಾಸಕ ಕೆ.ಎಸ್. ಮಂಜುನಾಥ್ ಅವರು ಗಂಭೀರವಾದ ಆರೋಪ ಮಾಡಿದ ಘಟನೆ ಗುರುವಾರ ಇಲ್ಲಿನ ಶಿಕ್ಷಕರ ದಿನಾಚರಣೆಯಲ್ಲಿ ನಡೆದಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಇಲ್ಲಿನ ಆರ್.ಜೆ. ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಶಾಸಕರು ಶಿಕ್ಷಕರೂಡನೆ ಸಂವಾದ ಮಾಡುವ ಮುನ್ನ ಮನಬಿಚ್ಚಿ ಮಾತನಾಡುತ್ತ ಅವರು, ಹಲವರು ಆದರ್ಶಗಳ ಕನಸು ಕಾಣುತ್ತ ರಾಜಕೀಯಕ್ಕೆ ಬಂದ ನನಗೆ ಇಂದಿನ ರಾಜಕೀಯ ವ್ಯವಸ್ಥೆ ಕಂಡು ಬೇಜಾರಾಗಿದೆ.ಹೂರಗಿನಿಂದ ಸುಂದರವಾಗಿ ಕಾಣುವ ವಿಧಾನ ಸೌಧದ ಒಳಗೆ ಸಂಪೂರ್ಣ ಭ್ರಷ್ಠಚಾರಮಯವಾಗಿದೆ.ಒಂದು ಗ್ರಾಮಲೆಕ್ಕಿಗನ ವರ್ಗಾವಣೆಗೆ ಕೋಟ್ಯಾಂತರ ರು.ಗಳನ್ನು ಲಂಚದ ರೂಪದಲ್ಲಿ ನೀಡಬೇಕಾಗಿದೆ.ರಾಜ್ಯದ ಜನತೆಯ ಸಮಸ್ಯೆಗಳಿಗೆ ಪರಿಹಾರ ಹುಡುಲು ಇರುವ ವಿಧಾನಸೌಧವು ಲಂಚ ಹೇಗೆ ಪಡೆಯಬೇಕೆಂಬದನ್ನು ನನ್ನಂತಹ ಶಾಸಕರಿಗೆ ತೋರಿಸಿಕೊಡುತ್ತಿದೆ.ಕೇವಲ 30-40 ಎಕರೆಯಲ್ಲಿರುವ ವಿಧಾನಸೌಧವನ್ನೇ ನಾವು ಲಂಚಾಮುಕ್ತರಾಗಿ ಮಾಡಲು ಸಾಧ್ಯವಾಗುತ್ತಿಲ್ಲ.ಇನ್ನೂ ಕೋಟ್ಯಂತರ ಮೀ. ವಿಸ್ತೀರ್ಣ ಹೊಂದಿರುವ ನಮ್ಮ ರಾಜ್ಯದಲ್ಲಿ ಲಂಚತನ ನಿರ್ಮೂಲನೆ ಹೇಗೆ ಸಾಧ್ಯ ಎಂದು ಅತ್ಮವಿಮರ್ಶನೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

